ವಾಷಿಂಗ್ಟನ್: ಕುತ್ತಿಗೆಗೆ ಟೈರ್ ಸಿಕ್ಕಿಕೊಂಡು ಸುಮಾರು ಎರಡು ವರ್ಷಗಳ ಕಾಲ ಒದ್ದಾಡುತ್ತಿದ್ದ ಕಡವೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.
Advertisement
ಸುಮಾರು ಎರಡು ವರ್ಷಗಳಿಂದ ಟೈರ್ ಕತ್ತಿಗೆ ಸಿಕ್ಕಿಕೊಂಡು ಕಡವೆ ಕಷ್ಟ ಪಡುತ್ತಿತ್ತು. ಅದನ್ನು ಈಗ ಕೊಲೊರಾಡೋ ವನ್ಯಜೀವಿ ಅಧಿಕಾರಿಗಳು ತೆಗೆದು ಬಂಧನದಿಂದ ಮುಕ್ತಗೊಳಿಸಿದ್ದಾರೆ.
Advertisement
The saga of the bull elk with a tire around its neck is over. Thanks to the residents just south of Pine Junction on CR 126 for reporting its location, wildlife officers were able to free it of that tire Saturday.
Story: https://t.co/WHfkfPuAck
????’s courtesy of Pat Hemstreet pic.twitter.com/OcnceuZrpk
— CPW NE Region (@CPW_NE) October 11, 2021
Advertisement
ವನ್ಯಜೀವಿ ಅಧಿಕಾರಿಗಳು 2019 ರ ಜುಲೈನಲ್ಲಿ ಮೊದಲು ಟೈರಿನೊಂದಿಗೆ ಮರಿ ಕಡವೆಯನ್ನು ನೋಡಿದ್ದರು. ನಂತರ ಟೈರ್ ಅನ್ನು ತೆಗೆಯಲು ಸುಮಾರು 2 ವರ್ಷಗಳಿಂದ ಕಡವೆಯನ್ನು ಹುಡುಕುತ್ತಿದ್ದರು. ಇದು 600 ಪೌಂಡ್(270 ಕಿಲೋ)ಇದ್ದು, ಟೈರ್ ತೆಗೆದ ನಂತರ 35 ಪೌಂಡ್ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪೋಕ್ಸೋ ಆರೋಪಿ ಠಾಣೆಯಿಂದ್ಲೇ ಎಸ್ಕೇಪ್ – ನಾಲ್ವರು ಪೊಲೀಸರು ಸಸ್ಪೆಂಡ್
Advertisement
ಟೈರ್ ಅನ್ನು ತೆಗೆಯುವ ವೇಳೆ ಕಡವೆಗೆ ಸ್ವಲ್ಪ ಗಾಯವಾಗಿದೆ. ಅದನ್ನು ಹೊರತು ಪಡಿಸಿದರೆ ಕಡವೆ ಚೆನ್ನಾಗಿದೆ ಎಂದು ವನ್ಯಜೀವಿ ಅಧಿಕಾರಿ ಸ್ಕಾಟ್ ಮುರ್ಡೋಕ್ ಹೇಳಿದ್ದಾರೆ.
ಕಡವೆಗೆ 4 ವರ್ಷ ವಯಸ್ಸಾಗಿದೆ. ಮರಿಯಾಗಿದ್ದಾಗ ಕಡವೆ ಏನಕ್ಕದ್ದರೂ ತಲೆಯನ್ನು ಉಜ್ಜುತ್ತಾವೆ. ಅದೇ ರೀತಿಯಾಗಿ ಟೈರ್ಗೆ ತಲೆಯನ್ನು ಉಜ್ಜಿದ್ದು, ಆಗ ಸಿಲುಕಿಕೊಂಡಿರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಂದೇ ಬಿಟ್ಟ