ಭಾರತದ ವಿರುದ್ಧ ಗುಡುಗಿದ ಟ್ರಂಪ್

Public TV
1 Min Read
donald trump

ವಾಷಿಂಗ್ಟನ್: ಭಾರತ ಹಾಗೂ ಚೀನಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾಗಿ ಉಳಿದಿಲ್ಲ. ಅವು ಅಭಿವೃದ್ಧಿ ಹೊಂದಿದ ದೇಶಗಳಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಮಂಗಳವಾರದ ಮಾತನಾಡಿದ ಟ್ರಂಪ್, ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ)ಯಿಂದ ಭಾರತ ಹಾಗೂ ಚೀನಾ ದೇಶಗಳು ಉಪಯೋಗ ಪಡೆಯುತ್ತಿವೆ. ಇನ್ಮುಂದೆ ಡಬ್ಲ್ಯುಟಿಒ ಲಾಭ ಪಡೆಯಲು ಬಿಡುವುದಿಲ್ಲ ಗುಡುಗಿದ್ದಾರೆ.

ಅಮೆರಿಕ ಮೊದಲು ಎಂಬ ನಿಯಮಕ್ಕೆ ಆದ್ಯತೆ ನೀಡಿರುವ ಟ್ರಂಪ್, ಎರಡು ದೇಶಗಳು ವಿಶ್ವ ವಾಣಿಜ್ಯ ಸಂಸ್ಥೆಯಿಂದ ಹಲವು ವರ್ಷಗಳಿಂದ ಸಾಕಷ್ಟು ಅನುಕೂಲ ಪಡೆದುಕೊಂಡಿವೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಇನ್ನು ಮುಂದೆ ಈ ಲಾಭವನ್ನು ಪಡೆದುಕೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ.

ಈ ಹಿಂದೆಯೂ ಭಾರತವನ್ನು ಟ್ಯಾರಿಫ್ ಕಿಂಗ್ ಎಂದಿದ್ದ ಟ್ರಂಪ್, ಭಾರತ ಅಮೆರಿಕ ಸರಕುಗಳ ಮೇಲೆ ಅತಿಯಾದ ಆಮದು ಸುಂಕವನ್ನು ವಿಧಿಸುತ್ತಿರುವುದನ್ನು ಖಂಡಿಸಿದ್ದರು. ಅಲ್ಲದೇ ಅಮೆರಿಕ ವಸ್ತುಗಳ ಮೇಲೆ ಭಾರತ ಹೆಚ್ಚು ಸುಂಕವನ್ನು ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ನೀಡಿದ್ದ ‘ಆದ್ಯತೆ ವಹಿವಾಟಿನ ಸೌಲಭ್ಯವನ್ನು ಹಿಂಪಡೆದಿದ್ದರು. ಇತ್ತ ಚೀನಾದ ಅಮೆರಿಕ ನಡುವಿನ ವಾಣಿಜ್ಯ ಸಮರದಲ್ಲಿ ಚೀನಾ ಸರಕುಗಳ ಮೇಲೆ ಭಾರೀ ಸುಂಕವನ್ನು ಹೇರಿದ್ದರು.

ಕೆಳ ದಿನಗಳ ಹಿಂದೆ ಕಾಶ್ಮೀರ ವಿಚಾರವಾಗಿ ಮಾತನಾಡಿದ್ದ ಟ್ರಂಪ್, ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಮೋದಿ ನನ್ನ ಬಳಿ ಮನವಿ ಮಾಡಿದ್ದಾರೆ ಎಂದಿದ್ದರು. ಆದರೆ ಆ ಬಳಿಕ ಭಾರತ ಸರ್ಕಾರ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿತ್ತು. ಆದರೆ ಟ್ರಂಪ್ ಹೇಳಿಕೆಯನ್ನು ಪಾಕ್‍ನ ಇಮ್ರಾನ್ ಖಾನ್ ಸ್ವಾಗತಿಸಿದ್ದರು.

g 20 modi trump

Share This Article
Leave a Comment

Leave a Reply

Your email address will not be published. Required fields are marked *