ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢವಾಗಿದೆ.
ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಈ ಕುರಿತು ಮಾಹಿತಿ ನೀಡಿದ್ದು, ಬೈಡನ್ ಅವರಿಗೆ ಕೊರೊನಾ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಕಾಣಿಸಿಕೊಂಡಿದೆ. ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಆಂಟಿವೈರಲ್ ಡ್ರಗ್ ಪ್ಯಾಕ್ಸ್ಲೋವಿಡ್ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಾರಿಗೂ ಭಯಪಡದೆ ಸಂವಿಧಾನದ ಪಾಲಕರಾಗಬೇಕು: ದ್ರೌಪದಿ ಮುರ್ಮುಗೆ ಅಭಿನಂದಿಸಿದ ಯಶವಂತ್ ಸಿನ್ಹಾ
US President Joe Biden tests positive for Covid-19: White House pic.twitter.com/pjzQvaFCDI
— ANI (@ANI) July 21, 2022
ಬೈಡೆನ್ ಅವರು ಶ್ವೇತಭವನದಲ್ಲಿ ಪ್ರತ್ಯೇಕವಾಗಿದ್ದಾರೆ. ಆ ಸಮಯದಲ್ಲಿ ಅವರ ಎಲ್ಲ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸುತ್ತಾರೆ. ಅವರು ಇಂದು ಬೆಳಗ್ಗೆ ಶ್ವೇತಭವನದ ಸಿಬ್ಬಂದಿಯ ಸದಸ್ಯರೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಶ್ವೇತಭವನದಲ್ಲಿ ಅವರ ಯೋಜಿತ ಸಭೆಗಳಲ್ಲಿ ಫೋನ್ ಮತ್ತು ಜೂಮ್ ಕಾಲ್ ಮೂಲಕ ನಡೆಸಿದ್ದಾರೆ ಎಂದು ವಿವರಿಸಿದ್ದಾರೆ.
79 ವರ್ಷದ ಬೈಡನ್ ಅವರು ಅಧಿಕಾರ ವಹಿಸಿಕೊಳ್ಳುವ ಸ್ವಲ್ಪ ಸಮಯದ ಮೊದಲು ಎರಡು ಡೋಸ್ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದರು. ಸೆಪ್ಟೆಂಬರ್‌ನಲ್ಲಿ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಕ್ಯಾಬಿನೆಟ್ ಸದಸ್ಯರು, ಶ್ವೇತಭವನದ ಸಿಬ್ಬಂದಿ ಮತ್ತು ಶಾಸಕರಿಗೆ ಸೋಂಕು ತಗುಲಿತ್ತು. ಇದನ್ನೂ ಓದಿ: ಡಿಸಿ ನೀಡಿದ್ದ ತೀರ್ಪು ಎತ್ತಿಹಿಡಿದ ಹೈಕೋರ್ಟ್ – ನಗರಸಭೆಯ ಏಳು ಸದಸ್ಯರು ಅನರ್ಹ