ನವದೆಹಲಿ: ಈ ತಿಂಗಳ ಕೊನೆಯಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ (US Vice President J D Vance) ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ (Mike Waltz) ಅವರು ಭಾರತಕ್ಕೆ (India) ಆಗಮಿಸಲಿದ್ದಾರೆ.
ಈ ಎರಡೂ ಪ್ರತ್ಯೇಕ ಭೇಟಿಗಳು ತಿಂಗಳ ಕೊನೆಯ ವಾರದಲ್ಲಿ ಏಪ್ರಿಲ್ 21 ಮತ್ತು 25 ರ ನಡುವೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಭಾರತಕ್ಕೆ ಬರುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಮೇಲೆ ತೆರಿಗೆ ಸಮರ ಆರಂಭಿಸಿದ ಸಮಯದಲ್ಲೇ ಜೆಡಿ ವಾನ್ಸ್ ಅವರು ಭಾರತಕ್ಕೆ ಬರುತ್ತಿರುವುದು ಮಹತ್ವ ಪಡೆದಿದೆ. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್ ಕಳುಹಿಸಿದ ಆಪಲ್
ಮೈಕ್ ವಾಲ್ಟ್ಜ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಜೊತೆ ಸಭೆ ನಡೆಸಲಿದ್ದಾರೆ. ಮುಂಬೈ ದಾಳಿಯ ಉಗ್ರ ತಹವ್ವೂರ್ ರಾಣಾ ಅಮೆರಿಕದಿಂದ ಗಡಿಪಾರಾಗಿ ಭಾರತಕ್ಕೆ ಬಂದ ನಂತರ ಎರಡು ದೇಶಗಳ ಭದ್ರತಾ ಸಲಹೆಗಾರರ ಸಭೆ ನಡೆಯಲಿರುವುದು ವಿಶೇಷ.