ವಾಷಿಂಗ್ಟನ್: ಹಮಾಸ್ (Hamas) ಬಂಡುಕೋರರಿಂದ ಹತ್ಯೆಗೀಡಾದ ತನ್ನ ಮಗಳ ಮೃತದೇಹ ಪತ್ತೆ ಮಾಡಲು ಅಮೆರಿಕದ ವ್ಯಕ್ತಿಯೊಬ್ಬ ಆ್ಯಪಲ್ ವಾಚ್ ಮತ್ತು ಫೋನ್ ಬಳಸಿದ್ದಾರೆ.
ಉದ್ಯಮಿ ಇಯಾಲ್ ವಾಲ್ಡ್‌ಮನ್ ಎಂಬವರ ಪುತ್ರಿ 24 ವಯಸ್ಸಿನ ಡೇನಿಯಲ್ ಹತ್ಯೆಗೀಡಾದ ಯುವತಿ. ಈಕೆ ದಕ್ಷಿಣ ಇಸ್ರೇಲ್‌ನಲ್ಲಿ (Israel) ನೋವಾ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಮಾಸ್ ಬಂಡುಕೋರರು ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಯುದ್ಧಭೂಮಿ ಇಸ್ರೇಲ್‍ಗೆ ಬುಧವಾರ ಅಮೆರಿಕ ಅಧ್ಯಕ್ಷ ಭೇಟಿ
Advertisement
Advertisement
ಉದ್ಯಮಿ ಇಯಾಲ್ ತನ್ನ ಮಗಳ ಮೃತದೇಹ ಪತ್ತೆ ಮಾಡಲು ಆ್ಯಪಲ್ ವಾಚ್ ಮತ್ತು ಆಕೆಯ ಫೋನ್‌ನ ಟ್ರ್ಯಾಕಿಂಗ್ ಫೀಚರ್‌ನ್ನು ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ಮೊದಲಿಗೆ 24 ವಯಸ್ಸಿನ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಉದ್ಯಮಿ ಭಾವಿಸಿದ್ದರು. ನಂತರದ ದಿನಗಳಲ್ಲಿ ಉಗ್ರರಿಂದ ಆಕೆ ಕ್ರೂರವಾಗಿ ಹತ್ಯೆಗೀಡಾಗಿದ್ದಾಳೆ ಎಂಬುದು ತಿಳಿದುಬಂದಿದೆ.
Advertisement
ನಾನು ಇಸ್ರೇಲ್‌ಗೆ ಬಂದಿಳಿದ 3 ಗಂಟೆಗಳ ನಂತರ ದಕ್ಷಿಣ ಭಾಗಕ್ಕೆ ಹೋದೆ. ಅಲ್ಲಿ ನನ್ನ ಮಗಳು ಇದ್ದ ಕಾರನ್ನು ಹುಡುಕಲು ಸಾಧ್ಯವಾಯಿತು. ಕಾರನ್ನು ಪತ್ತೆಹಚ್ಚಿದಾಗ ಅದರಲ್ಲಿ ಕೆಲವು ಸಾಮಾನುಗಳು ಸಿಕ್ಕಿದವು. ಕ್ರ್ಯಾಶ್ ಕರೆ ಹೊಂದಿರುವ ಆಕೆಯ ಸೆಲ್‌ಫೋನ್‌ನಿಂದ ನಾವು ಕರೆ ಸ್ವೀಕರಿಸಿದ್ದೆವು. ಹೀಗಾಗಿ ಕಾರನ್ನು ಪತ್ತೆ ಮಾಡಲು ಸಾಧ್ಯವಾಯಿತು ಎಂದು ಇಯಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?
Advertisement
ಹಮಾಸ್ ಬಂಡುಕೋರರು ಕಾರನ್ನು ಸುತ್ತುವರಿದು ದಾಳಿ ನಡೆಸಿದ್ದಾರೆ. ಸುಮಾರು ಐದು ಜನರು ದಾಳಿ ನಡೆಸಿ ಆಕೆಯನ್ನು ಕೊಂದಿದ್ದಾರೆ ಎಂದು ಡೇನಿಯಲ್ ತಂದೆ ಹೇಳಿದ್ದಾರೆ.
Web Stories