ಡೆಹ್ರಾಡೂನ್: ನಾನು ಉತ್ತರಾಖಂಡದ ಕಾವಲುಗಾರ. ಉತ್ತರಾಖಂಡಕ್ಕಾಗಿ ಅಗತ್ಯ ಬಿದ್ದರೆ ಬೊಗಳುತ್ತೇನೆ ಇಲ್ಲಾ ಕಚ್ಚುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಗೃಹಸಚಿವ ಅಮಿತ್ ಶಾಗೆ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪ್ರತಿಸ್ಪರ್ಧಿಯನ್ನು ತೆಗಳುವುದು ಬಿಜೆಪಿಯ ಸಂಸ್ಕೃತಿಯಾಗಿದೆ. ಅದಕ್ಕೆ ಧನ್ಯವಾದ ತಿಳುಸುತ್ತೇನೆ ಎಂದ ಅವರು, ಅಮಿತ್ ಶಾ ನಾಯಿ ಎಂಬ ಪದವನ್ನು ಬಳಸಿಲ್ಲ. ಆದರೆ ರಾಜಕೀಯ ಎದುರಾಳಿಗಳನ್ನು ನಾಯಿ ಎಂದು ಪರಿಗಣಿಸಿದರೆ ಅದು ಅವರ ತಿಳುವಳಿಕೆಗೆ ಬಿಟ್ಟಿದ್ದು ಎಂದರು.
ನಮ್ಮ ಧರ್ಮದಲ್ಲಿ ನಾಯಿಯನ್ನು ಕಾವಲುಗಾರರೆಂದು ಪರಿಗಣಿಸುತ್ತೇವೆ. ಅವರು ದೇವರ ಕಾವಲುಗಾರ ಹಾಗೂ ನಾಯಿ ಮನೆಗಳನ್ನು ಕಾಯುತ್ತವೆ. ಈ ಹಿನ್ನೆಲೆಯಲ್ಲಿ ನಾನು ಉತ್ತರಾಖಂಡದ ಕಾವಲುಗಾರ. ನಾನು ಉತ್ತರಾಖಂಡಕ್ಕಾಗಿ ಬೊಗಳುತ್ತೇನೆ. ಕಚ್ಚುವ ಅವಶ್ಯಕತೆ ಬಂದರೆ ನಾನು ಕಚ್ಚುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನಾನು ಹೃದಯದಿಂದ ಮುಸ್ಲಿಂ ಮಗಳು, ಹಿಜಬ್‍ನಿಂದಲ್ಲ: ಕಾಶ್ಮೀರ ಟಾಪರ್
ಹರೀಶ್ ರಾವತ್ ಅವರನ್ನು ನಾಯಕನನ್ನಾಗಿ ಮಾಡಬೇಕೋ ಬೇಡವೋ, ಅವರಿಗೆ ಟಿಕೆಟ್ ನೀಡಬೇಕೋ ಅಥವಾ ಬೇಡವಾ, ಜೊತೆಗೆ ಪಕ್ಷದಲ್ಲಿ ಸ್ಥಾನ ನೀಡಬೇಕೋ, ಬೇಡವೋ ಎಂಬುದನ್ನು ಕಾಂಗ್ರೆಸ್ ನಿರ್ಧರಿಸುವುದಿಲ್ಲ ಎಂದು ಅಮಿತ್ ಶಾ ಟೀಕಿಸಿದ್ದರು.
ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯಿಸದ ಹರೀಶ್ ರಾವತ್ ಅವರು, ಹಿಜಾಬ್, ಖಿಜಾಬ್, ತೇಜಾಬ್ ವಿಷಯಗಳ ವಿವಾದಕ್ಕೆ ಬಿಜೆಪಿ ಸ್ವಾಗತಿಸುತ್ತದೆ. ಉತ್ತರಾಖಂಡದ ಜನರು ಅವುಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದು ಬಿಜೆಪಿಯ ಕೆಟ್ಟ ಯೋಚನೆಯಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಇಂದಿನಿಂದ ಹೈಸ್ಕೂಲ್ ಆರಂಭ – ಸಮವಸ್ತ್ರದಲ್ಲೇ ಬರಬೇಕು, ಪೊಲೀಸರ ನಿಗಾ