ಚಾಮರಾಜನಗರ: ತಾಂತ್ರಿಕ ಸಮಸ್ಯೆ ಎಂದು ಕಾರಣ ನೀಡಿದ್ದ ಸಿಮ್ಸ್ ಡೀನ್‍ಗೆ ಆರು ತಿಂಗಳು ರಜೆ ಹಾಕಿಕೊಳ್ಳಿ ಎಂದು ಸಚಿವ ವಿ. ಸೋಮಣ್ಣ(V Somanna) ಎಚ್ಚರಿಕೆ ನೀಡಿದ್ದು, ಇದರಿಂದ ಸಿಮ್ಸ್ ಡೀನ್ ಡಾ. ಸಂಜೀವ್ ತಬ್ಬಿಬ್ಬಾದ ಘಟನೆ ನಡೆಯಿತು.
ಕೆಡಿಪಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ್ದ ಸಚಿವರು, ಚಾಮರಾಜನಗರ (Chamarajanagar) ಜಿಲ್ಲಾ ಆಸ್ಪತ್ರೆಯನ್ನು(Hospital) ಮತ್ತೆ ಪ್ರಾರಂಭ ಮಾಡಬೇಕು ಎಂದು ಹೇಳಿದಾಗ ಮೆಡಿಕಲ್ ಕಾಲೇಜಿಗೆ 750 ಬೆಡ್ ಆಸ್ಪತ್ರೆ ಬೇಕಿದೆ. ಜಿಲ್ಲಾಸ್ಪತ್ರೆಯು ಸೇರಿದಂತೆ ಅಷ್ಟು ಬೆಡ್ ಇರುವುದರಿಂದ ಮೆಡಿಕಲ್ ಕಾಲೇಜ್ ಸಿಕ್ಕಿದೆ. ಈ ಕಾರಣದಿಂದ ಪ್ರತ್ಯೇಕ ಜಿಲ್ಲಾಸ್ಪತ್ರೆಗೆ ಒಪ್ಪಿಗೆ ಸಿಗುವುದಿಲ್ಲ ಎಂದು ಡೀನ್ ಡಾ.ಸಂಜೀವ್ ತಾಂತ್ರಿಕ ಸಮಸ್ಯೆಯನ್ನು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ 55 ಸಾವಿರ ಕೋಟಿ ಅನುದಾನ ನೀಡಲು ಚಿಂತನೆ – ಸ್ಮೃತಿ ಇರಾನಿ
ಇದರಿಂದ ಕೋಪಗೊಂಡ ಸಚಿವ ಸೋಮಣ್ಣ, ನಿಮ್ಮ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ನಾವು ಜನರಿಗಾಗಿ ಇರೋದು. ನಿಮ್ಮ ಕೈಯಲ್ಲಿ ಆಗದಿದ್ದರೆ ಆರು ತಿಂಗಳು ರಜೆ ಹಾಕಿ, ನನಗೆ ಜಿಲ್ಲಾಸ್ಪತ್ರೆ ಹೇಗೆ ಪುನಾರಂಭ ಮಾಡಬೇಕು ಎಂದು ಗೊತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ: ಕಾಂಗ್ರೆಸ್ ಲೇವಡಿ