ವಾಷಿಂಗ್ಟನ್: ಸಲಿಂಗ ವಿವಾಹ ಮಾನ್ಯತೆಯನ್ನು ರಕ್ಷಿಸುವ ಮಸೂದೆಯನ್ನು ಯುಎಸ್ ಹೌಸ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದೆ.
ರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆ್ಯಕ್ಟ್ (ವಿವಾಹ ಕಾಯ್ದೆಗೆ ಗೌರವ) ಶೀರ್ಷಿಕೆಯಡಿ ಪ್ರಸ್ತಾಪಿಸಲಾಗಿದೆ ಮಸೂದೆಗೆ ಯುಎಸ್ ಹೌಸ್ ಬಹುಮತದೊಂದಿಗೆ ಅಂಗೀಕಾರ ನೀಡಿದೆ. ಮಸೂದೆಗೆ 47 ರಿಪಬ್ಲಿಕನ್ನರು ಸಹ ಡೆಮಾಕ್ಟ್ರಾಟ್ಸ್ ಜೊತೆಗೆ ಒಪ್ಪಿಗೆ ಸೂಚಿಸಿದರು. ಇದನ್ನೂ ಓದಿ: ಬ್ರಿಟಿಷ್ ಪ್ರಧಾನಿ ಹುದ್ದೆಗೆ ಸುನಾಕ್ ಇನ್ನೂ ಹತ್ತಿರ – 4 ನೇ ಸುತ್ತಿನ ಮತದಾನದಲ್ಲೂ ಜಯ
ಮಸೂದೆಯು ಈಗ ಮತಕ್ಕಾಗಿ ಸೆನೆಟ್‌ಗೆ ಹೋಗುತ್ತದೆ. 100 ಸದಸ್ಯರ ಸೆನೆಟ್‌ನಲ್ಲಿ ಡೆಮಾಕ್ರಾಟ್‌ಗಳು 50 ಸ್ಥಾನಗಳನ್ನು ಹೊಂದಿದ್ದಾರೆ. ಈ ಕಾನೂನು ಜಾರಿಗೆ 10 ರಿಪಬ್ಲಿಕನ್ ಮತಗಳು ಬೇಕಾಗುತ್ತದೆ.
ಕಳೆದ ವಾರ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಗರ್ಭಪಾತ ಕ್ರಮವನ್ನು ರಕ್ಷಿಸಲು ಸದನವು ಎರಡು ಮಸೂದೆಗಳನ್ನು ಅಂಗೀಕರಿಸಿತು. ಇದನ್ನೂ ಓದಿ: ರೂಪಾಯಿ ಮೌಲ್ಯ ಪಾತಾಳಕ್ಕೆ – 1 ಡಾಲರ್ = 80.13 ರೂ.
ತಮ್ಮ ಇಷ್ಟದಂತೆ ಬದುಕನ್ನು ರೂಪಿಸಿಕೊಳ್ಳಲು ವಿವಾಹವಾಗುವವರಿಗೆ ಸರ್ಕಾರ ಗೌರವ ಕೊಡುತ್ತದೆ. ಅವರ ವಿವಾಹವನ್ನೂ ಪರಿಗಣಿಸುತ್ತದೆ ಎಂದು ಮಸೂದೆ ಅಂಗೀಕಾರಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ರೆಪ್. ಜೆರ್ರಿ ನಾಡ್ಲರ್ ಮಾತನಾಡಿದ್ದಾರೆ.