ವಾಷಿಂಗ್ಟನ್: ಕರೆ ಮಾಡಿದಾಗ ಬೇರೆಯವರು ಕಾಲ್ ಪಿಕ್ ಮಾಡಿದ್ದಕ್ಕೆ ತನ್ನ ಬಾಯ್ಫ್ರೆಂಡ್ ಮನೆಗೆ ಬೆಂಕಿ ಹಚ್ಚಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು 23 ವರ್ಷದ ಸೆನೈಡಾ ಮೇರಿ ಸೊಟೊ ಎಂದು ಗುರುತಿಸಲಾಗಿದೆ. ಮುಂಜಾನೆ 2 ಗಂಟೆ ಸುಮಾರಿಗೆ ತನ್ನ ಬಾಯ್ಫ್ರೆಂಡ್ ಮನೆಗೆ ನುಗ್ಗಿ, ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಕದ್ದು, ನಂತರ ಆತನ ಮನೆಗೆ ಬೆಂಕಿ ಹಚ್ಚಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ವಾಲ್ಮಾರ್ಟ್ನಲ್ಲಿ ಗುಂಡಿನ ಸುರಿಮಳೆ – 10ಕ್ಕೂ ಹೆಚ್ಚು ಮಂದಿ ಸಾವು
Advertisement
Advertisement
ಇದೀಗ ಕಳ್ಳತನ ಮತ್ತು ಬೆಂಕಿ ಹಚ್ಚಿದ ಆರೋಪದಡಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೆನೈಡಾ ಮೇರಿ ಸೊಟೊ ಬಾಯ್ ಫ್ರೆಂಡ್ಗೆ ಕರೆ ಮಾಡಿದಾಗ ಮತ್ತೋರ್ವ ಮಹಿಳೆ ಕರೆಯನ್ನು ಸ್ವೀಕರಿಸಿದ್ದರಿಂದ ರೊಚ್ಚಿಗೆಂದು ಆತನ ಕುಟುಂಬಸ್ಥರನ್ನು ಕೊಲ್ಲಲ್ಲು ಪ್ರಯತ್ನಿಸಿದ್ದಾಳೆ. ಇದನ್ನೂ ಓದಿ: ಆಫೀಸ್ ಬಿಟ್ಟು ಸ್ಮಶಾನದಲ್ಲಿ ಕೆಲಸಕ್ಕೆ ಸೇರಿದ ಪದವೀಧರೆ – ಕೆಲಸ ಏನು ಗೊತ್ತಾ?
Advertisement
Advertisement
ಆರೋಪಿ ಮಹಿಳೆ ಮನೆಯ ಲಿವಿಂಗ್ ರೂಮಿನಲ್ಲಿದ್ದ ಮಂಚಕ್ಕೆ ಬೆಂಕಿ ಹಚ್ಚಿದ್ದರಿಂದ, ಬಹುಬೇಗನೇ ಇಡೀ ಮನೆ ಹೊತ್ತಿ ಉರಿದಿದೆ. ಮನೆಗೆ ಹೊತ್ತಿ ಉರಿಯುವಾಗ ಘಟನೆಯ ವೀಡಿಯೋವನ್ನು ಮಹಿಳೆಯೇ ರೆಕಾರ್ಡ್ ಮಾಡಿದ್ದಾಳೆ. ಅಲ್ಲದೇ ಈ ಘಟನೆಯಿಂದ 50,000 ರೂಪಾಯಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.