ಡೆಹ್ರಾಡೂನ್: ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಸ್ಥಳಗಳಲ್ಲಿ ಮೋದಿ ಸರ್ಕ್ಯೂಟ್ ಅನ್ನು ಅಭಿವೃದ್ಧಿ ಪಡಿಸುವತ್ತ ಉತ್ತರಾಖಂಡದ ಪ್ರವಾಸೋದ್ಯಮ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ.
2019ರಲ್ಲಿ ನಡೆದಿದ್ದ ಬೇರ್ ಗ್ರಿಲ್ಸ್ ಅವರೊಂದಿಗೆ ಮ್ಯಾನ್ ವರ್ಸಸ್ ವೈಲ್ಡ್ ಎಂಬ ರಿಯಾಲಿಟಿ ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದರು. ಆ ಕಾರ್ಯಕ್ರಮವು ಜಿಮ್ ಕಾರ್ಬೆಟ್ ಪಾರ್ಕ್‌ನಲ್ಲೇ ಶೂಟಿಂಗ್ ನಡೆದಿತ್ತು.
Advertisement
What better than the lush green jungles of India, in the midst of Mother Nature to throw light on environmental conservation and climate change..Do join at 9 PM tonight! https://t.co/RdndTgUtCF
— Narendra Modi (@narendramodi) August 12, 2019
Advertisement
ಈ ಹಿನ್ನೆಲೆಯಲ್ಲಿ ಉದ್ಯಾನವನದ ಒಳಗೆ ಶೂಟಿಂಗ್ ನಡೆದ ಸಮಯದಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿದ್ದ ಸ್ಥಳಗಳಲ್ಲಿ ಪ್ರವಾಸಿಗರು ತಂಗಲು ಮತ್ತು ಭೇಟಿ ನೀಡಲು ಅಧಿಕಾರಿಗಳು ಸ್ಥಳವನ್ನು ಗುರುತಿಸಲು ಪ್ರಾರಂಭಿಸಿದ್ದಾರೆ.
Advertisement
ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಈ ಬಗ್ಗೆ ಮಾಹಿತಿ ನೀಡಿದ್ದು, ವಿದೇಶಿಗರೊಬ್ಬರು ಈ ಸ್ಥಳಕ್ಕೆ ಭೇಟಿ ನೀಡಿದಾಗ ಗೇಮ್ ಆಫ್ ಥ್ರೋನ್ಸ್ ಪ್ರವಾಸದ ಬಗ್ಗೆ ಕೇಳಿದಾಗ ಮೋದಿ ಸರ್ಕ್ಯೂಟ್‌ನ ಕಲ್ಪನೆಯು ಹೊರಹೊಮ್ಮಿತು ಎಂದು ಹೇಳಿದರು. ಇದನ್ನೂ ಓದಿ: ಎಲ್ಲವೂ ಸರಿಯಾಗಿ ನಡೆದ್ರೆ 9 ತಿಂಗಳಲ್ಲಿ ಮಕ್ಕಳಾಗುತ್ತೆ, ನರಗಳ ದೌರ್ಬಲ್ಯ ಇದ್ರೆ ವಿಳಂಬವಾಗುತ್ತೆ: ರಮೇಶ್ ಕುಮಾರ್
Advertisement
ಮ್ಯಾನ್ ವರ್ಸಸ್ ವೈಲ್ಡ್ ಸಂಚಿಕೆಯ ಚಿತ್ರೀಕರಣದ ವೇಳೆ ಪ್ರಧಾನಿ ಮೋದಿ ಅವರು ಕೆಲವು ಸಾಹಸ ಚಟುವಟಿಕೆಗಳನ್ನು ಕೈಗೊಂಡಿದ್ದರು. ಚಿತ್ರೀಕರಣದ ವೇಳೆ, ಮೋದಿ ಮತ್ತು ಗ್ರಿಲ್ಸ್ ಅವರು ತಾತ್ಕಾಲಿಕ ತೆಪ್ಪದಲ್ಲಿ ಕೋಸಿ ನದಿಯನ್ನು ದಾಟಿದ್ದರು. ಇದನ್ನೂ ಓದಿ: ಪ್ರವೀಣ್‌ನನ್ನು ಕೊಲೆ ಮಾಡಿದವರು ಕೇರಳದವರಲ್ಲ, ಸ್ಥಳೀಯರು: ಆರಗ ಜ್ಞಾನೇಂದ್ರ