– ಉತ್ಸವದಲ್ಲಿ ಭಾಗಿಯಾದ ಸುಧಾಮೂರ್ತಿ, ಯದುವೀರ್
ಮಂಡ್ಯ: ವರ್ಷಕ್ಕೊಮ್ಮೆ ನಡೆಯುವ ವಿಶ್ವ ವಿಖ್ಯಾತ ವೈರಮುಡಿ ಉತ್ಸವದ ವೈಭವವನ್ನ ಕಣ್ತುಂಬಿಸಿಕೊಳ್ಳಲು ಸಾವಿರಾರು ಭಕ್ತ ಸಮೂಹವೇ ಹರಿದು ಬಂದಿತ್ತು. ಅಕ್ಷರಶಃ ಮೇಲುಕೋಟೆ ವೈರಮುಡಿ ಉತ್ಸವ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯ್ತು.
ಮೇಲುಕೋಟೆಯ ವಿಶ್ವ ವಿಖ್ಯಾತ ಶ್ರೀ ಚಲುವ ನಾರಾಯಣಸ್ವಾಮಿಯ ಶ್ರೀ ವೈರಮುಡಿ ಕಿರೀಟ ಧಾರಣಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಉತ್ಸವ ಮೂರ್ತಿಯ ದರ್ಶನ ಪಡೆದು ಪುಣಿತರಾದರು. ಶನಿವಾರ ಬೆಳಗ್ಗೆ ಜಿಲ್ಲಾ ಖಜಾನೆಯಿಂದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಮೇಲುಕೋಟೆಗೆ ತೆಗೆದುಕೊಂಡು ಬಂದರು. ನಂತರ ವೈರಮುಡಿ ಕಿರೀಟ, ಶಂಕ, ಗಧಾ, ಸೇರಿದಂತೆ ಪ್ರಮುಖ 14 ಆಭರಣಗಳಿಂದ ಉತ್ಸವ ಮೂರ್ತಿಗೆ ಅಲಂಕಾರ ಮಾಡಿ, ಮೆರವಣಿಗೆ ಮಾಡಲಾಯ್ತು.
Advertisement
Advertisement
ಮೇಲುಕೋಟೆ ಉತ್ಸವ ಅಭಿವೃದ್ಧಿಗೆ ಇನ್ಫೋಸಿಸ್ ಫೌಂಡೇಶನ್ ಮುಂದಾಗಿತ್ತು. ಇದೇ ಮೊದಲ ಬಾರಿಗೆ ಉತ್ಸವದಲ್ಲಿ ಭಾಗಿಯಾಗದ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ, ಈ ಉತ್ಸವ ತುಂಬಾ ಚೆನ್ನಾಗಿದೆ. ಉತ್ಸವದಲ್ಲಿ ಹಬ್ಬದ ವಾತಾವರಣ ಅನಾವರಣಗೊಂಡಿದೆ ಅಂದರು. ಇನ್ನು ಯದುವೀರ್ ಒಡೆಯರ್ ಕೂಡ, ಈ ಉತ್ಸವ ಕುರಿತು ಸಂತಸ ವ್ಯಕ್ತಪಡಿಸಿದರು. ಈ ಕ್ಷೇತ್ರ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಮೈಸೂರು ಅರಮನೆಗೂ ಈ ದೇವಸ್ಥಾನಕ್ಕೂ ಅವಿನಭಾವ ಸಂಬಂಧ ಇದೆ ಎಂದು ಹೇಳಿದರು.
Advertisement
ಐತಿಹಾಸಿಕ ಹಿನ್ನೆಲೆಯುಳ್ಳ ವೈರಮುಡಿ ಉತ್ಸವ ಭಾರೀ ಪೊಲೀಸ್ ಬಿಗಿ ಭದ್ರತೆಯಲ್ಲಿ ಸುಸೂತ್ರವಾಗಿ ನಡೆಯಿತು. ಆದರೆ ಉತ್ಸವ ಆರಂಭಕ್ಕೂ ಮುನ್ನ ಕೆಲವು ಪೊಲೀಸರು ಮಾಧ್ಯಮದವರ ಮೇಲೆ ಅಂಧಾ ದರ್ಬಾರ್ ನಡೆಸಿದರು. ನಂತರ ಎಸ್‍ಪಿ ಶಿವ ಪ್ರಕಾಶ್ ಮಧ್ಯೆ ಪ್ರವೇಶಿಸಿ, ಮಾಧ್ಯಮದವರಿಗೆ ಮುಕ್ತ ವರದಿ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv