ಲಕ್ನೋ: ಆಹಾರದಲ್ಲಿ ಉಪ್ಪಿ (Salt) ನ ಅಂಶ ಹೆಚ್ಚಾಯಿತೆಂದು ಸಿಟ್ಟಿಗೆದ್ದ ಯುವಕನೊಬ್ಬ ತನ್ನನ್ನು ನಾನು ಶೂಟ್ ಮಾಡಿಕೊಂಡ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸಾಂಬಾರ್ ನಲ್ಲಿ ಉಪ್ಪು ಹೆಚ್ಚಾಯಿತೆಂದು 22 ವರ್ಷದ ಪುರನ್ ಶಂಕರ್ ದುಬೇ ಶನಿವಾರ ರಾತ್ರಿ ತನ್ನ ಮನೆಯವರೊಂದಿಗೆ ಗಲಾಟೆ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿ ಆತ ಗನ್ ನಿಂದ ತನಗೆ ತಾನೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ.
ಪುರನ್ ಪೈಲ್ಸ್ (Piles) ನಿಂದ ಬಳಲುತ್ತಿದ್ದನು. ಹೀಗಾಗಿ ಆತ ಅತಿಯಾಗಿ ಉಪ್ಪು ಹಾಗೂ ಖಾರವನ್ನು ಸೇವಿಸುತ್ತಿರಲಿಲ್ಲ. ಶನಿವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದು ಊಟ ಮಾಡಲು ಕುಳಿತಿದ್ದಾನೆ. ಈ ವೇಳೆ ಊಟ (Food) ದಲ್ಲಿ ಉಪ್ಪಿನ ಅಂಶ ಹೆಚ್ಚಿರುವುದು ಗೊತ್ತಾಗಿದೆ. ಕೂಡಲೇ ಊಟ ಚೆಲ್ಲಿ ಮನೆಯವರೊಂದಿಗೆ ಜಗಳವಾಡಿದ್ದಾನೆ. ಇತ್ತ ಮನೆಯವರು ಸುಳ್ಳು ಹೇಳುತ್ತಿದ್ದೀಯಾ ಎಂದು ಪುರನ್ ಜೊತೆ ಜಗಳಕ್ಕಿಳಿದಿದ್ದರಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್
ಇತ್ತ ಸ್ಥಳೀಯ ದೇಗುಲವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿರುವ ಪುರನ್ ತಂದೆ ಉಮಾಶಂಕರ್ ಪ್ರತಿಕ್ರಿಯಿಸಿ, ಪುರನ್ ತನ್ನ ಕೋಣೆಯೊಳಗೆ ತೆರಳಿ ಶೂಟ್ ಮಾಡಿಕೊಂಡಿದ್ದಾನೆ. ಶೂಟೌಟ್ ಮಾಡಿಕೊಂಡ ಸದ್ದು ಕೇಳಿ ಕೂಡಲೇ ನಾವೆಲ್ಲ ಆತನ ರೂಮಿಗೆ ಓಡಿದೆವು. ಈ ವೇಳೆ ಆತನ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದರು.
ಪುರನ್ ತನ್ನ ಎದೆಗೆ ಶೂಟೌಟ್ ಮಾಡಿಕೊಂಡಿದ್ದಾನೆ. ಆದರೆ ಪುರನ್ ಗೆ ಈ ಗನ್ ಎಲ್ಲಿ ಸಿಕ್ಕಿತ್ತು ಎಂಬುದನ್ನು ತಿಳಿಸುವಲ್ಲಿ ಉಮಾಶಂಕರ್ ವಿಫಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪುರನ್ ಕುಟುಂಬಸ್ಥರು ಯಾರ ಮೇಲೆನೂ ಆರೋಪ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ಪುರನ್ ಗೆ ಪಿಸ್ತೂಲ್ ಹೇಗೆ, ಎಲಿಂದ ಸಿಕ್ಕಿತ್ತು ಎಂಬುದರ ಬಗ್ಗೆ ತನಖೆ ನಡೆಸುತ್ತಿದ್ದೇವೆ ಎಂದು ಎಸ್‍ಹೆಚ್‍ಓ ರಾಜ್ ಕುಮಾರ್ ತಿಳಿಸಿದ್ದಾರೆ.