ವಾಷಿಂಗ್ಟನ್: ಹೆಚ್-1ಬಿ ವೀಸಾ (H-1B Visa) ಶುಲ್ಕ ಏರಿಸಿದ ಅಮೆರಿಕ ಇದೀಗ ವಲಸಿಗರ ಕೆಲಸದ ಪರವಾನಗಿಯ ಸ್ವಯಂ ನವೀಕರಣ ವ್ಯವಸ್ಥೆಯನ್ನು ರದ್ದುಗೊಳಿಸಿದೆ.
ಅಮೆರಿಕದ (America) ಗೃಹ ಭದ್ರತಾ ಇಲಾಖೆ ವಲಸೆ ಕಾರ್ಮಿಕರ ಉದ್ಯೋಗಾಧಿಕಾರ ದಾಖಲೆಗಳ ಸ್ವಯಂಚಾಲಿತ ನವೀಕರಣ ವ್ಯವಸ್ಥೆಯನ್ನು ರದ್ದುಪಡಿಸಿದೆ. ಇದರ ಪರಿಣಾಮ ಭಾರತೀಯ ವಲಸಿಗರ ಮೇಲೆ ಸಾಧ್ಯತೆ ಇದೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿದ ಟ್ರಂಪ್
ಹೊಸ ನಿಯಮದ ಪ್ರಕಾರ, ಅಕ್ಟೋಬರ್ 30 ರಿಂದ ಅಥವಾ ಅದರ ನಂತರ ತಮ್ಮ ಎಂಪ್ಲಾಯ್‌ಮೆಂಟ್ ಅಥಾರಿಟಿ ಡಾಕ್ಯುಮೆಂಟ್ (EADs) ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವವರು ಇನ್ನು ಮುಂದೆ ಸ್ವಯಂಚಾಲಿತ ವಿಸ್ತರಣೆಗೆ ಅರ್ಹರಾಗಿರುವುದಿಲ್ಲ.
ಇನ್ನು, ಆರು ವರ್ಷಗಳ ನಂತರ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿದ್ದಾರೆ. ಈ ವೇಳೆ ಚೀನಾ ವಸ್ತುಗಳ ಮೇಲೆ ಹೇರಿರುವ 57% ರಷ್ಟು ಟ್ಯಾರಿಫ್ ಅನ್ನು 47% ಗೆ ಇಳಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ.

