Connect with us

Bengaluru City

ತಾಮ್ರ ಬಳಸಿದ್ರೆ ಬರುತ್ತೆ ಜೀವಕ್ಕೆ ಕುತ್ತು

Published

on

ಬೆಂಗಳೂರು: ತಾಮ್ರದ ಬಾಟೆಲ್‍ನಲ್ಲಿ ನೀರು ಹಾಗೂ ತಾಮ್ರದ ಲೋಟದಲ್ಲಿ ಹಾಲು ಕುಡಿಯುವವರು ಈ ಸುದ್ದಿ ನೋಡಲೇಬೇಕು. ಏಕೆಂದರೆ ತಾಮ್ರ ಬಳಸುವುದರಿಂದ ನಿಮ್ಮ ಜೀವಕ್ಕೆ ಅಪಾಯವಾಗಲಿದೆ.

ಎಲ್ಲೆಡೆ ತಾಮ್ರದ ದರ್ಬಾರ್ ಶುರುವಾಗಿದ್ದು, ನೀವು ತೆಳ್ಳಗಾಗಬೇಕೆಂದರೆ, ಬಿಪಿ, ಶೂಗರ್, ಟೆನ್ಶನ್ ಕಡಿಮೆ ಆಗಬೇಕೆಂದರೆ ಕಾಪರ್ ನಲ್ಲಿ ನೀರು ಕುಡಿಯಿರಿ ಎಂದು ಹಲವು ಮಂದಿ ಸಲಹೆ ನೀಡುತ್ತಾರೆ. ಅಚ್ಚರಿಯಂದರೆ ಕಾಪರ್ ಅತಿಯಾದ್ರೆ ಪಿತ್ತಕೋಶ (ಲಿವರ್) ಕಾಯಿಲೆ ಬರುತ್ತದೆ ಎಂಬ ವಿಚಾರ ವಿಶ್ವ ಮಟ್ಟದಲ್ಲಿ ವರದಿಯಾಗಿದೆ.

ಮಾಲ್‍ನಿಂದ ಹಿಡಿದು ಗಲ್ಲಿಗಲ್ಲಿಗಳಲ್ಲೂ ತಾಮ್ರದ ಮಾರಾಟ ಜೋರಾಗಿದೆ. ಒಂದು ಲೀಟರ್ ನೀರು ಹಿಡಿಯುವ ತಾಮ್ರದ ಬಾಟೆಲ್‍ಗೆ ಕನಿಷ್ಠ ಅಂದರೂ 1300 ರೂ. ಕೊಡಲೇ ಬೇಕು. ಇಷ್ಟಾದರೂ ಆರೋಗ್ಯ ಎಂದು ಹೇಳಿ ಜನ ತಾಮ್ರದ ಮೇಲೆ ಹಣ ಹಾಕುತ್ತಿದ್ದಾರೆ. ರಾತ್ರಿಯಲ್ಲಿ ತಾಮ್ರದೊಳಗೆ ನೀರಿಟ್ಟು ಬೆಳಗ್ಗೆ ಕುಡಿದರೆ ಗ್ಲೋ ಬರುತ್ತೆ, ಆರೋಗ್ಯವಾಗಿರುತ್ತಾರೆ ಎಂದು ಹತ್ತು ಹಲವು ಕಾರಣಗಳಿಗೆ ಕಾಪರ್ ಫೇಮಸ್ ಆಗಿದೆ.

ಅಚ್ಚರಿ ಏನೆಂದರೆ ರಾತ್ರಿಯಿಡೀ ತಾಮ್ರದಲ್ಲಿ ನೀರಿಟ್ಟು ಕುಡಿದರೆ ಕಾಯಿಲೆ ಬರಲಿದೆ. ಪೌಷ್ಠಿಕತೆಗೆ ಕಾಪರ್ ವರವೂ ಹೌದು, ವಿಷವೂ ಹೌದು. ರಾತ್ರಿಯಲ್ಲಿ ಕಾಪರಿನಲ್ಲಿ ನೀರಿಟ್ಟು ಬೆಳಗ್ಗೆ ಕುಡಿದರೆ ಶೇ. 4 ಸಾವಿರದಷ್ಟು ಕಾಪರ್ ಪ್ರಮಾಣ ಜಾಸ್ತಿಯಾಗಿರುತ್ತದೆ. ಆಗ ನೀರಿನಲ್ಲಿ ಕಾಪರ್ ಲಿಚ್ಚಿಂಗ್ ಆದಾಗ ಮೆಟಲ್ ಪ್ರಮಾಣ ಹೆಚ್ಚಾಗಿ ರಾತ್ರಿಯಿಂದ ಬೆಳಗ್ಗೆ ಆಗುವ ಬದಲಾವಣೆಗಳು ಲಿವರ್ ಡ್ಯಾಮೇಜ್ ಮಾಡುತ್ತದೆ. ಇದನ್ನು ವೀಲಸನ್ ಡಿಸೀಸ್ (ವಿಲ್ಸನ್ ರೋಗ) ಎಂದು ಕರೆಯುತ್ತಾರೆ.

ಒಂದು ದಿನಕ್ಕೆ ನಮ್ಮ ದೇಹಕ್ಕೆ 1.1 ಎಂ.ಜಿ ಮಾತ್ರ ತಾಮ್ರ ಸಾಕು. ಅನ್ನ ತಿಂದರು ಅಲ್ಲಿ ಕಾಪರ್ ಸಿಗಲಿದೆ. ಆದರೂ ತಾಮ್ರ ಬಳಸುತ್ತೇವೆ. ಕಾಪರ್ ವಿಷ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಈ ಪ್ರಕಾರ ಆತ್ಮಹತ್ಯೆಗೆ ಹಲವೆಡೆ ಕಾಪರ್ ಸೆಲ್ ಫೈಡ್ ಕುಡಿಯುತ್ತಾರೆ, ಕುಡಿದರೆ ಸಾಯುತ್ತಾರೆ ಎಂಬ ಸತ್ಯ ರುಜುವತ್ತಾಗಿದೆ. ಹೀಗಾಗಿ ಕಾಪರ್ ಪ್ರಮಾಣ ದೇಹ ಸೇರಿದರೆ ಅಪಾಯವಾಗುತ್ತದೆ.

ಕಾಪರ್ ಬಳಕೆಯ ಸೈಡ್ ಎಫೆಕ್ಟ್ ಗೊತ್ತಿರುವವರು, ವ್ಯಾಪಾರಿಗಳು, ಕಾಪರ್ ಬಗ್ಗೆ ಜಾಸ್ತಿ ಕೇಳಿದರೆ ಮಾತನಾಡಲು ಹಿಂದೇಟು ಹಾಕುತ್ತಾರೆ. ಇಷ್ಟಲ್ಲದೇ ಕಾಪರ್ ಎಂದರೆ ಮೆಟಲ್. ಪಿತ್ತಕೋಶಕ್ಕೆ ಹೋದ ಮೆಟಲ್ ಹೊರತರುವುದು ಕಷ್ಟವಾಗುತ್ತದೆ. ಆಗ ದೇಹದಲ್ಲಿ ಮೆಟಲ್ ಸಂಗ್ರಹವಾಗಿ ಕಾಯಿಲೆಗಳು ಉದ್ಭವವಾಗುತ್ತದೆ.

ಕಾಪರ್ ಪ್ರಮಾಣ ಹೆಚ್ಚಾದ್ರೆ ಆಗುವ ತೊಂದರೆಗಳ ಪಟ್ಟಿ;
* ಕಿಡ್ನಿ ಸಮಸ್ಯೆ
* ಖಿನ್ನತೆ, ವ್ಯಕ್ತಿತ್ವ ಬದಲಾವಣೆ
* ರಕ್ತ ಸಂಬಂಧಿ ಸಮಸ್ಯೆ

ಕಾಪರ್ ಪ್ರಮಾಣ ಹೆಚ್ಚಾದ್ರೆ ಕಾಣಿಸಿಕೊಳ್ಳಲು ಲಕ್ಷಣಗಳು;
* ಅಪಾರ ಪ್ರಮಾಣದ ಹೊಟ್ಟೆ ನೋವು
* ಚರ್ಮ ಹಳದಿ ಬಣ್ಣಕ್ಕೆ ತಿರುಗಿ, ಕಣ್ಣುಗಳು ಬೆಳ್ಳಗೆ ಆಗುವುದು
* ಹೊಟ್ಟೆ ಹಾಗೂ ಕಾಲುಗಳ ಬಳಿ ನೀರಿನ ಪ್ರಮಾಣ ಶೇಖರಣೆ
* ಮಾತನಾಡುವಾಗ ತೊದಲುವುದು, ಮಾತು- ದೇಹ ಸನ್ಹೆಯಲ್ಲಿ ವ್ಯತ್ಯಯ
* ಸ್ನಾಯು ಠೀವಿ (ಸೆಳೆತ)
* ಬ್ರೈನ್ ಸಮಸ್ಯೆ

ಕಾಪರ್ ಮೆಟಲ್ ಸಾಲದು ಎಂದು ಅದರಲ್ಲಿ ಮಾಡುವ ಟೀ, ಕಾಫಿ ಗಟ್ಟಿಯಾಗಲಿ ಎಂದು ಮತ್ತೊಂದು ಮೆಟಲ್ ಹಾಕುತ್ತಾರೆ.
ಪ್ರತಿನಿಧಿ- ಸರ್ ತಾಮ್ರದಲ್ಲಿ ಯಾಕ್ ಮಾಡುವುದು
ವ್ಯಾಪಾರಿ- ತಾಮ್ರದಲ್ಲಿ ಕಾಯಿಸಿದ್ರೆ ಗಟ್ಟಿಯಾಗುತ್ತೆ
ಪ್ರತಿನಿಧಿ – ಏನಾದ್ರೂ ರೀಸನ್ ಇದೇಯಾ. ಹೆಲ್ತ್ ಚೆನ್ನಾಗಿ ಆಗುತ್ತೆ ಅಂತ
ವ್ಯಾಪಾರಿ – ಹಾಗಂತ ಹೇಳ್ತಾ ಇದ್ದಾರೆ ಮೇಡಂ
ಪ್ರತಿನಿಧಿ – ಟೆಸ್ಟ್
ವ್ಯಾಪಾರಿ – ಹೌದು ಚೆನ್ನಾಗಿರುತ್ತೆ, ಗಟ್ಟಿ ಬರುತ್ತೆ ಸ್ವಲ್ಪ
ಪ್ರತಿನಿಧಿ – ಆದ್ರೆ ಕೆಲವು ರಿಪೋರ್ಟ್ ಹೇಳುತ್ತೆ ತಾಮ್ರ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ
ವ್ಯಾಪಾರಿ – ಮತ್ತೆ ನೀರು ಅದ್ರಲ್ಲೇ ಕುಡಿಯುತ್ತಾರಲ್ಲ ಮೇಡಂ
ಪ್ರತಿನಿಧಿ – ಸ್ಟೀಲ್ ಪಾತ್ರೆಗಿಂತ ಸ್ವಲ್ಪ ಕಾಸ್ಲ್ಟಿ ಅಲ್ವ
ವ್ಯಾಪಾರಿ – ತಿಂಗಳಿಗೆ ಒಂದ್ ಸಲ ಕಡಾಯ್ ಮಾಡಿಸ್ತೀವಿ, ಅದಕ್ಕೆ 350 ತೆಗೆದುಕೊಳ್ಳುತ್ತಾರೆ. ತಳ ಕಚ್ಚಬಾರದು ಅಂತಲೇ ಅದರಲ್ಲಿ ಕಾಯಿಸೊದು..

ಪಾತ್ರೆಗಳಿಗೆ ಕಡಾಯ್ ಮಾಡಿಸಿದ್ರೆ ಅದರಲೂ ಮೆಟಲ್ ಇರುತ್ತೆ. ತಾಮ್ರ, ಕಡಾಯ್ ಎರಡು ಸೇರಿ ಲಿವರ್ ಮತ್ತಷ್ಟು ಹಾಳಾಗುತ್ತದೆ. ನಿರಂತರವಾಗಿ 2 ತಿಂಗಳು ಕಾಪರ್ ಬಳಸಿದರೆ ಕಾಯಿಲೆ ಬರುತ್ತದೆ. ಭಾರತದಲ್ಲಿ ಪ್ರತಿ ವರ್ಷ 100 ಕೇಸ್ ಈ ರೀತಿ ಬೆಳಕಿಗೆ ಬರುತ್ತಿದೆ.

ಕಾಪರ್ ಬಳಸಲು ಒಂದು ಉಪಾಯವಿದೆ. ಕಾಪರ್ ನಲ್ಲಿ ನೀರು, ಹಾಲು ಏನ್ ಹಾಕಿದರೂ ತಕ್ಷಣ ಉಪಯೋಗಿಸಬೇಕು. ಆದರೆ ತಡ ಮಾಡಿದರೆ ಮೆಟಲ್ ಪ್ರಮಾಣ ಆಹಾರ ಸೇರುತ್ತದೆ. ಸೈಡ್ ಎಫೆಕ್ಟ್ ಶುರುವಾಗುತ್ತದೆ.

Click to comment

Leave a Reply

Your email address will not be published. Required fields are marked *