ನವದೆಹಲಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹಿಳೆಯರನ್ನು ಶ್ಲಾಘಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಮಹಿಳೆಯರ ಸ್ಪೂರ್ತಿದಾಯಕ ಹಾಗೂ ಸಾಧನೆಯನ್ನು ಎತ್ತಿ ತೋರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ ಕೇರಳದಲ್ಲಿ ಮಹಿಳೆಯರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣ
Advertisement
During the various #MannKiBaat episodes, we have showcased different aspects of women empowerment and highlighted the life journeys of inspiring women who have brought grassroot level changes.
Here is a video that highlights how ‘Mann Ki Baat’ has celebrated our Nari Shakti…. pic.twitter.com/wIo6kHC234
— Narendra Modi (@narendramodi) March 8, 2022
Advertisement
ಮನ್ ಕಿ ಬಾತ್ ಕಾರ್ಯಕ್ರಮದ ವಿವಿಧ ಸಂಚಿಕೆಗಳಲ್ಲಿ ನಾವು ಮಹಿಳಾ ಸಬಲೀಕರಣದ ವಿವಿಧ ಅಂಶಗಳನ್ನು ತೋರಿಸಿದ್ದೇವೆ. ತಳಮಟ್ಟದಿಂದ ಮಹಿಳೆಯರನ್ನು ಪ್ರೇರೇಪಿಸುವ ಜೀವನ ಪಯಣವನ್ನು ಪ್ರದರ್ಶಿಸಿದ್ದೇವೆ. ಮನ್ ಕಿ ಬಾತ್ ಕಾರ್ಯಕ್ರಮ ನಾರಿ ಶಕ್ತಿಯ ಸಂಭ್ರಮವನ್ನು ಆಚರಿಸಿರುವ ವೀಡಿಯೋ ಇಲ್ಲಿದೆ ಎಂದು ಮೋದಿ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
Advertisement
ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಇದಕ್ಕಾಗಿ ಮಹಿಳೆಯರಿಗೆ ಘನತೆ ಹಾಗೂ ಅವಕಾಶಗಳನ್ನೂ ನೀಡಿದೆ ಎಂದಿದ್ದಾರೆ. ಇದನ್ನೂ ಓದಿ:ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ
Advertisement
On Women’s Day, I salute our Nari Shakti and their accomplishments in diverse fields. The Government of India will keep focusing on women empowerment through its various schemes with an emphasis on dignity as well as opportunity.
— Narendra Modi (@narendramodi) March 8, 2022
ಮಹಿಳಾ ದಿನದಂದು ನಮ್ಮ ನಾರಿ ಶಕ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರಿಗೆ ನಾನು ವಂದಿಸುತ್ತೇನೆ. ಆರ್ಥಿಕ ಸೇರ್ಪಡೆಯಿಂದ ಸಾಮಾಜಿಕ ಭದ್ರತೆ, ಗುಣಮಟ್ಟದ ಆರೋಗ್ಯ ಸೇವೆಯಿಂದ ವಸತಿ, ಶಿಕ್ಷಣದಿಂದ ಉದ್ಯಮಶೀಲತೆಗೆ ನಾರಿ ಶಕ್ತಿ ಭಾರತವನ್ನು ಮುಂಚೂಣಿಯಲ್ಲಿಡಲು ಹಲವು ಪ್ರಯತ್ನಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳು ಇನ್ನೂ ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಯಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.