ವಾಷಿಂಗ್ಟನ್: ಅಮೆರಿಕದ ದಕ್ಷಿಣ ಕೆರೊಲಿನಾದ ಅಣ್ವಸ್ತ್ರ ತಾಣಗಳ ಮೇಲೆ ಹಾರಾಟ ನಡೆಸುತ್ತಿದ್ದ ಚೀನಾ ನಿಯೋಜಿತ ಬೇಹುಗಾರಿಕಾ ಬಲೂನ್ (Chinese Spy Balloon) ಅನ್ನು ಅಮೆರಿಕ ಎಫ್-22 ಫೈಟರ್ ಜೆಟ್ (F-22 Fighter Jet) ಹೊಡೆದುರುಳಿಸಿದೆ ಎಂದು ಪೆಂಟಗನ್ (ಅಮೆರಿಕ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ) ತಿಳಿಸಿದೆ.
Incredible HD footage of the Chinese surveillance balloon being shot down. pic.twitter.com/K1GxdcJuH1
— Graham Allen (@GrahamAllen_1) February 4, 2023
Advertisement
ಅಮೆರಿಕದ ವಾಯು, ಅಣ್ವಸ್ತ್ರ ಹಾಗೂ ಜಲಮಾರ್ಗಗಳ ಸೂಕ್ಷ್ಮ ಪ್ರದೇಶಗಳಲ್ಲಿ ಹಾರಾಡುತ್ತಿದ್ದ ಬಲೂನ್ ಅನ್ನು ಕ್ಷಿಪಣಿ ದಾಳಿ ಮೂಲಕ ಅಮೆರಿಕ ಹೊಡೆದುರುಳಿಸಿದೆ. ಬಳಿಕ ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden) ಬಲೂನ್ ಹೊಡೆದುರುಳಿಸಿದ ಪೈಲಟ್ ಅನ್ನು ಅಭಿನಂದಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಅಣ್ವಸ್ತ್ರ ತಾಣದ ಮೇಲೆ ಚೀನಾದ ಬೇಹುಗಾರಿಕಾ ಬಲೂನು ಹಾರಾಟ
Advertisement
Advertisement
ಬಲೂನ್ ಒಡೆದು ಹಾಕಿದ್ದನ್ನು ಸಮರ್ಥಿಸಿಕೊಂಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಇದು ಉದ್ದೇಶಪೂರ್ವಕ ಮತ್ತು ಕಾನೂನುಬದ್ಧ ಕ್ರಮ ಎಂದು ಸ್ಪಷ್ಟಪಡಿಸಿದ್ದಾರೆ. ಚೀನಾದಿಂದ ಆಗಿರುವ ನಮ್ಮ ಸಾರ್ವಭೌಮತ್ವದ ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧ ವಿಮಾನಗಳನ್ನು ಕಳುಹಿಸುತ್ತೇವೆ – ಉಕ್ರೇನ್ ಬೆಂಬಲಕ್ಕೆ ನಿಂತ ಬ್ರಿಟನ್
Advertisement
ಸದ್ಯ ಹೊಡೆದುರುಳಿಸಲಾಗಿರುವ ಬಲೂಲ್ ಮತ್ತು ಅದರೊಳಗಿನ ಸಾಧನಗಳನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೆಂಟಗನ್ ಸೂಚಿಸಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಚೀನಾದ ಬೇಹುಗಾರಿಕಾ ಬಲೂನ್ ಅಮೆರಿಕದ ವಾಯುನೆಲೆಗಳ, ಅಣ್ವಸ್ತç ತಾಣಗಳ ಮೇಲೆ ಹಾರಾಟ ನಡೆಸುತ್ತಿದ್ದದ್ದು ಕಂಡುಬಂದಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k