ವಾಷಿಂಗ್ಟನ್: ಅಮೆರಿಕದ (US) ವರ್ಜೀನಿಯಾದ ಚೆಸಾಪೀಕ್‌ನಲ್ಲಿರುವ ವಾಲ್‌ಮಾರ್ಟ್‌ನಲ್ಲಿ (Walmart) ನಡೆದ ಗುಂಡಿನ ದಾಳಿಯಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BREAKING????: A mass shooting has occurred at a Walmart in Chesapeake, Virginia. Video we’ve obtained from Walmart employees outside the store show multiple police cars arriving and also employees recounting what happened. pic.twitter.com/dB4X4ii9yE
— Officer Lew (@officer_Lew) November 23, 2022
Advertisement
ಚೆಸಾಪೀಕ್‌ನ ಸ್ಯಾಮ್ಸ್ ವೃತ್ತದಲ್ಲಿರುವ ವಾಲ್‌ಮಾರ್ಟ್‌ನಲ್ಲಿ (Walmart) ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು (US Police) ತಿಳಿಸಿದ್ದಾರೆ. ಸದ್ಯ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಮೃತಪಟ್ಟವರ ಸಂಖ್ಯೆ ಹಾಗೂ ಗಾಯಗೊಂಡವರ ಸಂಖ್ಯೆ ಎಷ್ಟೆಂದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ
Advertisement
#UPDATE A Chesapeake police spokesperson tells us at this point he believes no more than 10 people have died. It’s unclear if the shooter was an employee. The shooter is now deceased. Officers are walking through the Walmart super center checking for victims. @WAVY_News pic.twitter.com/gZs4CDV0q8
— Michelle Wolf (@MichelleWolfTV) November 23, 2022
Advertisement
ವಾಲ್‌ಮಾರ್ಟ್ ಉದ್ಯೋಗಿಯೇ ಶೂಟರ್ ಆಗಿದ್ದ ಎಂದು ಹೇಳಲಾಗುತ್ತಿದೆ. ಆದರೆ ಇದು ಖಚಿತವಾಗಿಲ್ಲ. ಸದ್ಯ ಹಂತಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಮೆರಿಕದ ಸಲಿಂಗಕಾಮಿಗಳ ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ – 5 ಸಾವು, 18 ಮಂದಿಗೆ ಗಾಯ