ನವದೆಹಲಿ: ಭಾರತಕ್ಕೆ 31 ʻMQ9B ಡ್ರೋನ್ʼ (MQ-9B Sea Guardian Drones) ಹಾಗೂ ಸಂಬಂಧಿತ ಮಿಲಿಟರಿ ಉಪಕರಣಗಳನ್ನು ಮಾರಾಟ ಮಾಡಲು ಅಮೆರಿಕ ಅನುಮೋದಿಸಿದೆ. US ರಕ್ಷಣಾ ಸಚಿವಾಲಯದ ಭದ್ರತಾ ಸಹಕಾರ ಏಜೆನ್ಸಿಯು ಸಂಭವನೀಯ ಉಪಕರಣಗಳ ಮಾರಾಟದ ಕುರಿತು ಅಮೆರಿಕ ಸಂಸತ್ತಿಗೆ (US Congress) ಸರ್ಕಾರ ತಿಳಿಸಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ಭಾರತ 31 MQ-9B ಸ್ಕೈ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸಲು ಪ್ರಸ್ತಾಪಿಸಲಾಗಿತ್ತು. ಭಾರತ ಖರೀದಿಸಲಿರುವ 31 ಡ್ರೋನ್‌ಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಬಳಸಲಿದ್ದು, ಇದರ ಅಂದಾಜು ವೆಚ್ಚ 3.99 ಶತಕೋಟಿ ಡಾಲರ್ ನಷ್ಟು ಆಗಲಿದೆ. ಇದನ್ನೂ ಓದಿ: ಎಲೆಕ್ಷನ್ ಬಜೆಟ್‌ನಲ್ಲಿ ಪುಕ್ಕಟೆ ಯೋಜನೆಗಳಿಲ್ಲ – ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ? ಕಳೆದ ವರ್ಷ ಎಷ್ಟಿತ್ತು?
Advertisement
Advertisement
ಭಾರತ ಸರ್ಕಾರವು 31 MQ-9B ಸ್ಕೈ ಗಾರ್ಡಿಯನ್ ಡ್ರೋನ್ ಖರೀದಿಸಲು ವಿನಂತಿಸಿದೆ. ಇದರೊಂದಿಗೆ 161 ಎಂಬೆಡೆಡ್ ಗ್ಲೋಬಲ್ ಪೊಸಿಷನಿಂಗ್ ಮತ್ತು ಇನರ್ಷಿಯಲ್ ನ್ಯಾವಿಗೇಷನ್ ಸಿಸ್ಟಮ್ಸ್ (EGIs), 35 L3 RIO ಗ್ರಾಂಡೆ ಕಮ್ಯುನಿಕೇಷನ್ಸ್ ಇಂಟೆಲಿಜೆನ್ಸ್ ಸೆನ್ಸರ್ ಸೂಟ್ಸ್, 170 AGM-114R ಹೆಲ್‌ಫೈರ್ ಕ್ಷಿಪಣಿಗಳು, 16 M36E9 ಹೆಲ್ಫೈರ್ ಕ್ಯಾಪ್ಟಿವ್ ಏರ್ ಟ್ರೈನಿಂಗ್ ಕ್ಷಿಪಣಿಗಳು (CATM), ಲೈವ್ ಫ್ಯೂಜ್ ಜೊತೆಗೆ 310 ಜಿಬಿಯು-39B/B ಲೇಸರ್ ಸಣ್ಣ ವ್ಯಾಸದ ಬಾಂಬ್‌ಗಳು (LSDB) ಸೇರಿದಂತೆ ಬಿಡಿ ಭಾಗಗಳು ಸೇರಿದಂತೆ ಹಲವು, ದುರಸ್ತಿ ಉಪಕರಣಗಳನ್ನ ಖರೀದಿಸಲು ಮುಂದಾಗಿದೆ. ಇದಕ್ಕೆ ಸರಿಸುಮಾರು 3.99 ಶತಕೋಟಿ ಡಾಲರ್‌ನಷ್ಟು ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ.
Advertisement
Advertisement
ಈ ಉದ್ದೇಶಿತ ಮಾರಾಟವು ಯುಸ್ ಹಾಗೂ ಭಾರತೀಯ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸಲು ಸಹಾಯಕವಾಗಲಿದೆ ಹಾಗೂ ರಾಜಕೀಯ ಸ್ಥಿರತೆ ಕಾಯ್ದುಕೊಳ್ಳಬಹುದಾಗಿದೆ. ಯುನೈಟೆಡ್ ಸ್ಟೇಟ್ಸ್‌ನ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಉದ್ದೇಶಗಳನ್ನು ಬೆಂಬಲಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಸೀದಿ ಸಮಿತಿ
ಆಕ್ರಮಣಕಾರಿ ಡ್ರೋನ್ ವಿಶೇಷತೆ ಏನು?
ವಿಶ್ವದಾದ್ಯಂತ ಆಕ್ರಮಣಕಾರಿ ಕಾರ್ಯಾಚರಣೆಗೆ ಈ ಡ್ರೋನ್ ಹೆಸರು ವಾಸಿಯಾಗಿದೆ. ಲೇಸರ್-ನಿರ್ದೇಶಿತ ನಾಲ್ಕು ಹೆಲ್‌ಫೈರ್ ಕ್ಷಿಪಣಿಗಳು ಮತ್ತು 450 ಕೆಜಿ ಬಾಂಬ್‌ಗಳನ್ನು ಸಹ ಸಾಗಿಸಬಲ್ಲದು. ಭಾರತ ಮತ್ತು ಚೀನಾದ ಗಡಿ ರೇಖೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಜೊತೆಗೆ ಹಿಂದೂ ಮಹಾ ಸಾಗರ ಪ್ರದೇಶಗಳಲ್ಲಿ ಇದು ಸಮರ್ಥವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಶತ್ರು ಸೇನೆಗಳ ಆಕ್ರಮಣದ ಬಗ್ಗೆ ಎಚ್ಚರಿಸುತ್ತದೆ. ಸತತ 40 ಗಂಟೆ ಹಾರಾಡುವ ಸಾಮರ್ಥ್ಯ ಹೊಂದಿದೆ.
ಭಾರತಕ್ಕೆ ಏನು ಪ್ರಯೋಜನ?
MQ9B ಡ್ರೋನ್ ಖರೀದಿಯಿಂದ ಭಾರತ ತನ್ನ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲಿದೆ. ಸಮುದ್ರ ಮಾರ್ಗಗಳಲ್ಲಿ ಮಾನವ ರಹಿತ ಗಸ್ತು ಸಕ್ರೀಯಗೊಳಿಸುತ್ತದೆ. ಮಿಲಿಟರಿ ವ್ಯವಸ್ಥೆಯಲ್ಲಿ ಮತ್ತಷ್ಟು ಆಧುನಿಕತೆ ತರಲಿದೆ. ಸಶಸ್ತ್ರ ಪಡೆಗಳ ಬಲ ಮತ್ತಷ್ಟು ಹೆಚ್ಚಾಗಲಿದೆ.
ಭಾರತೀಯ ನೌಕಾಪಡೆಯು, 2020 ರಲ್ಲಿ, ಹಿಂದೂ ಮಹಾಸಾಗರದಲ್ಲಿ ಕಣ್ಗಾವಲು ಕಾರ್ಯಾಚರಣೆಗಳನ್ನು ಕೈಗೊಳ್ಳಲು ಯುಎಸ್‌ನಿಂದ ಎರಡು MQ-9B ಸೀ-ಗಾರ್ಡಿಯನ್ ಡ್ರೋನ್‌ಗಳನ್ನು ಒಂದು ವರ್ಷಕ್ಕೆ ಗುತ್ತಿಗೆಗೆ ತೆಗೆದುಕೊಂಡಿತ್ತು. ನಂತರ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಯಿತು. MQ-9B ಡ್ರೋನ್‌ಗಳಲ್ಲಿ ಎರಡು ರೂಪಾಂತರಗಳಿವೆ ಸೀಗಾರ್ಡಿಯನ್ ಮತ್ತು ಸ್ಕೈಗಾರ್ಡಿಯನ್. ಇವು ಯುಎಸ್‌ನ ಜನರಲ್ ಅಟಾಮಿಕ್ಸ್ ಏರೊನಾಟಿಕಲ್ ಸಂಸ್ಥೆಯು ಈ ಡ್ರೋನ್‌ಗಳನ್ನು ತಯಾರಿಸಲಿದೆ. ಇದನ್ನೂ ಓದಿ: ಅಮೆರಿಕದಿಂದ ಇರಾನ್ ಸೇನಾಧಿಕಾರಿ ಹತ್ಯೆ- ಡೆಡ್ಲಿ ಡ್ರೋನ್ ವಿಶೇಷತೆ ಏನು? ಬೆಲೆ ಎಷ್ಟು?- ವಿಡಿಯೋ ನೋಡಿ