ಮಂಗಳೂರು: ಕಸಾಯಿಖಾನೆಗೆ 15 ಕೋಟಿ ರೂ. ಅನುದಾನ ನೀಡಿದ ವಿವಾದ ವಿಚಾರವಾಗಿ ಸ್ಪಷ್ಟನೆ ನೀಡಿ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವಾಗಿ ತಿಳಿಸಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕಸಾಯಿಖಾನೆಗೆ ನೀಡಿರುವ ಅನುದಾನವನ್ನು ಸುಖಸುಮ್ಮನೆ ವಿವಾದ ಮಾಡಲಾಗಿದೆ. ಇದು ತಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಅದ್ದರಿಂದ ಈ ಕುರಿತು ಸ್ಪಷ್ಟನೆ ನೀಡಿ ಪ್ರಧಾನ ಮಂತ್ರಿ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆಯುತ್ತೇನೆ. ಅಲ್ಲಿಂದ ಬರುವ ಪತ್ರಿಕ್ರಿಯೆ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಯು.ಟಿ ಖಾದರ್ ತಿಳಿಸಿದ್ದಾರೆ.
Advertisement
Advertisement
ನಗರದಲ್ಲಿ ಇರುವ ಕುರಿ, ಆಡು ಕಸಾಯಿಖಾನೆಗೆ ನೀಡುವಂತೆ ನಗರ ಸ್ವಚ್ಛತೆಯ ದೃಷ್ಟಿಯಿಂದ ಅನುದಾನ ಬಿಡುಗಡೆ ಮಾಡಲು ಶಿಫಾರಸ್ಸು ಮಾಡಿದ್ದೇವು. ಆದರೆ ಈ ಕುರಿತು ಚುನಾಯಿತ ಜನಪತ್ರಿನಿಧಿಗಳು, ಕೆಲ ಸಂಸ್ಥೆಗಳು ವಿವಾದ ಉಂಟಾಗಿತ್ತು. ಇದರಿಂದ ಜನರ ನಡುವೆಯೂ ವೈಮನಸ್ಸು ಹೆಚ್ಚಾಗುವುದಕ್ಕೆ ಅವಕಾಶ ಇದೆ. ಅದ್ದರಿಂದ ಪ್ರಧಾನಿ ಮೋದಿ ಅವರಿಂದ ಬರುವ ಉತ್ತರದಂತೆ ಮುಂದೆ ಕ್ರಮಕೈಕೊಳ್ಳುತ್ತೇನೆ. ಈ ವಿವಾದದ ಕುರಿತು ಮತ್ತೆ ಯಾರು ಆರೋಪ, ಪ್ರತ್ಯಾರೋಪ ಮಾಡುವುದು ಬೇಡ ಎಂದು ಮನವಿ ಮಾಡಿದರು.
Advertisement
ಕಸಾಯಿಖಾನೆಗೆ ಹಣ ಮಂಜೂರು ಮಾಡಲು ಅನುಮತಿ ಕೋರಿ ಮಾತ್ರ ಶಿಫಾರಸ್ಸು ಪತ್ರ ಬರೆಯಲಾಗಿದೆ. ಸ್ವಚ್ಛತೆ ದೃಷ್ಟಿಯಿಂದ ಅನಿವಾರ್ಯವಾಗಿದ್ದು, ಕೆಲವರು ಕಸಾಯಿಖಾನೆ ಬದಲಿಗೆ ಗೋಶಾಲೆಗೆ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ನನ್ನ ಸಹಮತ ಇದೆ. ಆದರೆ ಅದಕ್ಕೆ ಅವಕಾಶ ಇದೆಯಾ ಎಂದು ಸ್ಪಷ್ಟನೆ ಬಯಸಿದ್ದೇನೆ. ಈ ಕುರಿತು ಯಾರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದು ಬೇಡ. ಅದ್ದರಿಂದಲೇ ನಾನು ಈ ಕ್ರಮಕ್ಕೆ ಮುಂದಾಗಿದ್ದೇನೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv