ನವದೆಹಲಿ: ಭಾರತಕ್ಕೆ (India) ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತದ ತೈಲ ಟ್ಯಾಂಕರ್‌ಗಳಿಗೆ (Oil Tanker) ಮತ್ತು ಕಂಟೈನರ್ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಂಚರಿಸಲು ಇರಾನ್ ಅನುಮತಿ ನೀಡಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್(S Jaishankar) ಮತ್ತು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ(Seyed Abbas Aragchi) ನಡುವಿನ ಮಾತುಕತೆಯ ನಂತರ ಅನುಮತಿ ಸಿಕ್ಕಿದೆ.
ತನ್ನ ಮೇಲೆ ಯುದ್ಧ ಸಾರಿದ್ದಕ್ಕೆ ಹಾರ್ಮುಜ್ ಜಲಸಂಧಿಯಯನ್ನು ಇರಾನ್ ಮುಚ್ಚಿದೆ. ಅಷ್ಟೇ ಅಲ್ಲದೇ ಅಮೆರಿಕ, ಇಸ್ರೇಲ್ ಮತ್ತು ಅದರ ಮಿತ್ರ ದೇಶಗಳ ತೈಲ ಟ್ಯಾಂಕರ್ ಮತ್ತು ಹಡಗುಗಳು ಪ್ರವೇಶಿಸಿದರೆ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಮಂಗಳವಾರ ಎರಡು ದೇಶಗಳ ನಾಯಕರು ಮಾತುಕತೆ ನಡೆಸಿದ್ದರು. ಕಳೆದ ತಿಂಗಳು ಅಮೆರಿಕ ಮತ್ತು ಇಸ್ರೇಲ್ ಯುದ್ಧ ಆರಂಭಿಸಿದ ಮೂರನೇ ಬಾರಿ ಉಭಯ ನಾಯಕರು ಮಾತನಾಡಿದ್ದರು. ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಅದೃಶ್ಯವಾಗಿ ಭಾರತಕ್ಕೆ ಬಂತು ಕಚ್ಚಾ ತೈಲ ಹೊತ್ತ ಹಡಗು
ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಭಾರತವು ತನ್ನ ಎಲ್‌ಎನ್‌ಜಿಯ ಸುಮಾರು 50 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಆ ಆಮದುಗಳಲ್ಲಿ 90 ಪ್ರತಿಶತವು ಹಾರ್ಮುಜ್ ಜಲಸಂಧಿಯಿಂದಲೇ ಬರುತ್ತವೆ ಎಂದು ಹೇಳಿದ್ದರು.
ಚೆನ್ನಾಗಿದೆ ಸಂಬಂಧ
ಮಧ್ಯಪ್ರಾಚ್ಯ ದೇಶಗಳ ಜೊತೆಗೆ ಇರುವಂತೆ ಇರಾನ್ ಜೊತೆಗೆ ಭಾರತದ ಸಂಬಂಧ ಚೆನ್ನಾಗಿದೆ. ಇರಾನಿನ ಯುದ್ಧ ನೌಕೆಯನ್ನು ಅಮೆರಿಕ ಮುಳುಗಿಸಿದ ಬೆನ್ನಲ್ಲೇ ಭಾರತ ಇರಾನಿನ ಹಡಗನ್ನು ಕೊಚ್ಚಿಯಲ್ಲಿ ತುರ್ತಾಗಿ ನಿಲ್ಲಿಸಲು ಅನುಮತಿ ನೀಡಿದೆ.
ಇರಾನ್ ಯುದ್ಧನೌಕೆ IRIS ದೇನಾವನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಮುಳುಗಿಸುವ ಕೆಲವು ದಿನಗಳ ಮೊದಲು IRIS Lavan ಭಾರತದಲ್ಲಿ ನಿಲ್ಲಿಸಲು ಅನುಮತಿ ಕೇಳಿತ್ತು. ಇರಾನಿನ ವಿನಂತಿಯನ್ನು ಸ್ವೀಕರಿಸಿದ ಭಾರತ ಕೊಚ್ಚಿಯಲ್ಲಿ (Kochi) ನಿಲ್ಲಿಸಲು ಅನುಮತಿ ನೀಡಿದೆ. ಹಡಗಿನ 183 ಸಿಬ್ಬಂದಿಗೆ ಪ್ರಸ್ತುತ ಕೊಚ್ಚಿಯಲ್ಲಿರುವ ನೌಕಾ ಸೌಲಭ್ಯಗಳಲ್ಲಿ ವಸತಿ ಕಲ್ಪಿಸಲಾಗಿದೆ. ಇದನ್ನೂ ಓದಿ: ಇರಾನ್ ದಾಳಿಗೆ ಹೊತ್ತಿ ಉರಿದ ಅಮೆರಿಕದ ಟ್ಯಾಂಕರ್

