ನ್ಯೂಯಾರ್ಕ್: ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿ ಮೆಟ್ಟಿಲುಗಳ ಕೆಳಗಿರುವ ಕತ್ತಲೆ ಕೋಣೆಯಲ್ಲಿ ಪತ್ತೆಯಾಗಿರುವ ಅಚ್ಚರಿ ಸುದ್ದಿ ನ್ಯೂಯಾರ್ಕ್‍ನಲ್ಲಿ ಪತ್ತೆಯಾಗಿದೆ.
6 ವರ್ಷದ ಬಾಲಕಿಯನ್ನು ಕಿಂಬರ್ಲಿ ಮತ್ತು ಕಿರ್ಕ್ ನೋಡಿಕೊಳ್ಳುತ್ತಿದ್ದರು. ಆದರೆ ಅವರನ್ನು ಕಳೆದುಕೊಂಡ ನಂತರ ಬಾಲಕಿ ತಮ್ಮ ಪೋಷಕರ ಜೊತೆ ಇದ್ದಳು. ಆದರೆ 2019ರಲ್ಲಿ ಬಾಲಕಿ ಕಾಣೆಯಾಗಿದ್ದು, ಪೋಷಕರೇ ದೂರು ಕೊಟ್ಟಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ಬಾಲಕಿ ಮೊದಲು ಕಣ್ಮರೆಯಾದ ಸ್ಥಳದಿಂದ 150 ಮೈಲುಗಳಷ್ಟು(240 ಕಿಮೀ) ಹುಡುಕಾಡಿದ್ದರು. ನ್ಯೂಯಾಕ್ ನ ಸ್ಪೆನ್ಸರ್ ಪಟ್ಟಣದಲ್ಲಿರುವ ಬಾಲಕಿ ಮನೆಯಲ್ಲಿಯೂ ಹುಡುಕಾಟ ನಡೆಸಿದ್ದರು. ಆದರೆ ಬಾಲಕಿ ಬಗ್ಗೆ ಸಣ್ಣ ಸುಳಿವು ಸಹ ಪೊಲೀಸರಿಗೆ ತಿಳಿಯಲಿಲ್ಲ. ಇದನ್ನೂ ಓದಿ: KSRTC ಬಸ್-ಬೈಕ್ ಮುಖಾಮುಖಿ ಡಿಕ್ಕಿ – ಇಬ್ಬರು ಕಾರ್ಮಿಕರ ಸಾವು!
ಪೊಲೀಸರಿಗೆ ಅನುಮಾನ ಹೆಚ್ಚಾಗಿದ್ದು, ಮನೆಯಲ್ಲಿದ್ದ ಸ್ಟೆಪ್ ಬೋರ್ಡ್‍ಗಳನ್ನು ತೆಗೆದು ನೋಡಿದಾಗ ಅಲ್ಲಿ ನೆಲಮಾಳಿಗೆ ಇರುವುದು ತಿಳಿದುಬಂದಿದೆ. ನಂತರ ಅವರು ಕೆಳಗೆ ಹೋಗಿ ನೋಡಿದಾಗ ಅಪಹರಣಕೊಳ್ಳಗಾದ ಬಾಲಕಿ ಕತ್ತಲೆಯಿಂದ ಇದ್ದ, ನೀರು ತುಂಬಿಕೊಂಡಿದ್ದ ಕೋಣೆಯಲ್ಲಿ ಅವಳನ್ನು ಬಂಧಿಸಲಾಗಿತ್ತು ಎಂಬುದು ತಿಳಿದುಬಂದಿದೆ.
ಪೆÇಲೀಸ್ ಮುಖ್ಯಸ್ಥ ಜೋಸೆಫ್ ಈ ಕುರಿತು ಮಾತನಾಡಿದ್ದು, ಬಾಲಕಿಯ ಅಪಹರಣಕಾರರು ಆಕೆಯನ್ನು ಇಷ್ಟು ದಿನ ಹೇಗೆ ಅಡಗಿಸಿಟ್ಟಿದ್ದರು ಎಂಬುದೇ ದಿಗ್ಭ್ರಮೆಯಾಗಿದೆ. ನಾವು ಮನೆಯನ್ನು ಹಲವು ಬಾರಿ ತನಿಖೆ ಮಾಡಿದ್ದೆವು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ
ತಂದೆ ಸೇರಿದಂತೆ ಅವರ ಮನೆಯವರು ಎರಡು ವರ್ಷಗಳ ಕಾಲ ಬಾಲಕಿ ಎಲ್ಲಿದ್ದಾಳೆ ಎಂಬ ಸುಳಿವನ್ನು ಯಾರಿಗೂ ನೀಡಿರಲಿಲ್ಲ. ಯಾವಾಗಲೂ ಅವರು ನಮಗೆ ತಮ್ಮ ಮಗಳು ಎಲ್ಲಿದ್ದಾಳೆಂದು ತಿಳಿದಿಲ್ಲ ಎಂದು ಸುಳ್ಳು ಹೇಳಿದರು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಮದುವೆಗೂ ಮುನ್ನ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವಧು – ವೀಡಿಯೋ ವೈರಲ್
ಬಾಲಕಿ ಆರೋಗ್ಯವಾಗಿದ್ದಾಳೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಪ್ರಸ್ತುತ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಬಾಲಕಿಯ ಪೋಷಕರ ಮೇಲೆಯೇ ಆರೋಪ ಕೇಳಿಬರುತ್ತಿದ್ದು, ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.