ಬೆಂಗಳೂರು: ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆಯ ನಿರ್ಧಾರ ಮಾಡಲಾಗಿದೆ. ಈ ರೀತಿಯ ಪ್ರಯೋಗಗಳು ಬೇರೆ ಬೇರೆ ಜಿಲ್ಲೆಯಲ್ಲೂ ನಡೆಯುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೇರೆ ಬೇರೆ ಜಿಲ್ಲೆಯಲ್ಲಿ ಈ ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಅದರಂತೆ ನಮ್ಮಲ್ಲೂ ಮಾಡಿದ್ದಾರೆ. ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ
Advertisement
Advertisement
ನಾನೂ ಬೆಂಗಳೂರು ಉಸ್ತುವಾರಿ ಕೇಳಿದ್ದೆ. ಆದರೆ ಅದನ್ನು ಬೇರೆ ಯಾರಿಗೂ ಕೊಟ್ಟಿಲ್ಲ. ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಂಡಿದ್ದಾರೆ. ಅವರ ಬಳಿ ಇರುವುದೇ ಸೂಕ್ತ ಎಂದ ಅವರು, ವರಿಷ್ಠರು ಹಾಗೂ ಹೈಕಮಾಂಡ್ ತೀರ್ಮಾನ ಮಾಡಿ ಉಸ್ತುವಾರಿ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ಬೇರೆ ಬೇರೆ ಜಿಲ್ಲೆ ಹಂಚಿಕೆ ಮಾಡಲಾಗಿದೆ ಗೊತ್ತಿಲ್ಲ. ಆದರೆ ತವರು ಜಿಲ್ಲೆ ಸಿಕ್ಕಿಲ್ಲ ಅಂದ ಮೇಲೆ ಬೆಂಗಳೂರು ನಗರ ಉಸ್ತುವಾರಿ ಸಿಎಂ ಬಳಿ ಇರುವುದೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್