ಯುಎಸ್ ಮಿಲಿಟರಿ ವಿಮಾನ ಪತನ- ನಾಲ್ವರ ದುರ್ಮರಣ

Public TV
1 Min Read
US Military Aircraft

ಕ್ಯಾಲಿಫೋರ್ನಿಯಾ: ಸೇನಾ ವಿಮಾನವೊಂದು ಪತನಗೊಂಡು ನಾಲ್ವರು ಮೃತಪಟ್ಟ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದ ಇಂಪೀರಿಯಲ್ ಕೌಂಟಿಯಲ್ಲಿ ನಡೆದಿದೆ.

3ಡಿ ಮೆರೈನ್ ಏರ್‌ಕ್ರಾಫ್ಟ್ ವಿಂಗ್‍ಗೆ ಸೇರಿದ ವಿಮಾನವು ಗ್ಲಾಮಿಸ್ ಬಳಿ ಪತನಗೊಂಡಿದೆ. ಈ ವಿಮಾನದಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಅದರಲ್ಲಿ ನಾಲ್ವರು ಮೃತಪಟ್ಟಿದ್ದು, ಮತ್ತೊಬ್ಬರಿಗಾಗಿ ಹುಡುಕಾಡುತ್ತಿದ್ದಾರೆ. ಮೆಕ್ಸಿಕನ್ ಗಡಿಯಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಗ್ಲಾಮಿಸ್ ಬಳಿ ವಿಮಾನವು ಪತನಕ್ಕಿಡಾಗಿದ್ದು, ಅದರಲ್ಲಿ ಯಾವುದೇ ಹಾನಿಕಾರಕ ವಸ್ತುಗಳಿರಲಿಲ್ಲ ಎಂದು ಮಿಲಿಟರಿ ಸ್ಪಷ್ಟಪಡಿಸಿದೆ.

us millitary plan crash

ವಿಮಾನ ಪತನಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಮಾನದಲ್ಲಿ ಪರಮಾಣುವಿನಂತಹ ವಸ್ತಗಳನ್ನು ಹೊಂದಿದ್ದವು ಎಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಮೆರೈನ್ ಕಾರ್ಪ್ಸ್ ಏರ್ ಸ್ಟೇಷನ್ ಯುಮಾದ ಕ್ಯಾಪ್ಟನ್ ಬ್ರೆಟ್ ವ್ಯಾನಿಯರ್ ಸ್ಪಷ್ಟನೆ ನೀಡಿದ್ದು, ವದಂತಿಗಳನ್ನು ನಿರಾಕರಿಸಿದ್ದಾರೆ. ಇದರ ಜೊತೆಗೆ ಪತನದ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 105 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆದ NHAI

ಕಳೆದ ವಾರ ಕ್ಯಾಲಿಫೋರ್ನಿಯಾದ ಟ್ರೋನಾದಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿ ನೌಕಾಪಡೆಯ ಪೈಲಟ್ ಸಾವನ್ನಪ್ಪಿದರು. ಇದಾದ ಬಳಿಕ ಇಂದು ಈ ಎರಡನೇ ಮಿಲಿಟರಿ ವಿಮಾನ ಪತನಗೊಂಡಿದೆ. ಇದನ್ನೂ ಓದಿ: ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರ ಸಮಸ್ಯೆ ಆಲಿಸದ ಸಿಎಂ

Share This Article
Leave a Comment

Leave a Reply

Your email address will not be published. Required fields are marked *