ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದೆ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಲೇವಡಿ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಟ್ವೀಟರ್ ನಲ್ಲಿ ಟ್ರಂಪ್ ಅವರಿಗಾಗಿ ಗೋಡೆ ಕಟ್ಟಿದ್ದಕ್ಕೆ ಕಟುವಾಗಿ ಟೀಕೆ ಮಾಡಿದ್ದರು. ಈಗ ಟ್ರಂಪ್ ಭೇಟಿಯಿಂದ ಭಾರತದ ಸಂಪತ್ತು ಲೂಟಿ ಆಗದೇ ಇರಲಿ ಅಂತ ಮತ್ತೆ ಲೇವಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.
ಟ್ರಂಪ್ ಭೇಟಿ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಮ್ಮ ದೇಶಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ ಇದೇನು ಹೊಸದಲ್ಲ. ಇಲ್ಲಿಯವರೆಗೆ 7 ಜನ ಅಮೆರಿಕದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರತಿ ದೇಶಕ್ಕೂ ಅಕ್ಕ-ಪಕ್ಕದ ದೇಶಗಳು, ಬೇರೆ ಬೇರೆ ದೇಶಗಳ ನಡುವೆ ಉತ್ತಮ ಸಂಬಂಧ ಇರಬೇಕು ಅಂತ ತಿಳಿಸಿದರು. ಕೆಲವೇ ತಿಂಗಳಲ್ಲಿ ಅಮೆರಿಕಾದಲ್ಲಿ ಚುನಾವಣೆ ಇದೆ.ಅದರ ಉದ್ದೇಶಕ್ಕೆ ಬಂದಿದ್ದಾರೆ ಅಂತ ಕೆಲವರು ಮಾತಾಡ್ತಿದ್ದಾರೆ ಅಂತ ಟೀಕಿಸಿದರು. ಇದನ್ನೂ ಓದಿ: ಟ್ರಂಪ್ ಭೇಟಿಯಾದ ಬಿಎಸ್‍ವೈ
Advertisement
Advertisement
ಕಷ್ಟಕ್ಕೆ ಸುಮ್ಮನೆ ಆಗದ ಕುಮಾರಸ್ವಾಮಿ, ಪ್ರಧಾನಿ ಮೋದಿ ಅಮೇರಿಕಾದಲ್ಲಿ ಟ್ರಂಪ್ ರನ್ನ ಹೊಗಳಿದ್ರು. ಟ್ರಂಪ್ ಭಾರತದಲ್ಲಿ ಮೋದಿರನ್ನ ಹೊಗಳುತ್ತಿದ್ದಾರೆ. ಇದರಲ್ಲೇನು ವ್ಯತ್ಯಾಸ ಇಲ್ಲ ಅಂತ ಕುಹಕವಾಡಿದ್ರು.ಭಾರತ ಅತ್ಯಂತ ಸಮೃದ್ಧ ದೇಶ. ಇಲ್ಲಿ ವ್ಯಾಪಾರ ವಹಿವಾಟು ಮಾಡಲು ಸೂಕ್ತವಾಗಿದೆ ಅಂತ ಟ್ರಂಪ್ ಹೇಳಿದ್ದಾರೆ. ಆದ್ರೆ ಅವರ ಭೇಟಿಯಿಂದ ದೇಶಕ್ಕೆ ಒಳ್ಳೆಯದಾಗಬೇಕು. ಅದರ ಬದಲಾಗಿ ದೇಶದ ಸಂಪತ್ತು ಲೂಟಿ ಹೊಡೆಯಲು ಅವಕಾಶ ನೀಡಬಾರದು ಅಂತ ಲೇವಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲಹೆ ಕೊಟ್ಟರು.
Advertisement
ಮೋದಿ ಶಕ್ತಿಯಿಂದ ಭಾರತಕ್ಕೆ ಟ್ರಂಪ್ ಬಂದಿದ್ದಾರೆ ಅನ್ನೋ ವಿಚಾರಕ್ಕೆ ಟೀಕೆ ಮಾಡಿದ ಕುಮಾರಸ್ವಾಮಿ ಕೆಲವೊಂದು ದಿನ ಜನ ಇಂತಹ ಮಾತುಗಳು ಆಡ್ತಾನೆ ಇರುತ್ತಾರೆ. ಸ್ವಲ್ಪ ದಿನ ಆದ ಮೇಲೆ ಹೀಗೆ ಮಾತಾಡೋದು ನಿಂತು ಹೋಗುತ್ತದೆ ಅಂತ ಮೋದಿ ವಿರುದ್ದ ಲೇವಡಿ ಮಾಡಿದರು.