ವಾಷಿಂಗ್ಟನ್: ಅಮೆರಿಕದ (US) ದಕ್ಷಿಣ ಕೆರೊಲಿನಾ ಪ್ರಾಂತ್ಯದಲ್ಲಿ ತನ್ನ ಫೈಟರ್ ಜೆಟ್ ಮೂಲಕ ಚೀನಾದ ಬೇಹುಗಾರಿಕಾ ಬಲೂನ್ (China Spy Balloon) ಅನ್ನು ಹೊಡೆದುರುಳಿಸಿತ್ತು. ಇದರಿಂದ ಚೀನಾ ಅಸಮಾಧಾನ ಹೊರಹಾಕಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden), ಅಮೆರಿಕವು ಚೀನಾದೊಂದಿಗೆ ಸಂಘರ್ಷಕ್ಕಿಳಿಯಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
Advertisement
ಚೀನಾ ಸ್ಪೈ ಬಲೂನ್ ಕೇವಲ ಹವಾಮಾನ ಸಂಶೋಧನೆ ನಡೆಸುತ್ತಿದೆ ಎಂದು ಹೇಳಿಕೊಂಡಿದೆ. ಆದ್ರೆ ಪೆಂಟಗನ್ ಇದನ್ನ ಉನ್ನತ ಬೇಹುಗಾರಿಕಾ ಕಾರ್ಯಾಚರಣೆ ಎಂದು ತಿಳಿಸಿದೆ. ಯುಎಸ್ ನೌಕಾಪಡೆಯು ಈ ಬಗ್ಗೆ ವಿಶ್ಲೇಷಣೆ ನಡೆಸಲು ಅಟ್ಲಾಂಟಿಕ್ ಸಾಗರದಿಂದ ಅವಶೇಷಗಳನ್ನ ತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತವನ್ನೂ ಟಾರ್ಗೆಟ್ ಮಾಡಿದೆ ಚೀನಾದ ಬೇಹುಗಾರಿಕಾ ಬಲೂನ್
Advertisement
Advertisement
ಅತ್ಯಂತ ಎತ್ತರದಲ್ಲಿ ಹಾರಾಡುತ್ತಿದ್ದ ಸ್ಪೈ ಬಲೂನ್, ಯುಎಸ್‌ನ ಸೂಕ್ಷ್ಮ ಮಿಲಿಟರಿ ಪಡೆಯಿದ್ದ ಸ್ಥಳವನ್ನ ದಿಟ್ಟಿಸುತ್ತಿತ್ತು ಅದಕ್ಕಾಗಿ ಅನುಮಾನಗೊಂಡು ಪೆಂಟಗನ್ ಬಲೂನ್ ಅನ್ನು ಹೊಡೆದಿದೆ. ನಾವು ಚೀನಾದೊಂದಿಗೆ ಸಂಪೂರ್ಣವಾಗಿ ಸ್ಪರ್ಧಿಸಲಿದ್ದೇವೆ, ಆದ್ರೆ ಸಂಘರ್ಷಕ್ಕಿಳಿಯಲು ಬಯಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: US Fighter Jet Attack: ಚೀನಾ ಬೇಹುಗಾರಿಕಾ ಬಲೂನ್ ಹೊಡೆದುರುಳಿಸಿದ ಅಮೆರಿಕ
Advertisement
ಈ ಘಟನೆ ಚೀನಾದೊಂದಿಗಿನ ಸಂಬಂಧಕ್ಕೆ ದೊಡ್ಡ ಪೆಟ್ಟು ಮಾಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೈಡನ್, ಖಂಡಿತವಾಗಿ ಇಲ್ಲ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k