ವಾಷಿಂಗ್ಟನ್: ಅಮೇರಿಕಾದಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ದೃಢಪಟ್ಟ ಮೊದಲ ಪ್ರಕರಣ ವರದಿಯಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಕ್ಯಾಲಿಫೋರ್ನಿಯಾಗೆ ಹಿಂತಿರುಗಿದ್ದ ಪ್ರಯಾಣಿಕ ಎರಡು ಡೋಸ್ ಲಸಿಕೆ ಪಡೆದಿದ್ದರೂ ಸಹ ಆತನಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!
Advertisement
Advertisement
ಈ ಕುರಿತಂತೆ ಯುನೈಟೆಡ್ ಸ್ಟೇಟ್ಸ್‌ನ ದೇಶದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಸಂಶೋಧನೆ ನಡೆಸುವುದಾಗಿ ವೈಟ್ ಹೌಸ್‍ನಲ್ಲಿ ಘೋಷಿಸಿದ್ದಾರೆ. ಸೋಂಕಿತ ವ್ಯಕ್ತಿ ನವೆಂಬರ್ 22 ರಂದು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದು, ಈತನಿಗೆ ಕೊಂಚ ಸೋಂಕಿನ ರೋಗಲಕ್ಷಣಗಳು ಕಾಣಿಸಿಕೊಂಡಿದೆ.
Advertisement
Advertisement
ಹೀಗಾಗಿ ಸೋಮವಾರ ಕೋವಿಡ್-19 ಪರೀಕ್ಷೆಗೆ ವ್ಯಕ್ತಿ ಒಳಗಾಗಿದ್ದಾರೆ. ಈ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ. ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಮಂಗಳವಾರ ಸಂಜೆ ರೋಗಿಯ ಮಾದರಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ
ಆಂಥೋನಿ ಫೌಸಿ ಮತ್ತು ಇತರ ವೈದ್ಯಕೀಯ ತಜ್ಞರು ಅಮೆರಿಕನ್ನರಿಗೆ ಲಸಿಕೆಯನ್ನು ಪಡೆಯುವುದನ್ನು ಮುಂದುವರಿಸಬೇಕು ಮತ್ತು ಎರಡು ಡೋಸ್ ಲಸಿಕೆಯನ್ನು ಪಡೆಯುವಂತೆ ಒತ್ತಾಯಿಸಿದ್ದಾರೆ. ಲಸಿಕೆ ಪಡೆಯುವುದರಿಂದ ಅನಾರೋಗ್ಯ ಒಳಗಾಗುವ ಮತ್ತು ಸಾವಿನ ಅಪಾಯದಿಂದ ಪಾರಾಗಲು ಸಹಾಯಕವಾಗಿರುವುದಲ್ಲದೇ, ಓಮಿಕ್ರಾನ್ ರೂಪಾಂತರದ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.