ಹಾಯ್ ಅಮೃತ…. ನಿನಗೊಂದು ವಿಷಯ ಹೇಳ್ಬೇಕು ಅಂತ ತುಂಬಾ ದಿನದಿಂದ ಅಂದ್ಕೊಳ್ತಿದ್ದೆ.. ಇವತ್ತು ಟೈಂ ಬಂತು ನೋಡು..! ಈ ವಿಚಾರ ಹೇಳೋಕೆ ತುಂಬಾ ಸಲ ಪತ್ರ ಬರೆದು ಧೈರ್ಯ ಸಾಲದೇ ಹರಿದು ಹಾಕಿದ್ದೆ.. ಹೀಗೆ ಇದ್ರೆ ಆಗಲ್ಲ.. ನಿನ್ನನ್ನ ನನ್ನ ಜೊತೆ ಸಂಗಾತಿಯಾಗಿಸಿಕೊಳ್ಳುವ ಮೊದಲ ಪ್ರಯತ್ನವಾಗಿ.. ಈ ಪತ್ರ ಬರೆದು ಕಳಿಸಿದಿನಿ..
ನೆನಪಿದಿಯಾ ನಿಂಗೆ, ಅವತ್ತು ಕಾಲೇಜ್ ಕಾರಿಡಾರ್‌ಲ್ಲಿ ನಿನ್ನ ನೆತ್ತಿ ಮೇಲಿಂದ ಬಿದ್ದ ಗುಲಾಬಿಯನ್ನ ಅದೆಷ್ಟು ಹುಡುಕಿದ್ದೆ ನೀನು.. ಕೊನೆಗೂ ಅದು ಸಿಗದೇ ಎಲ್ಲೋಯ್ತೋ ಅಂತ ಸಪ್ಪೆ ಮುಖ ಮಾಡ್ಕೊಂಡಿದ್ದೆ..! ಆ ಗುಲಾಬಿ ಇವತ್ತು ಸಿಕ್ತು, ಅದನ್ನ ಪುಸ್ತಕದ ನಡುವೆ ಇಟ್ಟಿದ್ದೆ… ನಾನೇ ಅದನ್ನ ಕದ್ದಿದ್ದೆ.. ನಿನ್ನ ಜೊತೆ ಸೇರ್ಕೊಂಡು ಅವತ್ತು ಹುಡುಕೋ ನಾಟಕಾನೂ ಆಡಿದ್ದೆ.. ಇವತ್ತು ಮತ್ತೆ ಅದನ್ನ ನೋಡಿದ್ಮೇಲೆ.. ನನ್ನ ಮನಸ್ಸಲ್ಲಿರೋ ಪ್ರೇಮದ ಹೂ ಮತ್ತಷ್ಟು ಅರಳ್ತಿದೆ.. ಇದನ್ನೂ ಓದಿ: ಹೃದಯದಂಗಳಕೆ ಒಲವ ರಂಗೋಲಿ ನೀನು..!
ಆ ಗುಲಾಬಿಗೆ ಇನ್ನೂ ನಿನ್ನದೇ ಪರಿಮಳ ಇದೆ.. ಆ ಪರಿಮಳ ಜಗತ್ತಿನ ಯಾವ ಸುಗಂಧದಲ್ಲೂ ಇಲ್ಲ.. ಹಾಗೇ ಕೆಲವೆಲ್ಲ ಒಂದಕ್ಕೆ ಮಾತ್ರ ಸೀಮಿತ.. ಕೋಟಿ ಕೊಟ್ರು ಅದು ಸಿಗಲ್ಲ… ಹಾಗೇ ನೀನು ಅಷ್ಟೇ… ನಿನ್ನ ಮುಡಿಯಿಂದ ಆದ ಪ್ರಸಾದಕ್ಕೂ ಅಷ್ಟೇ.. ನನ್ನ ಪಾಲಿಗೆ… ಬೇರೆ ಆಯ್ಕೆಯೇ ಇಲ್ಲ..! ಇದನ್ನೂ ಓದಿ: ಇದಕ್ಕೆಲ್ಲ ಯಾವ ಸಂಬಂಧದ ಹೆಸರಿಡ್ಬೇಡ ಪ್ಲೀಸ್!
ಅದೆಂತಾ ಮಾಯಾವಿ ನೀನು… ಪ್ರೇಮ ಅನ್ನೋ ಬಣ್ಣನಾ ಮೈ.. ಮನಸ್ಸಿಗೆಲ್ಲ ವಿಸ್ಮಯ ಅನ್ನೋ ಹಾಗೆ ಹಚ್ಬಿಟ್ಟೆ! ಈಗ ಹೇಳು.. ನಿಜವಾಗಲೂ ಕಳ್ಳ ನಾನಾ..? ಹೃದಯ ಕದ್ದ ನೀನಾ? ಹೀಗೆ ವಿವರಿಸ್ತಾ ಹೋದ್ರೆ ಇದೆಲ್ಲ ಒಂದು ಪತ್ರದಲ್ಲಿ ಬರೆದು ಮುಗಿಸುವ ಸಾಲುಗಳಲ್ಲ… ಇಷ್ಟೆಲ್ಲ ಹೇಳಿದ್ಮೇಲೆ ಮತ್ತೇನಾದ್ರೂ ಹೇಳ್ಬೇಕಾ..? ಹೇಳು..
ನೀನೇನಾದ್ರೂ ಸಿಕ್ಬಿಟ್ಟೆ ಅಂದ್ಕೋ.. ನಿನ್ನ ಕಣ್ಣಿನ ಕಾಡಿಗೆಗೆ ಮಾತ್ರ ಗ್ಯಾರಂಟಿ… ನಿನ್ನ ತುಟಿ ಮೇಲಿನ ಲಿಪ್ಸ್ಟಿಕ್‌ಗೆ ಅಲ್ಲ.. ಅಷ್ಟೊಂದು ಕಾಡ್ತೀನಿ..!! ಇದನ್ನೂ ಓದಿ: ಮನದ ಮೂಲೆಯಲ್ಲಿ ಸೆರಗು ಜಾರಿದಾಗ!
– ಗೋಪಾಲಕೃಷ್ಣ



