ಉಡುಪಿ: ಹಿಂದೂ ಸಂಕೇತಗಳನ್ನು (Hindu Symbols) ಬಳಸಿ ಹಿಂದೂ ಸಮಾಜದ ಮೇಲೆ ದೃಷ್ಕೃತ್ಯಗಳನ್ನು ನಡೆಸಲಾಗುತ್ತಿದ್ದು, ಪ್ರತಿಯೊಬ್ಬರೂ ಸದಾ ಜಾಗೃತರಾಗಿಬೇಕು ಎಂದು ಉಡುಪಿ ಮಠದ (Udupi Mutt) ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ (Vishwaprasanna Teertha Swamiji) ಎಚ್ಚರಿದ್ದಾರೆ.
Advertisement
ಉಡುಪಿ ಮಠದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಹಿಂದೂ ಸಮಾಜದ ಮೇಲೆ ದುಷ್ಕೃತ್ಯ ಹೇರುತ್ತಿದ್ದಾರೆ. ಮಂಗಳೂರು ಬಾಂಬರ್ (Mangaluru Bomb Blast) ಉಡುಪಿ ಮಠದ ಸುತ್ತಮುತ್ತ ಓಡಾಟ ನಡೆಸಿದ್ದಾನೆ ಅನ್ನೋ ಮಾಹಿತಿ ಇದೆ. ಕರಾವಳಿ ಭಾಗದ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ ಗೊತ್ತಾಗಿದೆ. ಆದ್ದರಿಂದ ಕರಾವಳಿ ಭಾಗದ ಜನರು ಸದಾ ಜಾಗೃತರಾಗಿರಬೇಕು. ಸಂದೇಹಾಸ್ಪದ ಚಟುವಟಿಕೆಗಳು ಕಂಡ ಕೂಡಲೇ ಎಚ್ಚೆತ್ತುಕೊಂಡು ಪೊಲೀಸರಿಗೆ ಮಾಹಿತಿ ನೀಡಬೇಕು. ಸರ್ಕಾರ ಸಂಬಂಧಿಸಿದ ಇಲಾಖೆಗೆ ಕೂಡಲೇ ಸೂಚನೆ ನೀಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಂಧ್ರ ಸಿಎಂ ಜಗನ್ ಸಹೋದರಿ ಅರೆಸ್ಟ್
Advertisement
Advertisement
ಉತ್ಥಾನ ದ್ವಾದಶಿ ಬಳಿಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಯಕ್ಷಗಾನ, ಕೋಲ, ಉತ್ಸವ, ಕಂಬಳ, ದೀಪೋತ್ಸವ, ನಾಗಮಂಡಲದಂತಹ ಹಲವಾರು ಉತ್ಸವಗಳು ನಡೆಯುತ್ತಿವೆ. ಕಾರ್ಯಕ್ರಮಗಳಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಅನಾಹುತ ನಡೆದಲ್ಲಿ ನಮ್ಮ ಸಮಾಜಕ್ಕೆ ದೊಡ್ಡ ಹಾನಿಯುಂಟಾಗುತ್ತದೆ. ಹಿಂದೂ ಸಮಾಜದ ಮೇಲೆ ದುಷ್ಕೃತ್ಯ ಹೇರುವಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಪ್ರತಿಯೊಬ್ಬರೂ ಸದಾ ಜಾಗೃತರಾಗಿಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಲೇಖಕ ಚೇತನ್ ಭಗತ್, ನಟಿ ಉರ್ಫಿ ಜಾವೇದ್ ಜಟಾಪಟಿ: ಸ್ಕ್ರೀನ್ ಶಾಟ್ ಶೇರ್
Advertisement
ಹಿಂದೂ ಸಂಕೇತ ಬಳಸಿ ಇಂತಹ ಕೃತ್ಯ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ಮೊಬೈಲ್ (Mobile) ಹಾಗೂ ದಾಖಲೆಗಳು ಕಳೆದುಹೋದರೆ ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು. ಇಲ್ಲವಾದರೆ, ಇಂತಹ ಸಂದರ್ಭದಲ್ಲಿ ಸಂದೇಹಕ್ಕೆ ಒಳಗಾಗಬೇಕಾಗುತ್ತದೆ ಎಂದು ತಿಳಿವಳಿಕೆ ನೀಡಿದ್ದಾರೆ.