ಪ್ರೀತಿ.. ಮೊಹಬ್ಬತ್.. ಇಷ್ಕ್.. ಈ ಪದ ಕೇಳಿದ್ರೆನೇ ಒಂತರ ರೋಮಾಂಚನ ಆಗುತ್ತೆ.. ದೇಹದಲ್ಲಿ ರಪ್ ಅಂತ ಕರೆಂಟ್ ಪಾಸ್ ಆಗುತ್ತೆ ಇದು ಅತಿಶಯೋಕ್ತಿ ಅನ್ನಿಸಿದರೂ ಇದೇ ಸತ್ಯ.. ಯಾಕಂದ್ರೆ ಪ್ರೀತಿಗೆ ಇರೋ ಶಕ್ತಿ ಜಗತ್ತಿನಲ್ಲಿ ಮತ್ಯಾವುದಕ್ಕೂ ಇಲ್ಲ.. ಪ್ರೀತಿಯಿಂದ ನಾವು ಏನನ್ನೂ ಬೇಕಾದ್ರೂ ಗೆಲ್ಲಬಹುದು..ಇಂತಹ ಪ್ರೀತಿಗೆನೇ ಒಂದು ವಿಶೇಷ ದಿನ ಮೀಸಲು ಇಟ್ಟಿದ್ದಾರೆ ನಮ್ಮ ಹಿರೀಕರು.. ಅಂತಹ ಬ್ಯೂಟಿಫುಲ್ ದಿನ ಬಂತೆ ಬಿಡ್ತು ನೋಡಿ.. ನಾಳೆ ಫೆಬ್ರವರಿ 14 ಈ ಭೂಮಿ ಮೇಲೆ ಪ್ರೀತಿ ಮಾಡೋ ಎಲ್ಲರ ದಿನ.. ಮನುಷ್ಯ ಅಂದ್ರೆ ಯಾವ್ದಾದ್ರೂ ಒಂದು ಕ್ಷಣ ಆದ್ರೂ ಪ್ರೀತಿ ಮಾಡಿರಲೇಬೇಕು ಅದೇ ಪ್ರೇಮಿಗಳ ದಿನ.. ಪ್ರೇಮಿಗಳಿಂದ.. ಪ್ರೇಮಿಗಳಿಗಾಗಿ…ಪ್ರೇಮಿಗಳಿಗೋಸ್ಕರ ಇರುವ ದಿನ..
ಪ್ರೇಮಿಗಳ ದಿನ ಎನ್ನುವುದು ಪ್ರೀತಿಗೆ ಮೀಸಲಾಗಿರುವ ದಿನ. ಪ್ರೇಮಿಗಳು ಬಹುಕಾಲದಿಂದ ತಮ್ಮ ಮನಸಲ್ಲಿ ಬಚ್ಚಿಟ್ಟು ಕೊಂಡ ಪ್ರೀತಿಯನ್ನು ವ್ಯಕ್ತಪಡಿಸುವ ದಿನ.. ಈ ದಿನ ಪ್ರೇಮಿಗಳು ತಮ್ಮ ಸಂಗಾತಿ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಮನದ ಮಾತುಗಳನ್ನ ಪರಸ್ಪರ ಮುಕ್ತವಾಗಿ ಹಂಚಿಕೊಳ್ಳಲು ಇದೊಂದು ವಿಶೇಷ ದಿನವಾಗಿದೆ. ಅದ್ಭುತ ಪ್ರೀತಿಗೊಂದು ಹೊಸ ರೂಪ ಸಿಗುವ ದಿನ ಇದು. ಪ್ರೇಮ ಲೋಕದಲ್ಲಿ ತೇಲಾಡುವ ಯುವ ಜೋಡಿಗಳಿಗೆ ವಿಶೇಷವಾಗಿ ದಿನ ಕಳೆಯುವ ಹಂಬಲವಿರುತ್ತದೆ. ಅದು ಲವ್ ಬರ್ಡ್ಸ್ ಗಳಂತೆ ಹಾರಾಡುವ ಜೋಡಿಗಳು ಪಾರ್ಕ್, ಪಾರ್ಟಿ, ಡಿನ್ನರ್ ಹೀಗೆ ಹಲವು ರೀತಿಯಲ್ಲಿ ದಿನ ಕಳೆಯುತ್ತಾರೆ.
Advertisement
ಹಿಂದೆಲ್ಲ ಪ್ರೇಮಿಗಳ ದಿನವನ್ನು ಯಾರು ಸಹ ಅಷ್ಟಾಗಿ ಆಚರಿಸುತ್ತಿರಲಿಲ್ಲ. ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತಿದೆ. ಎಳೆ ವಯಸಿನಲ್ಲೇ ಪ್ರೀತಿ ಚಿಗುರೊಡೆದು ತಮ್ಮದೇ ಪ್ರಪಂಚದಲ್ಲಿ ಹಾರಾಡುತ್ತಿರುತ್ತಾರೆ. ಪ್ರೀತಿಗೆ ಕೊನೆಯಿಲ್ಲ. ಪ್ರೇಮಿಗಳಿಗೆ ಎಲ್ಲಾ ದಿನವೂ ಖುಷಿಯ ಹಬ್ಬವಾಗಿರುತ್ತದೆ. ಇಂತಹ ವ್ಯಾಲೆಂಟೈನ್ಸ್ ಡೇ ದಿವಸ ಹುಡುಗರಿಗಿಂತಲೂ ಹುಡುಗಿಯರಿಗೆ ಹೆಚ್ಚು ವಿಶೇಷವಾಗಿರುತ್ತದೆ. ತಮ್ಮ ಗೆಳೆಯನನ್ನು ಭೇಟಿಯಾಗುವ ವಿಶೇಷ ದಿನದಂದು ಆತನಿಗೆ ನಾನು ಅಪ್ಸರೆಯಂತೆ ಕಾಣಬೇಕು ಎಂಬೆಲ್ಲ ಆಸೆಗಳಿರುತ್ತದೆ.
Advertisement
ಹುಡುಗೀರಂತು ಅಡಿಯಿಂದ ಮುಡಿಯವರೆಗೂ ಚೆಂದ ಕಾಣಿಸಲು ಹಂಬಲಿಸುತ್ತಾರೆ. ಬಿಂದಿಯಿಂದ ಹಿಡಿದು ಚಪ್ಪಲಿಯವರೆಗೆ ವಿಶೇಷವಾಗಿ ಇರಬೇಕೆಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹೆಣ್ಮಕ್ಕಳಿಗಂತು ಡ್ರೆಸ್ ಯಿಂದ ಹಿಡಿದು ಎಲ್ಲಾ ಮ್ಯಾಚಿಂಗ್ ಆಗಿರಬೇಕು. ನೋಡೋ ಕಣ್ಣಿನಿಂದ ಹಿಡಿದು ಉಗುರಿಗೆ ಹಾಕೋ ನೈಲ್ ಪಾಲಿಶ್ ಕೂಡ ಇಷ್ಟ ಆಗ್ಬೇಕು. ಅಬ್ಬಬ್ಬಾ .. ಈಗಿನ ಕಾಲದಲ್ಲಿ ಒಂದು ನೈಲ್ ಪಾಲಿಷ್ ಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಆದ್ರೂ ಬೇರೆ ಬೇರೆ ರೀತಿ ವಿನ್ಯಾಸಗಳನ್ನು ಮಾಡಿಸ್ತಾರೆ. ಕೃತಕ ಉಗುರುಗಳನ್ನು ಇಟ್ಟು ಅದಕ್ಕೆ ಬಣ್ಣ ಬಣ್ಣದ ನೈಲ್ ಪಾಲಿಶ್ ಹಚ್ಚಿ ತಮ್ಮ ಉಗುರಿನ ಮೂಲಕವೇ ತಮ್ಮ ಮನದ ಹುಡುಗನನ್ನು ಗಮನ ಸೆಳೆಯುತ್ತಾರೆ.
Advertisement
ನೈಲ್ ಪಾಲಿಶ್ ಗೂ ವ್ಯಾಲೆಂಟೈನ್ಸ್ ಡೇಗೂ ಏನು ಸಂಬಂಧ ಇದೆ ಯಾಕಂದ್ರೆ ಹೆಣ್ಣು ಮಕ್ಕಳು ಹೆಚ್ಚು ಕಾಳಜಿ ವಹಿಸುವುದು ತಮ್ಮ ಕೈ ಕಾಲಿನ ಉಗುರುಗಳು ಚೆನ್ನಾಗಿ ಕಾಣಬೇಕು ಎಂದು. ಆ ಮೂಲಕ ಅವರ ಹುಡುಗರ ಎದೆಯಲ್ಲಿ ಬೆರಳ ತುದಿಯಲ್ಲೇ ಚಿತ್ತಾರ ಬಿಡಿಸಲು ಕಾಯುತ್ತಿರುತ್ತಾಳೆ. ಈಗಿನ ಕಾಲದ ಹುಡುಗೀರು ಬ್ಯೂಟಿ ಪಾರ್ಲರ್ ಹೋದರಂತೂ ಪೆಡಿಕ್ಯೂರ್, ನೈಲ್ ಆರ್ಟ್ ಅಂತ ಉಗುರುಗಳ ಕಾಳಜಿ ಮಾಡುತ್ತ ಇರುತ್ತಾರೆ. ಇಷ್ಟೆಲ್ಲಾ ಕೇರ್ ಮಾಡುವ ಉಗುರುಗಳು ವ್ಯಾಲೆಂಟೈನ್ಸ್ ಡೇ ದಿನ ವಿಶೇಷವಾಗಿರಿಸಲು ಇಲ್ಲಿದೆ ಹೊಸ ನೈಟ್ ಆರ್ಟ್ ಡಿಸೈನ್.
Advertisement
1. ವೈಟ್ ನೈಲ್ ಪಾಲಿಶ್ (White Nail polish)
ಬಿಳಿ ಪರಿಶುದ್ಧತೆಯ ಸಂಕೇತ. ಈ ವೈಟ್ ನೈಲ್ ಪಾಲಿಶ್ ನಿಮ್ಮ ಉಗುರಿನ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಲ್ಲದೆ ಇದು ಎಲ್ಲಾ ಪ್ರೀತಿಯ ಡ್ರೆಸ್ ಗಳಿಗೆ ಕೂಡ ಮ್ಯಾಚ್ ಆಗುತ್ತದೆ. ನಿಮ್ಮ ಉಗುರುಗಳಿಗೆ ಕ್ಲಾಸಿಕ್ ಲುಕ್ ನೀಡುತ್ತದೆ. ಹೆಚ್ಚಿನ ಮಾಡಲ್ಸ್ ಮತ್ತು ಸಿನಿ ತಾರೆಯರು ಬಿಳಿ ಬಣ್ಣದ ನೈಲ್ ಪಾಲಿಶ್ಗಳನ್ನ ಹೆಚ್ಚು ಇಷ್ಟಪಡುತ್ತಾರೆ.
2. ಸ್ಲೋಪ್ ಹಾರ್ಟ್ ನೈಲ್ ಪಾಲಿಶ್ (Slope heart nail Polish)
ಈ ನೈಲ್ ಆರ್ಟ್ ಮನದೊಳಗಿನ ಪ್ರೀತಿಯನ್ನು ಹೇಳುತ್ತದೆ. ಗುಲಾಬಿ ಬಣ್ಣದ ನೈಲ್ ಪಾಲಿಶ್ ಗಳ ಮೇಲೆ ಕೆಂಪು ಹಾರ್ಟ್ ಚಿತ್ರವು ಪ್ರೇಮಿಗಳ ದಿನದಂದು ಹೇಳಿ ಮಾಡಿಸಿದ ನೈಲ್ ಆರ್ಟ್ ಡಿಸೈನ್ ಆಗಿದೆ. ಇದು ವಿ ಆಕಾರದ ಉಗುರುಗಳಿಗೆ ಹೆಚ್ಚು ಸೊಗಸಾಗಿ ಕಾಣುತ್ತದೆ. ಅಲ್ಲದೆ ಬಿಳಿ ಬಣ್ಣದ ನೈಲ್ ಪಾಲಿಶ್ ಗಳ ಮೇಲೆ ರೆಡ್ ಹೃದಯದ ಚಿತ್ರವು ಉಗುರಿನ ಅಂದವನ್ನು ಹೆಚ್ಚಿಸುತ್ತದೆ. ಸಣ್ಣ ಹೃದಯದ ಆಕಾರವು ತುಂಬಾ ಸರಳವಾಗಿ, ಕ್ಲಾಸಿಯಾಗಿ ಕಾಣುತ್ತದೆ ಮತ್ತು ಕಡಿಮೆ ವಿನ್ಯಾಸವು ಹೈ-ಶೈನ್ ಟಾಪ್ ಕೋಟ್‌ನಂತಹ ಡಿಸೈನ್ಗಳಿಗಿಂತಲೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
3. ಮೋನೋಕ್ರೋಮ್ ಹಾರ್ಟ್ (Monochrome heart)
ಫ್ರೆಂಚ್ ಸ್ಟೈಲ್ ಉಗುರುಗಳಿಗೆ ಈ ಮೋನೋಕ್ರೋಮ್ ಹಾರ್ಟ್ ಚೆನ್ನಾಗಿ ಕಾಣುತ್ತದೆ. ಉಗುರಿನ ಮೇಲೆ ಒಂದೊಂದೆ ಹೃದಯದ ಚಿತ್ರವನ್ನು ಬಿಡಿಸಬೇಕು. ಪ್ರತಿ ಉಗುರಿಗೆ ಗುಲಾಬಿ ಅಥವಾ ಕೆಂಪು ಬಣ್ಣವನ್ನು ಆಯ್ಕೆ ಮಾಡಬಹುದು. ನೀವು ಲೈಟ್ ಕಲರ್ ನೈಲ್ ಪಾಲಿಶ್ ಗೆ ಡಾರ್ಕ್ ಬಣ್ಣದಲ್ಲಿ ಹೃದಯದ ಚಿತ್ರ ಬಿಡಿಸಿದರೆ ನಿಮ್ಮ ಕೈಗಳಿಗೆ ಸ್ಟೈಲಿಶ್ ಲುಕ್ ನೀಡುತ್ತದೆ.
4. ಗ್ಲಿಟರ್ ನೈಲ್ಸ್ (Glitter Nails)
ಈ ಗ್ಲಿಟರ್ ನೈಲ್ ನಿಮ್ಮ ಉಗುರುಗಳನ್ನು ಹೊಳಪಿನಿಂದ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ. ನಿಮ್ಮ ಉಗುರಿಗೆ ಬೋಲ್ಡ್ ಲುಕ್ ನೀಡುತ್ತದೆ. ಈ ಗ್ಲಿಟರ್ ನೈಲ್ಸ್ ಇದೀಗ ಹೆಚ್ಚು ಟ್ರೆಂಡ್ನಲ್ಲಿದ್ದು, ಹಾಲಿವುಡ್, ಬಾಲಿವುಡ್ ನಟಿಯರು ಸಹ ಈ ನೈಲ್ಸ್ ಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ನಾಲ್ಕು ಉಗುರುಗಳಿಗೆ ಒಂದು ಬಣ್ಣ ಹಚ್ಚಿ ಇನ್ನೊಂದು ಉಗುರಿಗೆ ಬರೀ ಗ್ಲಿಟರ್ ಹಚ್ಚುತ್ತಾರೆ.
5. ಮ್ಯಾಟ್ ನೈಲ್ಸ್ (Matte Nails)
ಈ ಮ್ಯಾಟ್ ನೈಲ್ಸ್ ಕೂಡಾ ಇತ್ತೀಚೆಗೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಉಗುರುಗಳಿಗೆ ಹೆಚ್ಚು ಹೊಳಪನ್ನು ಬಯಸದೆ ಇರುವವರು ಇಂತಹ ಮ್ಯಾಟ್ ನೈಲ್ಸ್ ಗಳನ್ನು ಇಷ್ಟಪಡುತ್ತಾರೆ. ಇದು ಒಂದು ರೀತಿಯ ಡಾರ್ಕ್ ಬಣ್ಣಗಳಿಗೆ ಹೆಚ್ಚು ಚಂದ ಕಾಣುತ್ತದೆ. ಅಲ್ಲದೆ ನಿಮ್ಮ ಉಗುರುಗಳಿಗೆ ಕಾಸಿ ಹಾಗೂ ಬೋಲ್ಡ್ ಲುಕ್ ನೀಡುತ್ತದೆ. ಇದು ಸಾಮಾನ್ಯವಾಗಿ ಎಲ್ಲರ ಕೈಗಳಿಗೂ ಚೆನ್ನಾಗಿ ಕಾಣಿಸುತ್ತದೆ.
ಎಲ್ಲಾ ಬ್ಯೂಟಿಫುಲ್ ಗರ್ಲ್ಸ್ ನಿಮ್ಮ ಪಾರ್ಟ್ನರ್ ಜೊತೆ ಕಳೆಯುವ ಸಮಯ ಎಲ್ಲಾ ರೀತಿಯಲ್ಲೂ ವಿಭಿನ್ನ ಹಾಗೂ ಸ್ಟೈಲಿಶ್ ಆಗಿರಬೇಕು ಎಂದು ಬಯಸಿದರೆ ಮೊದಲು ಈ ಮೇಲೆ ತಿಳಿಸಿರುವ ನೈಲ್ ಬ್ಯುಟಿ ಟಿಪ್ಸ್ ಅಳವಡಿಸಿಕೊಳ್ಳಿ. ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಯೊಂದಿಗೆ ಕಳೆಯುವ ಪ್ರತಿಯೊಂದು ಕ್ಷಣಗಳನ್ನು ವಿಶೇಷವಾಗಿಸುತ್ತದೆ. ನಿಮ್ಮ ಮನದರಸ ನಿಮ್ಮ ಕೈಗಳ ಕಾಂತಿಗೆ ಮಾರುಹೋಗುವುದನ್ನು ಖಂಡಿತ.