ವಾಷಿಂಗ್ಟನ್: ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ (United Airlines Flight) ತುರ್ತು ನಿರ್ಗಮನದ ದ್ವಾರ (Plane’s Emergency Door) ತೆರೆಯಲು ಪ್ರಯತ್ನಿಸಿದ ಪ್ರಯಾಣಿಕನನ್ನು ಬಂಧಿಸಲಾಗಿದೆ.
ಯುನೈಟೆಡ್ ಏರ್‌ಲೈನ್ಸ್ ವಿಮಾನವು ಲಾಸ್ ಏಂಜಲೀಸ್‌ನಿಂದ ಬೋಸ್ಟನ್‌ಗೆ ಹೊರಟಿತ್ತು. ಈ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ತುರ್ತು ನಿರ್ಗಮನದ ದ್ವಾರ ತೆರೆಯಲು ಯತ್ನಿಸಿದ್ದ. ಅಲ್ಲದೇ ವಿಮಾನದ ಸಿಬ್ಬಂದಿ ಮೇಲೆ ಹಲ್ಲೆಗೂ ಮುಂದಾಗಿದ್ದ. ಪ್ರಯಾಣಿಕ ಟೊರೆಸ್ ಎಂಬಾತನನ್ನು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಇದನ್ನೂ ಓದಿ: 115 ವರ್ಷದ ಇತಿಹಾಸದಲ್ಲಿ ಸ್ವಿಸ್ ಬ್ಯಾಂಕ್‌ಗೆ ಭಾರೀ ನಷ್ಟ
ವಿಮಾನದ ಲ್ಯಾಂಡಿಂಗ್‌ಗೆ 45 ನಿಮಿಷಗಳು ಇರುವ ಮುಂಚೆಯೇ, ವಿಮಾನದ ಸಿಬ್ಬಂದಿಗೆ ಕಾಕ್‌ಪಿಟ್‌ನಲ್ಲಿ ಎಚ್ಚರಿಕೆಯ ಶಬ್ದ ಕೇಳಿಬಂತು. ವಿಮಾನದ ಮೊದಲ ದರ್ಜೆ ಮತ್ತು ಕೋಚ್ ವಿಭಾಗಗಳ ನಡುವೆ ಇರುವ ಸ್ಟಾರ್‌ಬೋರ್ಡ್ ಬದಿಯ ಬಾಗಿಲನ್ನು ತೆಗೆಯಲು ಪ್ರಯಾಣಿಕ ಪ್ರಯತ್ನಿಸಿದ್ದನ್ನು ಗಗನಸಖಿ ಕಂಡಿದ್ದರು.
ಈ ವಿಚಾರವನ್ನು ಸಿಬ್ಬಂದಿ ಫ್ಲೈಟ್ ಅಟೆಂಡೆಂಟ್ ಕ್ಯಾಪ್ಟನ್‌ಗೆ ತಿಳಿಸಿದ್ದಾರೆ. ನಂತರ ಟೊರೆಸ್‌ನನ್ನು ಪ್ರಶ್ನಿಸಿದಾಗ, ಸಿಬ್ಬಂದಿ ಮೇಲೆಯೇ ಅಪಾಯಕಾರಿ ಆಯುಧ ಬಳಸಿ ಹಲ್ಲೆಗೆ ಮುಂದಾಗಿದ್ದಾನೆ. ಆತನನ್ನು ಪೊಲೀಸರ ವಶಕ್ಕೆ ನೀಡಲಾಯಿತು. ನ್ಯಾಯಾಲಯವು ಮಾ.9ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೆ ಪ್ರಯಾಣಿಕ ಟೊರೆಸ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ – 9 ಪೊಲೀಸರು ಸಾವು