Connect with us

Bengaluru City

ಕರ್ನಾಟಕದಲ್ಲೂ ಜಿಗ್ನೇಶ್ ಮೆವಾನಿ ಪ್ರಚಾರ – ದಲಿತ ಮತಗಳ ಕ್ರೂಢೀಕರಣಕ್ಕೆ `ಕೈ’ ಅಸ್ತ್ರ

Published

on

ಬೆಂಗಳೂರು: ಗುಜರಾತ್ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ ವಡಗಾಂವ್ ಕ್ಷೇತ್ರದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಶೀಘ್ರದಲ್ಲೇ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ರಾಜ್ಯಕ್ಕೂ ಬರುತ್ತೇನೆ. ಕರ್ನಾಟಕದಲ್ಲೇ ಕ್ಯಾಂಪೈನ್ ಮಾಡ್ತೇನೆ ಅಂತ ರಣಕಹಳೆ ಊದಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು. ಶೀಘ್ರ ಕರ್ನಾಟಕಕ್ಕೆ ಬರುತ್ತೇನೆ. ಅಲ್ಲೇ ಹೋರಾಟ ಮಾಡ್ತೀನಿ. ಈಗ ಹಿರಿಯ ಪತ್ರಕರ್ತೆ ಗೌರಿ ಇದ್ದಿದ್ದರೆ ಅವರು ಹೆಚ್ಚು ಖುಷಿ ಪಡ್ತಿದ್ರು. ಅಲ್ಲದೇ ನನಗೆ ವಿಮಾನ ಟಿಕೆಟ್ ಬುಕ್ ಮಾಡಿ ಕರ್ನಾಟಕಕ್ಕೆ ಕರೆಸಿಕೊಳ್ಳುತ್ತಿದ್ದರು. ಅವರು ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಕೂಡ ಮಾಡ್ತಿದ್ರು ಅಂತ ಹೇಳಿದ್ರು. ಇದನ್ನೂ ಓದಿ: ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

ಫೆಬ್ರವರಿಯಿಂದ ರಾಜ್ಯದ ದಲಿತ ಬಾಹುಳ್ಯ ಕ್ಷೇತ್ರಗಳಲ್ಲಿ ಮೇವಾನಿ ಸಂಚಾರ ಮಾಡಲಿದ್ದು, ಸಿಎಂ ಸಿದ್ದರಾಮಯ್ಯ ಅವರ ಜೊತೆ ರಾಜ್ಯ ಪ್ರವಾಸವನ್ನು ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?

ವಡಂಗಾವ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ಜಿಗ್ನೇಶ್ ಮೇವಾನಿ, ಬಿಜೆಪಿ ಅಭ್ಯರ್ಥಿ ವಿರುದ್ಧ 19,696 ಮತಗಳ ಅಂತರದಿಂದ ಜಯ ಗಳಿಸಿದ್ದರು. ಫಲಿತಾಂಶದಲ್ಲಿ ಜಿಗ್ನೇಶ್ 95,497 ಮತಗಳನ್ನು ಪಡೆದ್ರೆ, ಬಿಜೆಪಿಯ ಚಕ್ರವರ್ತಿ ವಿಜಯ್ ಕುಮಾರ್ ಹರ್ಖಾಭಾಯ್ ಅವರು 75,801 ಮತಗಳನ್ನು ಪಡೆದಿದ್ದರು. ಇದನ್ನೂ ಓದಿ: ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದೆಲ್ಲಿ? ಕಾಂಗ್ರೆಸ್ ಸೋತಿದ್ದೆಲ್ಲಿ?

Click to comment

Leave a Reply

Your email address will not be published. Required fields are marked *