ಬೆಂಗಳೂರು: ಪಿ.ಎಂ. ಶಶಿಕುಮಾರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹಾರರ್ ಚಿತ್ರ ವಜ್ರಮುಖಿ. ಇದಕ್ಕೂ ಮೊದಲು ಡೇಸ್ ಆಫ್ ಬೋರಾಪುರ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ಎನ್. ಆದಿತ್ಯ ಕುಣಿಗಲ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಹೊರಬರುತ್ತಿದೆ. ಟ್ರಯಾಂಗಲ್ ಲವ್ ಹಾರರ್ ಕಥಾನಕ ಹೊಂದಿರೋ ಈ ಚಿತ್ರದಲ್ಲಿ ನಟಿ ನೀತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಜನಾ ನಾಯ್ಡು ಹಾಗೂ ದಿಲೀಪ್ ಪೈ ಉಳಿದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಫಿಲಂ ಛೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಕರಿಸುಬ್ಬು ಹಾಗೂ ಶಿಲ್ಪಾ ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಡಿಯೋ ರಿಲೀಸ್ ಮಾಡಿದರು.
ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡಿರುವ ಶಶಿಕುಮಾರ್ ಮಾತನಾಡಿ, ಈ ಹಿಂದೆ ಸಿಂಗದೂರು ಚೌಡೇಶ್ವರಿ ಎಂಬ ಭಕ್ತಿಪ್ರಧಾನ ಚಿತ್ರ ನಿರ್ದೇಶಿಸಿದ್ದೆ. ಈಗ ವಜ್ರಮುಖಿ ಎನ್ನುವ ಹಾರರ್ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಇದು ಹಾರರ್ ಲವ್ ಟ್ರೈಯಾಂಗಲ್ ಚಿತ್ರ. ಸದ್ಯದಲ್ಲೇ ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡುತ್ತಿದ್ದೇವೆ ಎಂದು ಹೇಳಿದರು. ನಟಿ ನೀತು, ದಿಲೀಪ್, ಮೇಘನಾ ಕೂಡ ತಮ್ಮ ಪಾತ್ರಗಳ ಕುರಿತು ಹೇಳಿಕೊಂಡರು.
https://www.youtube.com/watch?v=r9cMF9dKTVs