ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಭಾರತದ ಸೈನ್ಯ ಮತ್ತು ಸೈನಿಕರ ಪರಾಕ್ರಮಕ್ಕಿಂತ ಚೀನಾ ಮೇಲಿನ ನಂಬಿಕೆಯೇ ಹೆಚ್ಚು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟೀಕಿಸಿದರು.
ಗಲ್ವಾನ್ ಗಡಿಯಲ್ಲಿ ಚೀನಾ ಮತ್ತು ಭಾರತೀಯ ಯೋಧರ ನಡುವೆ ನಡೆದ ಗುದ್ದಾಟದಲ್ಲಿ ಚೀನಾದ 38-50 ಯೋಧರು ಬಲಿ ಆಗಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮವೇ ಹೇಳುತ್ತದೆ. ಆದರೆ ರಾಹುಲ್ ಗಾಂಧಿ ಅವರು ತಮ್ಮ ಯೋಧರ ಸಾವಿನ ಬಗ್ಗೆ ಸುಳ್ಳು ಮಾಹಿತಿ ಹೇಳುವ ಚೀನಾದ ಮಾಧ್ಯಮ ವರದಿಯನ್ನು ನಂಬುವುದರ ಜೊತೆಗ ಭಾರತೀಯ ಸೈನಿಕರ ಧೈರ್ಯ ಮತ್ತು ಶೌರ್ಯದ ಬಗ್ಗೆ ಪ್ರಶ್ನೆ ಕೇಳುತ್ತಾರೆ ಎಂದು ಕಿಡಿಕಾರಿದರು.
Advertisement
Advertisement
ಬಿಜೆಪಿ ಆಡಳಿತದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಚಿತ್ರಣವೇ ಬದಲಾಗಿದೆ. 2014ರವರೆಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ನಾಯಕರನ್ನು ಯಾವ ದೇಶವೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಭಾರತ ಏನನ್ನಾದರೂ ಹೇಳಿದಾಗ ಇಡೀ ಜಗತ್ತು ಕೇಳುತ್ತದೆ ಎಂದರು. ಇದನ್ನೂ ಓದಿ: ಪುನೀತ್ ಫೋಟೋಗಳಿಗೆ ಫುಲ್ ಡಿಮಾಂಡ್ – ಅಂಗಡಿ, ದೇವರ ಮನೆಯಲ್ಲಿಟ್ಟು ಪೂಜೆ
Advertisement
Advertisement
ಭಾರತವು ಇನ್ನು ಮುಂದೆ ದುರ್ಬಲವಾಗಿಲ್ಲ ಎಂದು ನಾವು ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ. ಗಡಿಯೊಳಗೆ ಅಥವಾ ಹೊರಗಿನ ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಅದು ಈಗ ಸಮರ್ಥವಾಗಿದೆ. ಉರಿ ಮತ್ತು ಪುಲ್ವಾಮಾ ದಾಳಿಯ ನಂತರ ನಮ್ಮ ಸೈನಿಕರು ಪಾಕಿಸ್ತಾನದ ಭೂಪ್ರದೇಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿ ನಡೆಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ
ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಪಕ್ಷಗಳು ಅಧಿಕಾರಕ್ಕಾಗಿ ಮಾತ್ರ ಚುನಾವಣೆಗೆ ಸ್ಪರ್ಧಿಸುತ್ತಿವೆ. ಆದರೆ ಬಿಜೆಪಿಯ ಗುರಿ ರಾಷ್ಟ್ರ ನಿರ್ಮಾಣವಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದಲ್ಲಿ ಪಕ್ಷದ ಆಡಳಿತದಲ್ಲಿ ಗೂಂಡಾಗಳ ಚೈತನ್ಯ ಹೆಚ್ಚಿತ್ತು ಮತ್ತು ರಾಜಕೀಯ ವಲಯಗಳಲ್ಲಿಯೂ ಅವರ ಪ್ರಾಬಲ್ಯ ಇತ್ತು. ಬಿಜೆಪಿ ಆಡಳಿತದಲ್ಲಿ ಅದು ಸಂಪೂರ್ಣವಾಗಿ ಬದಲಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.