ಲಕ್ನೋ: ಇಂದು ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಹಬ್ಬದ ವಿಶೇಷವಾಗಿ ಸಲ್ಮಾನ್ ಎಂಬ ಹೆಸರಿನ ಮೇಕೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಬರೋಬ್ಬರಿ 8 ಲಕ್ಷಕ್ಕೆ ಮಾರಾಟವಾಗಿದೆ.
ಮೇಕೆಯನ್ನು ದಷ್ಟಪುಷ್ಟವಾಗಿ ಸಾಕಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, ಇದನ್ನು 8 ಲಕ್ಷ ಮಾರಾಟ ಮಾಡುವುದಾಗಿ ಹೇಳಿದ್ದಾರೆ. ತ್ಯಾಗ ಹಾಗೂ ಬಲಿದಾನದ ಅಂಗವಾಗಿ ಅಚರಿಸುವ ಈ ಬಕ್ರೀದ್ ಹಬ್ಬದಲ್ಲಿ ಕುರಿ ಮೇಕೆಗಳು ಅಪಾರ ಪ್ರಮಾಣದಲ್ಲಿ ಮಾರಾಟವಾಗುತ್ತವೆ.
Advertisement
Ahead of Eid al-Adha, a goat named 'Salman' has gone on sale in Gorakhpur. Its owner Mohammad Nizamuddin has quoted the price of Rs 8 lakh for the goat; says, "there is Allah written on its body. We spend Rs 800 on it daily, much more than we spend on us. It weighs 95 kg" pic.twitter.com/r9LTnSWR8b
— ANI UP/Uttarakhand (@ANINewsUP) August 11, 2019
Advertisement
ಸಲ್ಮಾನ್ ಮೇಕೆಯ ವಿಶೇಷತೆಯ ಬಗ್ಗೆ ಹೇಳಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, ಇದಕ್ಕೆ ಈ ಪ್ರಮಾಣದ ಬೆಲೆ ಬರಲು ಆದರ ಮೈ ಮೇಲೆ ಇರುವ ಕಪ್ಪು ಚುಕ್ಕಿಗಳು ಕಾರಣವಾಗಿದೆ. ಏಕೆಂದರೆ ಈ ಕಪ್ಪು ಚುಕ್ಕೆಗಳನ್ನು ಕೂಡಿಸಿದರೆ, ಅರೇಬಿಕ್ ಭಾಷೆಯಲ್ಲಿ `ಅಲ್ಲಾಹ್’ ಎಂಬ ಅರ್ಥ ಬರತ್ತದೆ. ಹೀಗಾಗಿ ಸಲ್ಮಾನ್ ಮೇಕೆಯನ್ನು 8 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾರೆ.
Advertisement
Advertisement
ಇದರ ಜೊತೆಗೆ ಮೇಕೆಯನ್ನು ಸಾಕಲು ದಿನಕ್ಕೆ 700ರಿಂದ 800 ರೂ. ಖರ್ಚು ಮಾಡಿದ್ದೇನೆ. ಇಷ್ಟು ದಿನ ಇದು ನಮ್ಮ ಮನೆಯ ಸದಸ್ಯನಾಗಿತ್ತು, ನಮ್ಮ ಜೊತೆಯಲ್ಲೇ ಮಲಗುತ್ತಿತ್ತು. ನಾವು ತಿನ್ನುವ ಆಹಾರವನ್ನೇ ಅದೂ ತಿನ್ನುತ್ತಿತ್ತು. ಬೇರೆ ಮೇಕೆಗಳ ಹಾಗೇ ನಾವು ಇದಕ್ಕೆ ಹುಲ್ಲು, ಎಲೆ ಮತ್ತು ಸೊಪ್ಪು ಹಾಕಿ ಬೆಳೆಸಿಲ್ಲ ಅದರ ಬದಲು ನಾವು ತಿನ್ನುವ ಚಿಪ್ಸ್, ಹಣ್ಣುಗಳು, ಊಟ ತಿನ್ನಿಸಿ ತುಂಬಾ ಚೆನ್ನಾಗಿ ಬೆಳೆಸಿದ್ದೇವೆ. ಈಗ ಇದರ ತೂಕ ಬರೊಬ್ಬರಿ 95 ಕೆ.ಜಿ ಇದೆ ಎಂದು ಮಾಲೀಕ ನಿಜಾಮುದ್ದೀನ್ ಹೇಳಿದ್ದಾರೆ.
ಈ ಮೇಕೆಗೆ ಇಷ್ಟೊಂದು ಬೆಲೆ ಬರಲು ಅದಕ್ಕೆ ಇಟ್ಟಿರುವ ಹೆಸರು ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಹೆಸರು ಮೇಕೆಗೆ ಇಟ್ಟಿರುವ ಕಾರಣ ಸಲ್ಲು ಅಭಿಮಾನಿಗಳು ಇದಕ್ಕೆ ಜಾಸ್ತಿ ಬೆಲೆ ಕೊಟ್ಟು ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಸಾಂಪ್ರದಾಯಿಕವಾಗಿ, ಹಜ್ ತೀರ್ಥ ಯಾತ್ರೆ ಪ್ರಾರಂಭವಾದ ಎರಡು ದಿನಗಳ ನಂತರ ಈದ್ ಅಲ್-ಅಧಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಪ್ರಾರಂಭದ ದಿನಾಂಕವು ಹೊಸ ಅರ್ಧಚಂದ್ರವನ್ನು ನೋಡುವುದರ ಮೇಲೆ ಅವಲಂಬಿತವಾಗಿರುತ್ತದೆ. ಇದು ಇಸ್ಲಾಂ ಕ್ಯಾಲೆಂಡರ್‍ನಲ್ಲಿ ಪವಿತ್ರ ತಿಂಗಳುಗಳ 10 ನೇ ದಿನದಂದು ಪ್ರಾರಂಭವಾಗುತ್ತದೆ.