ಹುಬ್ಬಳ್ಳಿ: ಟಿಪ್ಪು ಒಬ್ಬ ಮತಾಂಧ. ಅವರ ಹೆಸರನ್ನು ಹಜ್ ಭವನಕ್ಕೆ ಇಡಬಾರದು ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಟಿಪ್ಪು ಒಬ್ಬ ಸಮಾಜದ್ರೋಹಿ. ಅವರ ಹೆಸರನ್ನು ಯಾವುದೇ ಕಾರಣಕ್ಕೂ ಹಜ್ ಭವನಕ್ಕೆ ಇಡಬಾರದು. ಅದರ ಬದಲು ಹಜ್ ಭವನಕ್ಕೆ ಅಬ್ದುಲ್ ಕಲಾಂ ಹೆಸರಿಡಲಿ. ಅದಕ್ಕೂ ಒಳ್ಳೆಯದಾಗುತ್ತೆ, ಹಜ್ ಯಾತ್ರೆ ಹೊದವರಿಗೂ ಒಳ್ಳೆಯದಾಗುತ್ತದೆ ಎಂದರು.
ಹಜ್ ಭವನಕ್ಕೆ ಟಿಪ್ಪು ಹೆಸರಿಡಲು ಮೊದಲು ಬಿಜೆಪಿಯವರೇ ಸೂಚಿಸಿದ್ದರು ಎಂಬ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಯಿಸಿದ ಜೋಶಿ ಕೆಲವರು ತಪ್ಪು ತಿಳುವಳಿಕೆಯಿಂದ ಆ ರೀತಿ ಮಾಡಿರಬಹುದು. ಆದರೆ ಸಿದ್ದರಾಮಯ್ಯನವರಂತೆ ಕುಮಾರಸ್ವಾಮಿ ಮಾಡಬಾರದು. ಇದು ಕುಮಾರಸ್ವಾಮಿಯವರಿಗೆ ಗೊತ್ತಿರುವ ವಿಚಾರ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾವೇರಿ ಪ್ರಾಧಿಕಾರ ರಚನೆ ವಿಚಾರ ಕುರಿತು ಮಾತನಾಡಿದ ಅವರು ಕಾವೇರಿ ಪ್ರಾಧಿಕಾರ ರಚನೆಗೆ ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ಕೋರ್ಟ್ ಆದೇಶದಂತೆಯೇ ಅದನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.