ಲಕ್ನೋ: ಕಳೆದ 50 ದಿನಗಳಲ್ಲಿ ನಾಲ್ವರು ವೃದ್ಧ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ 20 ವರ್ಷದ ಯುವಕನನ್ನ ಪೊಲೀಸರು (Police) ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಮೃತ ಮಹಿಳೆಯರು (Women) 50 ರಿಂದ 65 ವರ್ಷ ವಯಸ್ಸಿನವರು ಹಾಗೂ ಉತ್ತರ ಪ್ರದೇಶದ ಅಯೋಧ್ಯೆ (Ayodhya) ಹಾಗೂ ಬಾರಾಬಂಕಿ ಜಿಲ್ಲೆಗಳಿಗೆ ಸೇರಿದವರು. ಆರೋಪಿ ಅಮರೇಂದ್ರ (20) ಎಂದು ಗುರುತಿಸಿದ್ದು, ಅಯೋಧ್ಯೆಯ ಮಾವಾಯಿ ಪೊಲೀಸ್ ಠಾಣಾ (Mawai Police Station) ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಉನ್ಹೌನಾ ಗ್ರಾಮಸ್ಥರ ಗುಂಪೊಂದು `ಸೈಕೋ’ ಕಿಲ್ಲರ್ನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಪೊಲೀಸರು ಬಂಧಿಸಿದ್ದಾರೆ ಎಂದು ಅಯೋಧ್ಯೆ ಹೆಚ್ಚುವರಿ ಎಸ್ಪಿ ಅತುಲ್ ಕುಮಾರ್ ಸೋಂಕರ್ ತಿಳಿಸಿದ್ದಾರೆ.
ಉನ್ಹೌನಲ್ಲಿ (Unhauna) 5ನೇ ಮಹಿಳೆಯನ್ನ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿದ್ದಾಗ ಯುವಕನನ್ನ ಸ್ಥಳೀಯರು ಸೆರೆಹಿಡಿಸಿದ್ದಾರೆ. ಬಳಿಕ ಮಾವಾಯಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರೆಬೆಲ್ ಯತ್ನಾಳ್ಗೆ ಹೈಕಮಾಂಡ್ ಮತ್ತೆ ಮಾಫಿ- ಓನ್ಲಿ ವಾರ್ನಿಂಗ್, ನೋ ಆಕ್ಷನ್
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅಮರೇಂದ್ರ ಇತರ ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿರ್ಜನ ಪ್ರದೇಶದಲ್ಲಿ ಮಹಿಳೆಯರು ಒಂಟಿಯಾಗಿ ಕಂಡಾಗೆಲ್ಲಾ ಅಪರಾಧ ಎಸಗಿದ್ದಾಗಿ ಹೇಳಿದ್ದಾನೆ.
ತನಿಖೆ ಬಳಿಕ ಆರೋಪಿ ಅಮರೇಂದ್ರ ಯಾವುದೇ ಸ್ಪಷ್ಟ ಉದ್ದೇಶ ಹೊಂದಿಲ್ಲ. ಲೈಂಗಿಕ ಉದ್ದೇಶದಿಂದ ಅತ್ಯಾಚಾರ ಎಸಗಿ ಮಹಿಳೆಯರನ್ನು ಕೊಂದಿರುವುದು ಸ್ಪಷ್ಟವಾಗಿದೆ. ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ: Plane Crash: ಬೆಂಕಿ ಕಾಣಿಸಿಕೊಂಡು ಪತನಗೊಂಡ ಚಾರ್ಟರ್ಡ್ ವಿಮಾನ – ಪೈಲಟ್ಗಾಗಿ ಹುಡುಕಾಟ
ಸೈಕೋ ಕಿಲ್ಲರ್ ಕಥೆಯೇ ರೋಚಕ: 2022ರ ಡಿಸೆಂಬರ್ 5 ರಂದು ಮೊದಲ ಮಹಿಳೆಯ ಕೊಲೆ ಬಹಿರಂಗವಾಯಿತು. ಮಾವಾಯಿಯ ಖುಶೆಟಿ ಗ್ರಾಮದ 60 ವರ್ಷದ ಮಹಿಳೆ ಬೆಳಗ್ಗೆ ಮನೆಯಿಂದ ಹೋದ ನಂತರ ಹಿಂದಿರುಗಲಿಲ್ಲ. ಮರುದಿನ ಆಕೆಯ ಬೆತ್ತಲೆ ದೇಹವು ಮುಖ ಮತ್ತು ತಲೆಯ ಮೇಲೆ ಗಾಯದ ಗುರುತುಗಳೊಂದಿಗೆ ಪೊಲೀಸರಿಗೆ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿತ್ತು.
ಇದಾದ ನಂತರ ಡಿಸೆಂಬರ್ 17 ರಂದು ಇಬ್ರಾಹಿಂಬಾದ್ ಗ್ರಾಮದ ಹೊಲವೊಂದರಲ್ಲಿ 62 ವರ್ಷದ ಮಹಿಳೆಯ ಮೃತದೇಹ ಇದೇ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಡಿ.29 ರಂದು 55 ವರ್ಷದ, ಡಿಸೆಂಬರ್ 29 ರಂದು ಥಥರ್ಹಾ ಗ್ರಾಮದಿಂದ ಮಹಿಳೆಯೊಬ್ಬರು ಕಾಣೆಯಾಗಿದ್ದರು. ಮರುದಿನ ಹೊಲದಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಎಲ್ಲ ಕೊಲೆಗಳೂ ಒಂದೇ ಮಾದರಿಯಲ್ಲಿ ಇತ್ತೆಂದು ಗುರುತಿಸಲಾಗಿತ್ತು. ನಂತರ ಪೊಲೀಸ್ ಇಲಾಖೆ ಶೀಘ್ರವೇ ಹಂತಕನನ್ನು ಹಿಡಿಯಲು 6 ವಿಶೇಷ ತಂಡಗಳನ್ನು ರಚಿಸಿತ್ತು. ಕೊನೆಗೆ ಸಾರ್ವಜನಿಕರ ಗುಂಪೊಂದರ ಸಹಾಯದಿಂದ ಪೊಲೀಸರು ಕಾಮುಕ ಹಂತಕನನ್ನ ಬಂಧಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k