
ಬೆಳಗಾವಿ: ಚಳಿಗಾಲದ ಅಧಿವೇಶನ ನಡೆಯುತ್ತಿರುವ ಕನ್ನಡ ಸೌಧದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ ಇಂದು ದಿಢೀರ್ ದಾಳಿ ನಡೆಸಿದ್ರು.
Advertisements
ವಿಧಾನ ಪರಿಷತ್‍ನ ಮೊಗಸಾಲೆಯ ಕ್ಯಾಂಟೀನ್‍ನಲ್ಲಿ ಬಿಸ್ಕೆಟ್ ಪ್ಯಾಕೆಟ್, ಆಹಾರ ಪದಾರ್ಥಗಳನ್ನು ಎಂಆರ್‍ಪಿ ಗಿಂತ ಅಧಿಕ ಬೆಲೆಗೆ ಮಾರಾಟ ಮಾಡ್ತಿರೋದು ಬಯಲಾಯ್ತು.
Advertisements
ಸಾರ್ವಜನಿಕರ ರೀತಿಯಲ್ಲಿ ಹಣ ನೀಡಿ ಬಿಸ್ಕೆಟ್ ಮತ್ತಿತರೆ ಆಹಾರ ಪದಾರ್ಥಗಳನ್ನು ಯುಟಿ ಖಾದರ್ ಖರೀದಿಸಿದಾಗ ಮಾಲೀಕರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು. ಅಸಿಸ್ಟೆಂಟ್ ಫುಡ್ ಕಂಟ್ರೋಲರ್ ಜೊತೆ ಬಂದು ಯುಟಿ ಖಾದರ್ ಈ ಕಾರ್ಯಾಚರಣೆ ನಡೆಸಿದ್ರು. ಎಂಆರ್‍ಪಿಗಿಂತ ಅಧಿಕ ದರಕ್ಕೆ ವ್ಯಾಪಾರ ಮಾಡ್ತಿದ್ದ ವರ್ತಕರಿಗೆ ನೋಟಿಸ್ ನೀಡುವಂತೆಯೂ ಅಧಿಕಾರಿಗಳಿಗೆ ಖಾದರ್ ಸೂಚಿಸಿದ್ರು.
Advertisements
Advertisements