ವಾಷಿಂಗ್ಟನ್/ಒಟ್ಟಾವ: ಕೆನಡಾದ (Canada) ಯುಕಾನ್ (Yukon) ಪ್ರಾಂತ್ಯದ ವಾಯು ಪ್ರದೇಶದಲ್ಲಿ ಅಮೆರಿಕ (USA) ಹಾಗೂ ಕೆನಡಾ ದೇಶಗಳ ಜಂಟಿ ಕಾರ್ಯಾಚರಣೆಯಲ್ಲಿ ಅಮೆರಿಕದ ಫೈಟರ್ ಜೆಟ್ (Fighter Jet) ಅಪರಿಚಿತ ವಸ್ತುವನ್ನು ಹೊಡೆದುರುಳಿಸಿದೆ.
ಇತ್ತೀಚೆಗೆ ಅಮೆರಿಕದ ದಕ್ಷಿಣ ಕೆರೊಲಿನಾ ಪ್ರಾಂತ್ಯದಲ್ಲಿ ಚೀನಾದ (China) ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿದ ನಂತರದ ಘಟನೆ ಇದಾಗಿದೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆಯಲ್ಲಿ ಭಾಗಿ ಆಗ್ತೀನಿ: ವಿಭಿನ್ನ ಉತ್ತರ ಕೊಟ್ಟ ರಿಷಬ್ ಶೆಟ್ಟಿ
Advertisement
I ordered the take down of an unidentified object that violated Canadian airspace. @NORADCommand shot down the object over the Yukon. Canadian and U.S. aircraft were scrambled, and a U.S. F-22 successfully fired at the object.
— Justin Trudeau (@JustinTrudeau) February 11, 2023
Advertisement
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರ ಆದೇಶದ ಮೇರೆಗೆ ಕೆನಡಾ ಮತ್ತು ಅಮೆರಿಕದ ಯುದ್ಧವಿಮಾನಗಳು ಕ್ಷಿಪ್ರ ಕಾರ್ಯಾಚರಣೆಗೆ ಇಳಿದಿದ್ದವು. ಅಮೆರಿಕದ F-22 ಯುದ್ಧ ವಿಮಾನ ಈ ವಸ್ತುವನ್ನು ಹೊಡೆದುರುಳಿಸಿತು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
Advertisement
Advertisement
ಕಳೆದ ವಾರ ಅಮೆರಿಕದ ವಾಯುನೆಲೆಯಲ್ಲಿ ಕಾಣಿಸಿಕೊಂಡಿದ್ದ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕಾ ಕ್ಷಿಪಣಿಗಳು ಹೊಡೆದುರುಳಿಸಿದ್ದವು. ಇದೀಗ ಕೆನಡಾ ವಾಯು ನೆಲೆಯಲ್ಲಿ ಮತ್ತೊಂದು ವಸ್ತುವನ್ನು ಹೊಡೆದುರುಳಿಸಿದೆ.
ಹೊಡೆದುರುಳಿಸಲಾಗಿರುವ ಚೀನಾದ ಬಲೂನ್ ಸೇರಿದಂತೆ ಅಪರಿಚಿತ ವಸ್ತುಗಳ ಅವಶೇಷಗಳನ್ನು ಅಮೆರಿಕ ಸೇನೆ ಪರಿಶೀಲನೆ ಮಾಡುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: 30 ವರ್ಷವಾದ್ರೂ ವಧು ಸಿಕ್ಕಿಲ್ಲ ಅಂತಾ `ಬ್ರಹ್ಮಚಾರಿಗಳ ನಡೆ ಮಾದಪ್ಪನ ಕಡೆ’
ಈ ಆಕ್ರಮಣ ಕುರಿತು, ಕೆನಡಾದ ರಕ್ಷಣಾ ಮಂತ್ರಿ ಅವರು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರೊಂದಿಗೆ ಮಾತನಾಡಿದ್ದಾರೆ. ಬಳಿಕ `ನಾವು ಯಾವಾಗಲೂ ನಮ್ಮ ಸಾರ್ವಭೌಮತ್ವವನ್ನು ಒಟ್ಟಾಗಿ ರಕ್ಷಿಸುತ್ತೇವೆ ಎಂಬುದಾಗಿ ಪುನರುಚ್ಚರಿಸಿದ್ದಾರೆ’ ಎಂದು ಕೆನಡಾದ ರಕ್ಷಣಾ ಸಚಿವೆ ಅನಿತಾ ಆನಂದ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಉತ್ತರ ವಾಯುನೆಲೆಯಲ್ಲಿ ಕೆನಡಾದೊಂದಿಗೆ ಕೆಲಸ ಮಾಡಲು ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್‌ಗೆ ಎಫ್-22 ಹಾಗೂ AIM 9X ಕ್ಷಿಪಣಿಗಳನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ಈ ವೇಳೆ F-22 ಫೈಟರ್ ಜೆಟ್ ಅಪರಿಚಿತ ವಸ್ತುವನ್ನು ಹೊಡೆದುರುಳಿದೆ ಎಂದು ಪೆಂಟಗನ್ ವಕ್ತಾರ ಪ್ಯಾಟ್ ರೈಡರ್ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k