ಬೆಂಗಳೂರು: ಪ್ರೇಮಿಗಳು ಕಾತುರದಿಂದ ಕಾಯ್ತಾ ಇದ್ದ ದಿನ ಬಂದೇ ಬಿಡ್ತು. ತಮ್ಮ ಪ್ರೀತಿ ನಿವೇದನೆಯನ್ನ ಹೇಳಿಕೊಳ್ಳೋ ಕಾಲ ಇವತ್ತು ಬಂದಿದೆ. ವಾಲೆಂಟೆನ್ಸ್ ಡೇ (Valentines Day) ಹಿನ್ನೆಲೆ ರೋಸ್ (Red Rose) ಗಳಿಗೆ ಸಿಲಿಕಾನ್ ಸಿಟಿಯಲ್ಲಿ ಫುಲ್ ಡಿಮ್ಯಾಂಡ್ ಹೆಚ್ಚಾಗಿದೆ.
Advertisement
ಪ್ರೇಮಿಗಳ ಹೃದಯ ಇನ್ನಷ್ಟು ಸನ್ನಿಹವಾಗುವ ಕಾಲ ಮತ್ತೆ ಬಂದಿದೆ. ಪ್ರೇಮಿಗಳ ದಿನದ ಹಿನ್ನೆಲೆ ಪ್ರೀತಿ ಸಂಕೇತವಾಗಿರುವ ಗುಲಾಬಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಐದಾರು ದಿನಗಳಿಂದ ಹೂವಿನ ಲೋಕವೇ ಧರೆಗಿಳಿದಿದೆ. ಇದನ್ನೂ ಓದಿ: Valentine’s Day: `ಹೃದಯವೆ ಬಯಸಿದೆ ನಿನ್ನನೇ…’
Advertisement
Advertisement
ಇಂದು ತಮ್ಮ ನೆಚ್ಚಿನ ಹುಡುಗ, ಹುಡುಗಿಗೆ ರೋಸ್ ಕೊಟ್ಟು ತಮ್ಮ ಪ್ರೇಮ ನೀವೇದನೆಯನ್ನ ಹೇಳಿಕೊಳ್ಳುತ್ತಾರೆ. ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಮಾರ್ಕೆಟ್ ಗೆ ತರಹೇವಾರಿ ಗುಲಾಬಿ ಹೂಗಳು ಲಗ್ಗೆ ಇಟ್ಟಿವೆ. ನೋಡುಗರನ್ನ ಗುಲಾಬಿ ಹೂಗಳು ಕಣ್ಮಣಿ ಸೆಳೆಯುತ್ತೇವೆ. ಕಲರ್ ಕಲರ್ ಗುಲಾಬಿಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ರೆಡ್ ರೋಸ್‍ನ ಬೆಲೆ ಗಗನಕ್ಕೆರಿದೆ.ಸಾಮಾನ್ಯ ದಿವಸಗಳಲ್ಲಿ ಒಂದು ರೋಸ್ 10 ರೂ.ಗೆ ಮಾರಾಟವಾಗ್ತಿದ್ರೆ, ಇವತ್ತು ಡೇಕೋರೇಟಿವ್ ರೋಸ್ ಬೆಲೆ 100 ರಿಂದ 200 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ವ್ಯಾಪರಸ್ಥರು ಹೇಳುತ್ತಿದ್ದಾರೆ.
Advertisement
ಈ ರೋಸ್ ಗಳಲ್ಲೇ ವಿವಿಧ ಡೆಕೋರೇಷನ್ ಗಳಲ್ಲಿ ಬೊಕ್ಕೆ ತಯಾರಿಸಲಾಗುತ್ತಿದೆ. ಚಾಕ್ಲೇಟ್ ರೋಸ್ ಬೊಕ್ಕೆ, ಬೆಲೂನ್ ರೋಸ್ ಬೊಕ್ಕೆ, ಹಾರ್ಟ್ ಶೇಪ್ ರೋಸ್ ಬೊಕ್ಕೆ, ಡ್ಯಾನ್ಸಿಂಗ್ ಹಾರ್ಟ್ ಬೊಕ್ಕೆ ಹೀಗೆ ವ್ಯಾಲೆಂಟೆನ್ಸ್ ಪ್ರಯುಕ್ತ ರೋಸ್ ಗಳಲ್ಲೇ ಕಲರ್ ಫುಲ್ ಅಲಂಕಾರಗಳನ್ನು ಮಾಡಲಾಗಿದೆ. ಇವುಗಳು ಕಣ್ಣು ಕುಕ್ಕುವ ರೀತಿಯಲ್ಲಿ ಮಾರುಕಟ್ಟೆಗೆ ಆಗಮಿಸಿವೆ. ಜೊತೆಗೆ ಕಪಲ್ಸ್ ಟಿ ಕಪ್, ಮ್ಯಾಗ್ನೆಟಿಕ್ ಬ್ರಾಸ್ಲೈಟ್, ಟೆಡ್ಡಿ ಬಿಯರ್, ಹಾರ್ಟ್ ಚಾಕ್ಲೇಟ್, ಕಾಂಬೊಗಳು ಟೆಡ್ಡಿ ಮಿಕ್ಸ್ ಕೊಂಬೊಗಳು ಪ್ರೇಮಿಗಳನ್ನ ಆಕರ್ಷಿಸುತ್ತಿವೆ. ಈ ರೋಸ್ ಉಡುಗೊರೆಗಳ ಬೆಲೆ ಹತ್ತು ಸಾವಿರದವರೆಗೂ ಇದೆ. ಮಲ್ಲೇಶ್ವರಂ ಮಾರ್ಕೇಟ್ ನಲ್ಲಿ ಒಂದು ರೋಸ್ ಗೆ ಇಂದು 30-60 ರೂಪಾಯಿ ಆಗಿದೆ ಎಂದು ಹೂವು ವ್ಯಾಪಾರಿ ಬಸವರಾಜ್ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k