– ನಮ್ಮ ಪಕ್ಷವೂ ಸ್ವಚ್ಛ ಆಗ್ಬೇಕು, ನಿಮ್ಮ ಪಕ್ಷವೂ ಸ್ವಚ್ಛ ಆಗ್ಬೇಕು ಅಂದ್ರು ಯತ್ನಾಳ್
ಬೆಂಗಳೂರು: ವಿಧಾನ ಮಂಡಲ ಮುಂಗಾರು ಅಧಿವೇಶನ (Karnataka Assembly Session) ಇಂದಿನಿಂದ ಶುರುವಾಗಿದೆ. ನಿರೀಕ್ಷೆಯಂತೆ ವಾಲ್ಮೀಕಿ ನಿಗಮದ ಹಗರಣ (Valmiki Scam) ಪ್ರತಿಧ್ವನಿಸಿದೆ.
Advertisement
ದಲಿತರ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ ಈ ಬಗ್ಗೆ ಚರ್ಚೆ ಆಗ್ಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಒತ್ತಾಯಿಸಿದರು. ಪ್ರಶ್ನೋತ್ತರ ಅವಧಿ ಮುಗಿದ ನಂತರ ಮಾತಾಡಿ ಚರ್ಚೆಗೆ ರೆಡಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದರು. ಪ್ರಶ್ನೋತ್ತರ ಕಲಾಪದ ಬಳಿಕ ಬಿಜೆಪಿಯ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೊಡೋದಾಗಿ ಸ್ಪೀಕರ್ ರೂಲಿಂಗ್ ಕೊಟ್ಟರು. ಅದರಂತೆ, ಪ್ರಶ್ನೋತ್ತರ ಕಲಾಪ ಮುಗಿಯುವವರೆಗೂ ಸುಮ್ಮನಿದ್ದ ಬಿಜೆಪಿ ಆಮೇಲೆ ಸರ್ಕಾರದ ವಿರುದ್ಧ ಮುಗಿಬಿದ್ದಿತು.
Advertisement
Advertisement
ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ. ಸತ್ತಿರುವ ಚಂದ್ರಶೇಖರನ್ ದಲಿತ, ಲೂಟಿ ಆಗಿರೋದು ದಲಿತರ ಹಣ, 187 ಕೋಟಿ ರೂ. ಹಣ ಕಟಾಕಟ್ ಅಂತ ವರ್ಗಾವಣೆ ಆದಾಗ ಸರ್ಕಾರ ಕಣ್ಮುಚ್ಚಿ ಕೂತಿತ್ತು ಎಂದು ಅಶೋಕ್ ವಾಗ್ದಾಳಿ ನಡೆಸಿದರು. ಇದಕ್ಕೆ, ವರ್ಗಾವಣೆ ಮಾಡು ಅಂತ ನಾನು ಹೇಳಿದ್ನಾ? ಸದನಕ್ಕೆ ಏನೇನೋ ತಪ್ಪು ಮಾಹಿತಿ ನೀಡ್ಬೇಡಿ. ವರ್ಗಾವಣೆ ಆಗಿರೋದು 187 ಕೋಟಿಯಲ್ಲ, 89.62 ಕೋಟಿ ರೂ. ಅಂತ, ಸದನಕ್ಕೆ ತಪ್ಪು ಮಾಹಿತಿ ಕೊಡಬೇಡಿ ಅಂತ ಸಿಎಂ ಗರಂ ಆದರು. ಅಲ್ಲಿಗೆ ಒಪ್ಕೊಂಡಂತೆ ಆಯ್ತಲ್ಲ ಎಂದು ಬಿಜೆಪಿಗರು ಘೋಷಣೆ ಕೂಗಿದರು. ಇದಕ್ಕೆ ಮತ್ತೆ ಸಿಎಂ ಸ್ಪಷ್ಟೀಕರಣ ಕೊಟ್ಟರು. ಇದನ್ನೂ ಓದಿ: ಜೈಲಿನಲ್ಲಿರೋ ಇಮ್ರಾನ್ ಖಾನ್‌ಗೆ ಮತ್ತೆ ಶಾಕ್ – ದೇಶ ವಿರೋಧಿ ಚಟುವಟಿಕೆ ಆರೋಪದಡಿ ಪಿಟಿಐ ನಿಷೇಧ!
Advertisement
ಲೂಟಿಯನ್ನು ಯಾರೂ ಒಪ್ಪಿಕೊಂಡಿಲ್ಲ. ಇದು ಇ.ಡಿ ಅವರು ಹೇಳಿರುವುದು ಅಷ್ಟೇ. ಇದು ಒಪ್ಪಿತ ಸತ್ಯವಲ್ಲ ಎಂದು ಹೇಳಿದರು. ಈ ವೇಳೆ ಡಿಕೆ ಶಿವಕುಮಾರ್ ಮತ್ತು ಅಶೋಕ್ ನಡುವೆ ಒಂದಿಷ್ಟು ಜಟಾಪಟಿ ನಡೆಯಿತು. ಇದಕ್ಕೂ ಮುನ್ನ, ಯತ್ನಾಳ್ ಹಾಗೂ ಸಿಎಂ ಮಧ್ಯೆ ಮಾತಿನ ಸಮರ ನಡೀತು. ಪರಿಷತ್‌ನಲ್ಲೂ ಸಿಎಂ ರಾಜೀನಾಮೆ ಒತ್ತಾಯಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿದವು. ಇದನ್ನೂ ಓದಿ: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅರೆಸ್ಟ್; 2 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!
ಯತ್ನಾಳ್-ಸಿಎಂ ಮಾತಿನ ಜಟಾಪಟಿ:
ವಾಲ್ಮೀಕಿ ಹಗರಣ ವಿಚಾರದಲ್ಲಿ ಸಿಎಂ, ಯತ್ನಾಳ್ ನಡುವೆ ಮಾತಿನ ಜಟಾಪಟಿ ನಡೆಯಿತು. ವಾಲ್ಮೀಕಿ ಹಗರಣದ ಚರ್ಚೆಗೆ ಸಿಎಂ ಆಗ್ರಹಿಸುತ್ತಿದ್ದಂತೆ ಬಿಜೆಪಿಯ ಡಿ.ಎಸ್ ವೀರಯ್ಯ ಅರೆಸ್ಟ್ ಆಗಿದ್ದಾರಲ್ಲ, ಅದರ ಬಗ್ಗೆ ಹೇಳ್ರೀ ಅಂತ ಬಿಜೆಪಿಗೆ ಟಾಂಗ್ ಕೊಟ್ಟರು. ಈ ವೇಳೆ ಅಡ್ಜಸ್ಟ್‌ಮೆಂಟ್ ಬೇಕಿಲ್ಲ, ನಮ್ಮ ಪಕ್ಷವೂ ಸ್ವಚ್ಛ ಆಗಬೇಕು, ನಿಮ್ಮ ಪಕ್ಷವೂ ಸ್ವಚ್ಛ ಆಗಬೇಕು ಅಂತ ಯತ್ನಾಳ್ ಗುಡುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹೇ ಯತ್ನಾಳ್ ನಿಮಗೆ ಸೀರಿಯಸ್‌ನೆಸ್ ಇಲ್ಲ, ಏನ್ ಮಾತಾಡ್ತೀರಿ, ಯಾವಾಗ ಯಾವ ನಿಲುವು ತಗೋತೀರಿ ಅಂತ ನಿಮಗೇ ಗೊತ್ತಿರಲ್ಲ. ನಿಮ್ಮ ಪಕ್ಷದಲ್ಲಿ ಸಿಎಂ ಆಗೋದಕ್ಕೆ ಎರಡೂವರೆ ಸಾವಿರ ಕೋಟಿ ಕೊಡಬೇಕು ಅಂದಿದ್ರಿ. ಪುನಃ ಅಲ್ಲಿಂದ ಹಿಂದಕ್ಕೇ ಹೋದ್ರಿ. ನಿಮ್ಮ ಸರ್ಕಾರ ಇದ್ದಾಗ ಯಾಕೆ ಸಿಬಿಐ ತನಿಖೆಗೆ ಕೊಡಲಿಲ್ಲ ಎಂದು ಟಾಂಗ್ ಕೊಟ್ಟರು.