– ಟಿಎಂಸಿಯಿಂದ ಭ್ರಷ್ಟ ಅಧಿಕಾರಿಗಳ ರಕ್ಷಣೆ
ಕೋಲ್ಕತ್ತಾ: ಸಿಎಂ ಸ್ಥಾನದಲ್ಲಿದ್ದು ಧರಣಿ ನಡೆಸುವುದಕ್ಕಿಂತ ಮತ್ತೊಂದು ಅವಮಾನ ಪ್ರಜಾಪ್ರಭುತ್ವದಲ್ಲಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ.
ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಇಂದು ರಸ್ತೆ ಮಾರ್ಗವಾಗಿ ರ‍್ಯಾಲಿ ನಡೆಯುತ್ತಿದ್ದ ಪುರುಲಿಯಾ ತಲುಪಿದರು. ಅಲ್ಲಿಂದ ಬಂಕುರಾ ಬೃಹತ್ ಸಮಾವೇಶಕ್ಕೂ ರಸ್ತೆ ಮಾರ್ಗವಾಗಿಯೇ ತೆರಳಿದರು. ಈ ಎರಡು ಸಮಾವೇಶದಲ್ಲಿಯೂ ಯೋಗಿ ಆದಿತ್ಯನಾಥ್, ಮಮತಾ ಬ್ಯಾನರ್ಜಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದರು.
Advertisement
Uttar Pradesh Chief Minister Yogi Adityanath in Purulia, West Bengal: Nothing can be more shameful for a democracy than a Chief Minister sitting on a dharna. pic.twitter.com/5HKFsKDbmx
— ANI (@ANI) February 5, 2019
Advertisement
ಮಮತಾ ಬ್ಯಾನರ್ಜಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟ ಅಧಿಕಾರಿಯನ್ನು ರಕ್ಷಿಸುತ್ತಿದ್ದಾರೆ. ಧರಣಿ ನಡೆಸಿ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಪಾರು ಮಾಡಲು ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದೆ. ಭ್ರಷ್ಟಾಚಾರಕ್ಕೆ ಬೆಂಬಲ ನೀಡುವ ಸರ್ಕಾರವನ್ನು ಹೊಡೆದು ಹಾಕಲು ಬಿಜೆಪಿಗೆ ಬೆಂಬಲ ನೀಡಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ಯೋಗಿ ಆದಿತ್ಯನಾಥ್ ಕೇಳಿಕೊಂಡರು.
Advertisement
ಸಿಬಿಐ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಈ ಹಿಂದಿನ ಕಾಂಗ್ರೆಸ್ ಸರ್ಕಾರವೇ ಹೊರತು, ಬಿಜೆಪಿಯಲ್ಲ. ಸಿಬಿಐ ವಿಚಾರಣೆಗೆ ಸಹಕರಿಸಬೇಕು ಅಂತ ಸುಪ್ರೀಂಕೋರ್ಟ್ ರಾಜೀವ್ ಕುಮಾರ್ ಅವರಿಗೆ ಆದೇಶ ನೀಡಿದೆ. ಹೀಗಾಗಿ ಪಶ್ಚಿಮ ಬಂಗಾಳ ಬಿಟ್ಟು ಅಸ್ಸಾಂನಲ್ಲಿ ವಿಚಾರಣೆಗೆ ರಾಜೀವ್ ಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
Advertisement
UP CM Yogi Adityanath on his way to Purulia, WB from Bokaro, Jharkhand: This (West Bengal) government is embroiled in undemocratic and unconstitutional activities and that is the reason why a 'sanyasi' and 'yogi' like me is not being allowed to step on the soil of Bengal. pic.twitter.com/pgS64tqz2T
— ANI (@ANI) February 5, 2019
ಉತ್ತರ ಬಂಗಾಳದ ಬಲೂರ್ಘಾಟ್‍ನಲ್ಲಿ ಫೆಬ್ರವರಿ 3ರಂದು ನಡೆಯುತ್ತಿದ್ದ ರ‍್ಯಾಲಿಯಲ್ಲಿ ಭಾಗವಹಿಸಲು ಯೋಗಿ ಆದಿತ್ಯನಾಥ್ ಅವರು ಹೆಲಿಕಾಪ್ಟರ್ ನಲ್ಲಿ ತೆರಳಲು ಮುಂದಾಗಿದ್ದರು. ಆದರೆ ಯಾವುದೇ ನಿರ್ದಿಷ್ಟ ಕಾರಣ ತಿಳಿಸದೇ ಹೆಲಿಕಾಪ್ಟರ್ ಲ್ಯಾಂಡಿಂಗ್ ಅನುಮತಿಯನ್ನು ಪಶ್ಚಿಮ ಬಂಗಾಳದ ಸರ್ಕಾರ ನಿರಾಕರಿಸಿತ್ತು. ಇದರಿಂದಾಗಿ ಇಂದು ನಡೆದ ಬೃಹತ್ ಸಮಾವೇಶಕ್ಕೆ ಯೋಗಿ ಆದಿತ್ಯನಾಥ್ ಅವರು ರಸ್ತೆ ಮಾರ್ಗವಾಗಿಯೇ ತಲುಪಬೇಕಾಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv