ಬೆಂಗಳೂರು: ಜನಕ್ಕೆ ವಿರೋಧ ಪಕ್ಷದಲ್ಲಿ ಏನಾಗ್ತಿದೆ ಅನ್ನೋದು ಬೇಕಿಲ್ಲ. ಆಡಳಿತ ಪಕ್ಷದಲ್ಲಿ ಏನಾಗ್ತಿದೆ ಅಂತ ನೋಡುತ್ತಿದ್ದಾರೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಮೂರು ಜನ ಮುಖ್ಯಮಂತ್ರಿಗಳು ಆಗಿದ್ದಾರೆ. ಈಗ ಇಬ್ಬರು ಮುಖ್ಯಮಂತ್ರಿಗಳ ಆಗಿದ್ದಾರೆ. ಜನ ಇವರ ಆಡಳಿತದಿಂದ ಬೇಸತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್‍ನಲ್ಲಿ ಪ್ಲಾನ್ ಎಂಬ ಸಚಿವ ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಬಗ್ಗೆ ಕಾಳಜಿ ತೋರಿಸಿದ ಅಶೋಕ್‍ಗೆ ಧನ್ಯವಾದಗಳು. ಆದರೆ ನಮ್ಮಲ್ಲಿ ಯಾವುದೇ ಒಡಕು ಇಲ್ಲ. ನಾವು ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಹೈಕಮಾಂಡ್‍ನಿಂದ ಡಿಕೆಶಿಗೆ ಟಾಸ್ಕ್
Advertisement
Advertisement
ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ವಿಧ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವರ ಸಮಸ್ಯೆ ಬಗೆಹರಿಸಬೇಕು. ರಾಜೀವ್ ಗಾಂಧಿ ವಿವಿ ಜತೆ ಚರ್ಚೆ ಮಾಡಿ ಮಾರ್ಗ ಹುಡುಕಿಕೊಳ್ಳಬೇಕು. ನೀಟ್ ಇಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗ್ತಿದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿಲ್ಲ. ನೀಟ್ ತೆಗೆದುಹಾಕಿ ಸಿಇಟಿ ಮೇಲೆ ಸೀಟ್ ಕೊಡಲಿ. ನೀಟ್ ಬೇಡ ಸಿಇಟಿ ಪರೀಕ್ಷೆ ಜಾರಿ ಆಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮನ್ ಕಿ ಬಾತ್ ನಾರಿ ಶಕ್ತಿ ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ