ಉಡುಪಿ: ಶ್ರೀ ಕೃಷ್ಣ ಮಠದಲ್ಲಿ (Udupi Sri Krishna Matha) ವಾದಿರಾಜ ಗುರುಸಾರ್ವಭೌಮರ ಜಯಂತಿಯನ್ನು (Vadiraja Guru Saarvabhouma Jayanthi) ವಿಶೇಷವಾಗಿ ಆಚರಿಸಲಾಯಿತು.
ಮಠದ ರಥಬೀದಿಯಲ್ಲಿ ಶ್ರೀ ಸೋದೆ ವಾದಿರಾಜರ ಕೃತಿಗಳು ಹಾಗೂ ಗ್ರಂಥಗಳನ್ನು ರಥದಲ್ಲಿಟ್ಟು ವಿಶೇಷ ಪೂಜೆ ಮಾಡಿ ಮೆರವಣಿಗೆ ನಡೆಸಲಾಯ್ತು. ರಥಬೀದಿಯಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಇದನ್ನೂ ಓದಿ: ಭಾನುವಾರ ನಿಮಿಷಾಂಭ ದೇವಸ್ಥಾನದಲ್ಲಿ ಮಾಘ ಶುದ್ದ ಹುಣ್ಣಿಮೆ ಮಹೋತ್ಸವ
ಪರ್ಯಾಯ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಧಾರ್ಮಿಕ ಪ್ರವಚನ ರಾಜಾಂಗಣದಲ್ಲಿ ನೆರವೇರಿತು. ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಸಿ ವಿವಿಧ ಉಪನ್ಯಾಸಗಳನ್ನು ನೀಡಲಾಯಿತು.

