ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಅಲ್‌ಕೈದಾ ಉಗ್ರ ಸಂಘಟನೆ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಕಾಬೂಲ್‌ನ ನಿವಾಸದ ಬಾಲ್ಕನಿಯಲ್ಲಿ ಝವಾಹಿರಿಯನ್ನು ಡ್ರೋನ್ ದಾಳಿಯ ಮೂಲಕ ಹತ್ಯೆ ಮಾಡಲಾಗಿದೆ. ಅಫ್ಘಾನಿಸ್ತಾನದಲ್ಲಿ ನಮ್ಮ ಪಡೆಗಳು ಈಗ ಇಲ್ಲ ಎಂದು ಅಮೆರಿಕ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಒಪ್ಪಿಗೆ ಸಿಗಬೇಕಾದರೆ ಮಾನವ ಹಕ್ಕು ಗೌರವಿಸಿ: ತಾಲಿಬಾನ್‍ಗೆ UN ಖಡಕ್ ಎಚ್ಚರಿಕೆ
Advertisement
Advertisement
ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಆಯ್ಮಾನ್ ಅಲ್ ಝವಾಹಿರಿ, ಒಸಾಮಾ ಬಿಲ್ ಲಾಡೆನ್ ನಂತರದಲ್ಲಿ ಅಲ್‌ಖೈದಾ ಮುಖ್ಯಸ್ಥನಾಗಿದ್ದ. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ ದಾಳಿಯ ಪ್ರಮುಖ ಶಂಕಿತ ಸಂಚುಕೋರನೂ ಆಗಿದ್ದನು. ಜೊತೆಗೆ ಜಾಗತಿಕ ಭಯೋತ್ಪಾದನಾ ಜಾಲದ ಪ್ರಮುಖ ಆದರ್ಶವಾದಿಯಾಗಿದ್ದ ಎಂದು ಹೇಳಲಾಗಿದೆ. ಇದನ್ನೂ ಓದಿ: ಆಕಾಶದಲ್ಲಿ ಮಿಂಚಿ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ಚೀನಾ ರಾಕೆಟ್
Advertisement
2011ರಲ್ಲಿ ಅಮೆರಿಕದ ಮೇಲಿನ ದಾಳಿಯ ನಂತರ ಝವಾಹಿರಿ ಅಲ್‌ಕೈದಾ ಗುಂಪಿನ ಅಧ್ಯಕ್ಷತೆ ವಹಿಸಿದ್ದ. ಈತನ ನಾಯಕತ್ವದಿಂದಾಗಿ ಜಿಹಾದಿಗಳ ಚಳವಳಿಯಲ್ಲಿ ಮುಂದಾಳತ್ವ ವಹಿಸಿ ಇರಾಕ್ ಮತ್ತು ಸಿರಿಯಾಗಳಲ್ಲಿ ಹೆಚ್ಚಿನ ಭೂ ಪ್ರದೇಶವನ್ನು ವಶಪಡಿಸಿಕೊಂಡಿದ್ದರಿಂದ, ಇವರ ನಾಯತ್ವ ಹಿಂಪಡೆಯಲಿಲ್ಲ.
Advertisement
ಝವಾಹಿರಿಯು ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಇದ್ದನು. ಇದು 2020ರಲ್ಲಿ ದೋಹಾದಲ್ಲಿ ಅಮೆರಿಕದ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂದರ್ಭದಲ್ಲಿ ತಾಲಿಬಾನ್ ಜತೆ ಮಾಡಿಕೊಂಡಿದ್ದ ಒಪ್ಪಂದದ ಸ್ಪಷ್ಟ ಉಲ್ಲಂಘನೆ. ಆತನ ವಿರುದ್ಧದ ಕಾರ್ಯಾಚರಣೆಗೆ ಅಂತಿಮ ಅನುಮೋದನೆ ನೀಡಿದ್ದೆ. ಇದೀಗ ನ್ಯಾಯ ಒದಗಿಸಲಾಗಿದೆ. ಉಗ್ರ ಸಂಘಟನೆ ನಾಯಕ ಇನ್ನಿಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವೈಟ್‍ಲಿಫ್ಟರ್ ‘ಅಚಿಂತಾ ಶೆಯುಲಿ’ – ಮೋದಿಯಿಂದ ಅಭಿನಂದನೆ
2021ರ ಆಗಸ್ಟ್ 31ರಂದು ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಿಂದ ವಾಪಸ್ಸಾದ ಬಳಿಕ ಅಮೆರಿಕವು ಅಲ್ಲಿ ನಡೆಸಿದ ಮೊದಲ ದಾಳಿ ಇದಾಗಿದೆ. ಮೂಲತಃ ಈಜಿಪ್ಟ್ನವನಾಗಿದ್ದ ಝವಾಹಿರಿ ಕೈರೊದಲ್ಲಿ ಬಾಲ್ಯ ಕಳೆದಿದ್ದ. ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕನಾಗಿದ್ದ ಆತ, ನಂತರ ಹಿಂಸಾತ್ಮಕ ಮೂಲಭೂತವಾದದಲ್ಲಿ ತೊಡಗಿಕೊಂಡಿದ್ದ. 2001ರ ಸೆಪ್ಟೆಂಬರ್ 11ರ ದಾಳಿ ಬಳಿಕ ತಲೆಮರೆಸಿಕೊಂಡಿದ್ದ. ಒಸಾಮಾ ಬಿನ್ ಲಾಡೆನ್‌ನಲ್ಲಿ ಅಮೆರಿಕದ ವಿಶೇಷ ಪಡೆಗಳು 2011ರಲ್ಲಿ ಹತ್ಯೆ ಮಾಡಿದ ಬಳಿಕ ಅಲ್‌ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಝವಾಹಿರಿ. ಆತನ ಸುಳಿವು ನೀಡಿದವರಿಗೆ 2.5 ಕೋಟಿ ಡಾಲರ್ ಇನಾಮು ಘೋಷಿಸಲಾಗಿತ್ತು.