ಲಕ್ನೋ: ಉತ್ತರ ಪ್ರದೇಶ ಪೊಲೀಸರು ಕಳೆದ 72 ಗಂಟೆಗಳಲ್ಲಿ 5 ಎನ್‍ಕೌಂಟರ್ ಗಳನ್ನು ನಡೆಸಿದ್ದು, ಇಬ್ಬರು ರೌಡಿಶೀಟರ್ ಗಳನ್ನು ಹತ್ಯೆ ಮಾಡಿದ್ದಾರೆ. ಅಲ್ಲದೇ ಎನ್‍ಕೌಂಟರ್ ವೇಳೆ ರೌಡಿಗಳಿಂದ ಎಕೆ-47 ಗನ್ ವಶಕ್ಕೆ ಪಡೆದಿದ್ದಾರೆ.
ನೋಯ್ಡಾದ ಎನ್‍ಸಿಆರ್ ಘಜಿಯಾಬಾದ್ ಪ್ರದೇಶದಲ್ಲಿ ಎನ್‍ಕೌಂಟರ್ ನಡೆದಿದ್ದು, ಈ ವೇಳೆ ರೌಡಿಶೀಟರ್ ಶರವಣ್ ಚೌದರಿ ಮೃತಪಟ್ಟಿದ್ದಾನೆ. ಶರವಣ್ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಈತ ದೆಹಲಿ ಹಾಗೂ ನೋಯ್ಡಾದಲ್ಲಿ ಕೊಲೆ ಪ್ರಕರಣಗಳನ್ನು ಎದುರಿಸುತ್ತಿದ್ದ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಇದನ್ನೂ ಓದಿ: ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!
Advertisement
Advertisement
ಮತ್ತೊಂದು ಎನ್‍ಕೌಂಟರ್ ನಲ್ಲಿ ಪೊಲೀಸ್ ಹಾಗೂ ಆರೋಪಿಯ ನಡುವೆ ಗುಂಡಿನ ಚಕಾಮಕಿ ನಡೆದಿದ್ದು, ಅಶನ್ ಎಂಬ ಆರೋಪಿಯನ್ನು ಹತ್ಯೆ ಮಾಡಲಾಗಿದೆ. ಈತನ ವಿರುದ್ಧ ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿತ್ತು. ಭಾನುವಾರ ರಾತ್ರಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಮಾಹಿತಿ ಪಡೆದ ಪೊಲೀಸರು ಎಲ್ಲಾ ಚೆಕ್ ಪೋಸ್ಟ್ ಗಳಿಗೆ ಮಾಹಿತಿ ರವಾನಿಸಿದ್ದರು. ಈ ವೇಳೆ ಬೈಕ್ ಮೇಲೆ ಆಗಮಿಸಿದ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿ ದಾಳಿ ನಡೆಸಿದ ವೇಳೆ ಆರೋಪಿಗಳು ಬಲಿಯಾಗಿದ್ದಾನೆ. ಆರೋಪಿಗಳಿಂದ ದರೋಡೆ ಮಾಡಲಾಗಿದ್ದ ಹಣ ಹಾಗೂ 9ಎಂಎಂ ಹ್ಯಾಂಡ್ ಗನ್ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು
Advertisement
Encounter in Noida- Shravan Chaudhay wanted in murder case in Delhi and Noida, rewardee of Rs 50,000 each from Noida and Delhi has died in exchange of fire with Noida police in the morning. One AK 47 and one SBBL gun has been recovered from him: DGP Headquarters
— ANI UP/Uttarakhand (@ANINewsUP) March 25, 2018
Advertisement
ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಎನ್‍ಕೌಂಟರ್ ಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ನೀತಿಗಳನ್ನು ಪ್ರತಿ ಪಕ್ಷಗಳು ಟೀಕಿಸುತ್ತಿದ್ದು, `ಎನ್‍ಕೌಂಟರ್ ರಾಜ್’ ಎಂದು ಕಿಡಿಕಾರಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ರೌಡಿಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಪರಮಾಧಿಕಾರವನ್ನು ನೀಡಿದ್ದಾರೆ. ಇದನ್ನೂ ಓದಿ: ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು
As soon as we were informed about the incident we started rigorous checking & barricading. During the encounter one of our personnel also got injured & is being treated in a hospital. Criminal killed had been involved in various crimes previously: Babloo Kumar, SSP. #Saharanpur pic.twitter.com/R7p8X8AhLH
— ANI UP/Uttarakhand (@ANINewsUP) March 25, 2018