ಐಪಿಎಲ್‌ಗಾಗಿ ಮಟನ್‌, ಪಿಜ್ಜಾ ತ್ಯಜಿಸಿದ್ದ ವೈಭವ್‌ – ಡಯಟ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಕೋಚ್‌

Public TV
2 Min Read
Vaibhav Suryavanshi 5

ಪಾಟ್ನಾ: ಸದ್ಯ ಕ್ರಿಕೆಟ್‌ ಪ್ರಿಯರ ಬಾಯಲ್ಲೀಗ 14ರ ಬಾಲಕ ವೈಭವ್‌ ಸೂರ್ಯವಂಶಿಯದ್ದೇ (Vaibhav Suryavanshi) ಮಾತು. ವೈಭವ್‌ ಬ್ಯಾಟ್‌ನಿಂದ ಹೊಮ್ಮಿದ ಸಿಡಿಲಬ್ಬರದ ಶತಕ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡಕ್ಕೆ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಗೆಲುವು ತಂದುಕೊಟ್ಟಿತು. ಇದರೊಂದಿಗೆ ಸತತ 5 ಸೋಲುಗಳ ನಂತರ ಗೆಲುವಿನ ಹಾದಿಗೆ ಮರಳಿದ ರಾಯಲ್ಸ್‌ ತನ್ನ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿದೆ.

ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಶಾರ್ದೂಲ್‌ ಠಾಕೂರ್‌ ಬೌಲಿಂಗ್‌ಗೆ ಮೊದಲ ಎಸೆತದಲ್ಲೇ ಸಿಕ್ಸರ್‌ ಸಿಡಿಸುವ ಮೂಲಕ ವೂಭವ್‌ ಐಪಿಎಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದರು. ಆದ್ರೆ ನಿನ್ನೆ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಗುಜರಾತ್‌ ಬೌಲರ್‌ಗಳನ್ನು ದಂಡಿಸಿದ ರೀತಿ ಕಂಡು ಇಡೀ ಕ್ರಿಕೆಟ್‌ (Cricket) ಜಗತ್ತು ನಿಬ್ಬೆರಗಾಗಿದೆ. ಹೀಗಾಗಿ ಕ್ರಿಕೆಟ್‌ ತಾರೆಯನ್ನ ಯುವ ಆಟಗಾರರನ್ನು ಕೊಂಡಾಡುತ್ತಿದ್ದಾರೆ. ಈ ಮಧ್ಯೆ ಒಂದು ವಿಷಯವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಅದ್ಭುತ ಶತಕದ ಮೂಲಕ ವಿಶ್ವವಿಖ್ಯಾತಿ ಪಡೆದ ವೈಭವ್‌ ಡಯಟ್‌ ಚಾರ್ಟ್‌ ಹೇಗಿದೆ ಅನ್ನೋದನ್ನ ಅವರ ಕೋಚ್‌ ಮನೋಜ್ ಓಜಾ (Manoj Ojha) ತಿಳಿಸಿದ್ದಾರೆ.

ಚಿಕನ್‌, ಮಟನ್‌ ಪ್ರಿಯ ವೈಭವ್‌
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಕೋಚ್‌ ಮನೋಜ್‌ ಓಜಾ, ವೈಭವ್‌ ಚಿಕ್ಕವನಾದ್ದರಿಂದ ಚಿಕನ್‌, ಮಟನ್‌ (Mutton), ಪಿಜ್ಜಾ ಅಂದ್ರೆ ಹೆಚ್ಚು ಪ್ರೀತಿ. ಎಷ್ಟು ಕೊಟ್ಟರೂ ಮುಗಿಸಿಬಿಡುತ್ತಿದ್ದಮ, ಅದಕ್ಕಾಗಿ ಸ್ವಲ್ಪ ದಪ್ಪಗೆ ಕಾಣುತ್ತಾನೆ. ಆದ್ರೆ ಐಪಿಎಲ್‌ ಹತ್ತಿರ ಬರುತ್ತಿದ್ದಂತೆ ಮಟನ್‌, ಪಿಜ್ಜಾ (Pizza) ತಿನ್ನೋದನ್ನ ತ್ಯಜಿಸಿದ್ದ. ಅವನಿಗಾಗಿ ಡಯಟ್‌ ಚಾರ್ಚ್‌ ಕೂಡ ಮಾಡಲಾಗಿತ್ತು ಎಂದು ಓಜಾ ಹೇಳಿದ್ದಾರೆ.

ಹೀಗೆ ಹೊಡೀತಾನೆ ಅಂತ ಗೊತ್ತಿರಲಿಲ್ಲ
ಇನ್ನೂ ಮನೋಜ್ ಓಜಾ ತಮ್ಮ ಶಿಷ್ಯನ ಆಟ ಕಂಡು ಚಕಿತಗೊಂಡಿದ್ದಾರೆ. ಅವನು ಹೊಡೆಯುತ್ತಾನೆ ಅಂದುಕೊಂಡಿದ್ದೆ, ಆದ್ರೆ ಹೀಗೆ ಹೊಡೆಯುತ್ತಾನೆ ಎಂದು ನನಗೆ ಗೊತ್ತಿರಲಿಲ್ಲ. ಒಟ್ನಲ್ಲಿ ಏನೋ ದೊಡ್ಡದು ನಡೆಯುತ್ತದೆ ಅಂತ ಮಾತ್ರ ಗೊತ್ತಿತ್ತು. ಅವನಿನ್ನೂ 14 ವರ್ಷದ ಹುಡುಗ, ದೇವರು ಅವನಿಗೆ ಅಪಾರ ಪ್ರತಿಭೆ ನೀಡಿದ್ದಾನೆ. ಅವನ ವೃತ್ತಿಜೀವನದಲ್ಲಿ ನಾನೂ ಭಾಗಿಯಾಗಲು ಸಾಧ್ಯವಾಗಿರುವುದಕ್ಕೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Share This Article