ಮಡಿಕೇರಿ: ಎಲ್ಲೆಲ್ಲೂ ಜನವೋ ಜನ, ಎತ್ತನೋಡಿದರೂ ಜನಸಾಗರ. ಕಣ್ಣು ಕುಕ್ಕುವ ವಿದ್ಯುತ್ ದೀಪಾಲಂಕಾರ. ಹುಚ್ಚೆದ್ದು ಕುಣಿಯುತ್ತಿರೋ ಜನರು, ಅಬ್ಬರದಿಂದ ಪ್ರದರ್ಶನಗೊಂಡ ಸ್ತಬ್ಧ ಚಿತ್ರಗಳು.
ಇದು ಮಡಿಕೇರಿ ದಸರಾದ (Madikeri Dasara) ಕೊನೆಯ ದಿನದ ಶೋಭಾಯಾತ್ರೆಯ ಚಿತ್ರಣ. ಹಗಲು ಮೈಸೂರು (Mysuru) ದಸರಾದ ವೈಭವ ನೋಡು, ರಾತ್ರಿ ಮಂಜಿನ ನಗರಿ ಮಡಿಕೇರಿ ದಸರಾದ ಸೊಬಗು ನೋಡು ಎಂಬ ಮಾತಿನಂತೆ ಐತಿಹಾಸಿಕ ಮಡಿಕೇರಿ ದಸರಾಗೆ ವರ್ಣರಂಜಿತ ತೆರೆಬಿದ್ದಿದೆ. ಇದನ್ನೂ ಓದಿ: ರಾಮನಗರ ಇಬ್ಭಾಗ, ಬೆಂಗಳೂರಿಗೆ ಕನಕಪುರ – ಏನಿದು ಡಿಕೆಶಿ ಲೆಕ್ಕಾಚಾರ?
Advertisement
Advertisement
ರಾತ್ರಿಯಿಡೀ ನಡೆದ ಮೈನವಿರೇಳಿಸುವ ದಶಮಂಟಪಗಳ ಶೋಭಾಯಾತ್ರೆ ಜನರ ಮನಸೂರೆಗೊಂಡಿತು. ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಸ್ತಬ್ಧ ಚಿತ್ರ ಪ್ರದರ್ಶನ ಜನರನ್ನು ದೇವಲೋಕಕ್ಕೆ ಕರೆದೊಯ್ಯಿತು. ದುಷ್ಟ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ದಶಮಂಟಪ ಪ್ರದರ್ಶನ ದೇವಾನುದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆದ್ದರು. ಇದನ್ನೂ ಓದಿ: ಬನ್ನಿಮಂಟಪದಲ್ಲಿ ದಸರಾಗೆ ವರ್ಣರಂಜಿತ ತೆರೆ; See You In 2024
Advertisement
ಮಂಜಿನ ನಗರಿ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಪ್ರದರ್ಶನ ಮೈನವಿರೇಳಿಸುವಂತಿತ್ತು. ದೇವಾನು ದೇವತೆಗಳ ಲೀಲೆಗಳನ್ನು ಬಿಂಬಿಸುವ ಕಥಾ ಪ್ರಸಂಗಗಳ ಸಂಯೋಜನೆ ಎಲ್ಲರ ಗಮನಸೆಳೆಯಿತು. ಎದೆನಡುಗಿಸುವ ಶಬ್ಧ, ಅದಕ್ಕೆ ತಕ್ಕಂತೆ ಬೆಳಕು. ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸುವ ದೇವರ ಮೂರ್ತಿಗಳು ನೆರೆದಿದ್ದ ಜನರನ್ನು ಒಮ್ಮೆ ದೇವಲೋಕಕ್ಕೆ ಸಂಚಾರ ಮಾಡಿಸಿದಂತಿತ್ತು. ದಶಮಂಟಪಗಳ ಶೋಭಾಯತ್ರೆ ಎಲ್ಲರನ್ನು ಆಕರ್ಷಣೆ ಮಾಡಿತ್ತು. ಇದನ್ನೂ ಓದಿ: ಬರದ ನಡುವೆಯೂ ಬತ್ತದ ಜನೋತ್ಸಾಹ; ಲಕ್ಷಾಂತರ ಮಂದಿ ಸಾಕ್ಷಿಯಾದ ದಸರಾಗೆ ತೆರೆ
Advertisement
ರಾತ್ರಿ 11 ಗಂಟೆಗೆ ಶುರುವಾದ ದಶಮಂಟಪಗಳ ಉತ್ಸವ ಬೆಳಗ್ಗೆ 5 ಗಂಟೆಯವರೆಗೂ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬಿದ್ದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ರಾತ್ರಿಯಿಡೀ ಮಂಜಿನ ನಗರಿಯ ಪ್ರಮುಖ ರಸ್ತೆಗಳಲ್ಲಿ ಜನಪ್ರವಾಹವೇ ಹರಿಯುತ್ತಿತ್ತು. ದೇವಾನುದೇವತೆಗಳ ಶಕ್ತಿ ಲೀಲೆಗಳನ್ನು ಕಣ್ತುಂಬಿಕೊಂಡ ಜನತೆ ಖುಷಿಯ ಅಲೆಯಲ್ಲಿ ತೇಲಿದರು. ಇದನ್ನೂ ಓದಿ: ಅದ್ಧೂರಿಯಾಗಿ ತೆರೆಕಂಡ ಮಂಗಳೂರು ದಸರಾ
ಒಟ್ಟಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ತೆರೆಬೀಳುತ್ತಿದ್ದಂತೆ ಶುರುವಾಗುವ ಮಂಜಿನ ನಗರಿ ದಸರಾ ಅಬ್ಬರ ಸಹಸ್ರಾರು ಜನರ ಸಂಭ್ರಮೋಲ್ಲಾಸಕ್ಕೆ ಕಾರಣವಾಗುತ್ತದೆ. ವಿವಿಧ ಜಿಲ್ಲೆಗಳಿಂದ ಬರುವ ಸಹಸ್ರಾರು ಪ್ರವಾಸಿಗರು ಮಂಜಿನ ನಗರಿ ಮಡಿಕೇರಿ ದಸರಾ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡ್ತೀನಿ: ಡಿಕೆಶಿ
Web Stories