ಲಕ್ನೋ: ಅಯೋಧ್ಯೆಯನ್ನು ಪ್ರಭು ಶ್ರೀರಾಮನ ಜನ್ಮಸ್ಥಳವೆಂದು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. 2024ರಲ್ಲಿ ಅಂದರೆ, ಕಳೆದ ವರ್ಷವಷ್ಟೇ ಅಯೋಧ್ಯೆಯಲ್ಲಿ ರಾಮ ದೇವಾಲಯದ (Ayodhya Ram temple) ನಿರ್ಮಾಣ ಕಾರ್ಯ ಪೂರ್ಣಗೊಂಡು ಲಕ್ಷಾಂತರ ಜನರು ಇಲ್ಲಿನ ರಾಮನ ದರ್ಶನ ಪಡೆದುಕೊಂಡಿದ್ದಾರೆ. ಅಯೋಧ್ಯೆಯಲ್ಲಿನ ರಾಮ ಮಂದಿರವು ಹಿಂದೂ ಧರ್ಮೀಯರ ಜೀವಾಳವಾಗಿದೆ. ಇದೀಗ ಅಯೋಧ್ಯೆಯ ಬಾಲ ರಾಮನ ಪ್ರತಿಷ್ಠಾಪನೆಯಾಗಿ ವರ್ಷ ತುಂಬಿದೆ. ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದ ಸಂಭ್ರಮ ಇಂದಿನಿಂದ ಮೂರು ದಿನಗಳ ಕಾಲ ಜರುಗಲಿದೆ.
#WATCH | Uttar Pradesh: Devotees arrive at Ayodhya Ram temple on the occasion of the first anniversary of ‘Pran Pratishtha’ pic.twitter.com/G7fUpjpnaB
— ANI (@ANI) January 11, 2025
Advertisement
ಶುಭ ಯೋಗಗಳು ಹಾಗೂ ದ್ವಾದಶಿ ತಿಥಿಯು 2025ರಲ್ಲಿ ಜನವರಿ 11 ರಂದು ಬಂದಿರುವುದರಿಂದ ಅಯೋಧ್ಯೆ ರಾಮ ಮಂದಿರದ ವಾರ್ಷಿಕ ಪ್ರಾಣ ಪ್ರತಿಷ್ಠಾಪನೆಯನ್ನು ಜನವರಿ 22ರ ಬದಲಾಗಿ ಜನವರಿ 11ರಂದು ಆಚರಿಸಲಾಗುತ್ತಿದೆ. ಈಗಾಗಲೇ ಅಯೋಧ್ಯೆಯ ರಾಮ ಮಂದಿರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಒಂದೊಂದೇ ಕಾರ್ಯಕ್ರಮಗಳು ನೆರವೇರುತ್ತಿವೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ – ವಿದ್ಯಾರ್ಥಿ ಅರೆಸ್ಟ್
Advertisement
Advertisement
ಇಂದಿನಿಂದ 3 ದಿನ ಏನೇನು ಕಾರ್ಯಕ್ರಮ?
* ಜ.11ರ ಮೊದಲ ದಿನ ಪ್ರತಿಷ್ಠಾ ದ್ವಾದಶಿಯ ಆರಂಭಿಕ ದಿನ, ಕಳೆದ ವರ್ಷದ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮದಂತೆಯೇ ಕಾರ್ಯಕ್ರಮ ಆರಂಭ
* ‘ಪಂಚಾಮೃತ’ ಮತ್ತು ಸರಯೂ ಜಲದ ಅಭಿಷೇಕವನ್ನು ಒಳಗೊಂಡಂತೆ ಅಭಿಷೇಕ ಸಮಾರಂಭ ಬೆಳಗ್ಗೆ 10 ಗಂಟೆಗೆ ಶುರು
* ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ರಾಮಲಲ್ಲಾಗೆ ಅಭಿಷೇಕ
* ಮಧ್ಯಾಹ್ನ 12.20ಕ್ಕೆ ಪ್ರಾಥಮಿಕ ಆರತಿ
* ಚಿನ್ನದ ಮತ್ತು ಬೆಳ್ಳಿಯ ಎಳೆಗಳಿಂದ ದೆಹಲಿಯಲ್ಲಿ ತಯಾರಿಸಿದ ವಿಶಿಷ್ಟ ಪೀತಾಂಬರಿಯಿಂದ ರಾಮಲಲ್ಲಾ ಮೂರ್ತಿಯ ಅಲಂಕಾರ
* ಬಳಿಕ 3 ದಿನ ಕಾಲ ಮಂಟಪ ಮತ್ತು ಯಜ್ಞಶಾಲೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮಗಳು, ಶಾಸ್ತ್ರೀಯ ಸಾಂಸ್ಕೃತಿಕ ಪ್ರದರ್ಶನಗಳು, ವಿವಿಧ ಆಚರಣೆಗಳು ಮತ್ತು ದೈನಂದಿನ ರಾಮಕಥಾ ಪ್ರವಚನಗಳು ಏರ್ಪಾಡು
* 110 ಗಣ್ಯರು, ಜನಸಾಮಾನ್ಯರು ಸೇರಿ 5,000 ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ
Advertisement
ವಾರ್ಷಿಕೋತ್ಸವ ಇಂದೇ ಏಕೆ?
2024ರಲ್ಲಿ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಜನವರಿ 22ರಂದು ನಡೆಸಲಾಯಿತು. ಆದರೆ, ಈ ವರ್ಷ ಅಂದರೆ 2025ರಲ್ಲಿ ಅಯೋಧ್ಯೆ ರಾಮ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವವನ್ನು ಜನವರಿ 11 ರಂದು ಶನಿವಾರ ಆಚರಿಸಲಾಗುತ್ತಿದೆ. ಯಾಕೆಂದರೆ, ವೈದಿಕ ಸನಾತನ ಸಂಸ್ಕೃತಿಯ ಕ್ಯಾಲೆಂಡರ್ ಪ್ರಕಾರ, 2025ರಲ್ಲಿ ಪುಷ್ಯ ಮಾಸದ ಕೂರ್ಮ ದ್ವಾದಶಿಯು ಜನವರಿ 11 ರಂದು ಬರಲಿದೆ. ಕೂರ್ಮ ದ್ವಾದಶಿಯ ಆಧಾರದ ಮೇಲೆ ಅಯೋಧ್ಯೆ ರಾಮ ಮಂದಿರದ ಪ್ರತಿಷ್ಠಾಪನಾ ಮಹೋತ್ಸವವನ್ನು ಆಚರಿಸಲಾಗುವುದು. ಈ ವರ್ಷ ಅಂದರೆ 2025ರ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆಯು ಸಂಪೂರ್ಣವಾಗಿ ಒಂದು ವರ್ಷವನ್ನು ಪೂರೈಸಲಿದೆ.
ಪ್ರಾಣ ಪ್ರತಿಷ್ಠಾಪನೆಯ ದಿನ ರೂಪುಗೊಂಡ ಶುಭ ಯೋಗಗಳು:
2025ರ ಜನವರಿ 11ರಂದು ಶನಿವಾರ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯು ಇರಲಿದೆ. ಈ ದಿನ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವ ಆಚರಿಸಲಾಗುವುದು. ಈ ಶುಭ ದ್ವಾದಶಿ ತಿಥಿಯಂದು ಹತ್ತು ಶುಭ ಯೋಗಗಳು ಏಕಕಾಲದಲ್ಲಿ ರೂಪುಗೊಳ್ಳುತ್ತಿವೆ. ಇದನ್ನೂ ಓದಿ: ಕುಂಭಮೇಳದಲ್ಲಿ ಭಾಗಿಯಾಗ್ತಾರೆ ಆ್ಯಪಲ್ ಸಹ-ಸಂಸ್ಥಾಪಕ ಸ್ವೀವ್ ಜಾಬ್ಸ್ ಪತ್ನಿ
* ಈ ದಿನದ ನಕ್ಷತ್ರ – ಮೃಗಶಿರ ನಕ್ಷತ್ರ ಈ ದಿನದ ಶುಭ ಯೋಗಗಳು
* ಶುಕ್ಲಯೋಗ
* ಬ್ರಹ್ಮ ಯೋಗ
* ಬಾಲವ ಯೋಗ
* ಕೌಲವ ಯೋಗ
* ತೈತಿಲ ಯೋಗ
* ರೋಹಿಣಿ ಯೋಗ
* ಸರ್ವಾರ್ಥ ಸಿದ್ಧಿ ಯೋಗ
* ಅಮೃತ ಸಿದ್ಧಿ ಯೋಗ
* ಕೈಲಾಸ ಯೋಗ
* ನಂದಿ ಯೋಗ