ಭಾರತಕ್ಕೆ ಬರಲಿರುವ ಟ್ರಂಪ್ ಏನು ತಿನ್ನುತ್ತಾರೆ? ಫೇವರೇಟ್ ಆಹಾರ ಏನು?

Public TV
1 Min Read
Donald Trump food menu

ನವದೆಹಲಿ: ಗುಜರಾತಿನ ಅಹಮದಾಬಾದಿನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆ, ಭಾರತದ ಜೊತೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏನೇನು ಆಹಾರ ಸೇವಿಸುತ್ತಾರೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಟ್ರಂಪ್ ಆಹಾರ ಪ್ರಿಯರಾಗಿದ್ದು, ಅವರು ಆಹಾರ ತಿನ್ನುತ್ತಿರುವ ಫೋಟೋಗಳು ಬಹಳಷ್ಟು ಲಭ್ಯವಿದೆ. ಟ್ರಂಪ್ ಡಯಟ್ ಕೋಕ್, ಮ್ಯಾಕ್ ಡೊನಾಲ್ಡ್ ಮತ್ತು ಮಾಂಸದ ಬ್ರೆಡ್ಡುಗಳನ್ನು ಹೆಚ್ಚು ಇಷ್ಟ ಪಡುತ್ತಾರೆ.

Donald Trumps food menu

ಬೆಳಗ್ಗಿನ ಉಪಹಾರವನ್ನು ನಾನು ಹಲವು ಬಾರಿ ಬಿಟ್ಟುಬಿಡುತ್ತೇನೆ ಎಂದಿರುವ ಟ್ರಂಪ್ ಮಧ್ಯಾಹ್ನದ ಭೋಜನವನ್ನು ಯಾವುದೇ ಕಾರಣಕ್ಕೆ ತಪ್ಪಿಸುವುದಿಲ್ಲ. ಬೇಕಾನ್ ಮತ್ತು ಮೊಟ್ಟೆ ಮಧ್ಯಾಹ್ನದ ಭೋಜನದಲ್ಲಿ ಇರಲೇಬೇಕು. ಇದರ ಜೊತೆ ಹಾಲು ಮತ್ತು ಸಿರಿಧಾನ್ಯಗಳನ್ನು ಸೇವಿಸುತ್ತಾರೆ.

2016ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಬೆಳಗ್ಗೆ ಮೊಟ್ಟೆ ಮತ್ತು ಮ್ಯಾಕ್‍ಮಫಿನ್ಸ್(ಮ್ಯಾಕ್ ಡೊನಾಲ್ಡ್ ಕಂಪನಿಯ ಫ್ಯಾಮಿಲಿ ಸ್ಯಾಂಡ್‍ವಿಚ್) ಸೇವಿಸುತ್ತಿದ್ದರು. ಅಷ್ಟೇ ಅಲ್ಲದೇ ಫಿಶ್ ಸ್ಯಾಂಡ್‍ವಿಚ್ ಮತ್ತು ಚಾಕಲೇಟ್ ತಿನ್ನುತ್ತಾರೆ.

melania trump modi 3

ಅಮೆರಿಕದ ಅಧ್ಯಕ್ಷರಾದ ಟ್ರಂಪ್ ಹೋಟೆಲ್ ಉದ್ಯಮ ನಡೆಸುತ್ತಿದ್ದರೂ ಮದ್ಯ ಸೇವಿಸುವುದಿಲ್ಲ. ಕಾಫಿ, ಟೀ ಕುಡಿಯುವುದಿಲ್ಲ. ಆದರೆ ಕೊಕಾಕೋಲಾ ಕಂಪನಿ ಶುಗರ್ ಫ್ರೀ ಮತ್ತು ಕ್ಯಾಲರಿ ರಹಿತ ಸಾಫ್ಟ್ ಡ್ರಿಂಕ್ ಡಯಟ್ ಕೋಕ್ ಅನ್ನು ಟ್ರಂಪ್ ಹೆಚ್ಚು ಸೇವಿಸುತ್ತಾರೆ. ಕೆಲವೊಮ್ಮೆ ಒಂದು ದಿನದಲ್ಲಿ 12 ಡಯಟ್ ಕೋಕ್ ಕುಡಿದದ್ದು ಇದೆ.

ಲೇಸ್ ಆಲುಗೆಡ್ಡೆ ಚಿಪ್ಸ್ ಜೊತೆಗೆ ಫಾಸ್ಟ್ ಫುಡ್ ಅನ್ನು ಹೆಚ್ಚು ಇಷ್ಟ ಪಡುತ್ತಾರೆ. ಕೆಎಫ್‍ಸಿಯ ಫ್ರೈಯ್ಡ್ ಚಿಕನ್ ಟ್ರಂಪ್ ಅವರ ಫೇವರೇಟ್ ಆಗಿದೆ.

ಮಾಂಸದ ಬ್ರೆಡ್ಡು ಇಷ್ಟವಾಗಿರುವ ಹಿನ್ನೆಲೆಯಲ್ಲಿ ಟ್ರಂಪ್ ಹುಟ್ಟುಹಬ್ಬದಂದು ಸಹೋದರಿ ಮಾಂಸದ ಬ್ರೆಡ್ಡು ತಯಾರಿಸುತ್ತಾರೆ. ಚೆರ್ರಿ – ವೆನಿಲ್ಲಾ ಐಸ್ ಕ್ರೀಂ ಮತ್ತು ಚಾಕಲೇಟ್ ಕೇಕ್ ಅನ್ನು ಟ್ರಂಪ್ ಹೆಚ್ಚು ಇಷ್ಟಪಡುತ್ತಾರೆ.

g 20 modi trump 3

Share This Article
Leave a Comment

Leave a Reply

Your email address will not be published. Required fields are marked *