ವಾಷಿಂಗ್ಟನ್: ಉಕ್ರೇನ್ ಮೇಲಿನ ರಷ್ಯಾ ಯುದ್ಧವನ್ನು ಖಂಡಿಸಿ ರಷ್ಯಾದ ಅನಿಲ, ತೈಲ ಸೇರಿ ಎಲ್ಲಾ ಬಗೆಯ ಆಮದುಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
Advertisement
ನಮ್ಮ ಅನೇಕ ಯೂರೋಪಿಯನ್ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರು ನಮ್ಮೊಂದಿಗೆ ಸೇರುವ ಸ್ಥಿತಿಯಲ್ಲಿ ಇಲ್ಲದಿರಬಹುದು. ಆದರೆ ನಾವು ಈ ನಿಷೇಧದ ತಿಳಿವಳಿಕೆಯೊಂದಿಗೆ ಮುಂದುವರಿಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುದ್ಧ ನಿಲ್ಲಿಸಲು 2 ಷರತ್ತುಗಳನ್ನು ಉಕ್ರೇನ್ ಮುಂದಿಟ್ಟ ರಷ್ಯಾ
Advertisement
ನಾವು ಇತಿಹಾಸದಲ್ಲಿ ಆರ್ಥಿಕ ನಿರ್ಬಂಧಗಳ ಅತ್ಯಂತ ಮಹತ್ವದ ಪ್ಯಾಕೇಜ್ ಅನ್ನು ಜಾರಿಗೊಳಿಸುತ್ತಿದ್ದೇವೆ. ಇದು ರಷ್ಯಾದ ಆರ್ಥಿಕತೆಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತಿದೆ ಎಂದಿದ್ದಾರೆ.
Advertisement
Advertisement
ನಾವು ರಷ್ಯಾದ ತೈಲ, ಅನಿಲ ಮತ್ತು ಇಂಧನ ಆಮದುಗಳನ್ನು ನಿಷೇಧಿಸುತ್ತಿದ್ದೇವೆ. ಯುಎಸ್ ಬಂದರುಗಳಲ್ಲಿ ರಷ್ಯಾದ ತೈಲವು ಇನ್ನು ಮುಂದೆ ಸ್ವೀಕಾರಾರ್ಹವಲ್ಲ. ಅಮೆರಿಕದ ಜನರು ಪುಟಿನ್ ಅವರಿಗೆ ಮತ್ತೊಂದು ಪ್ರಬಲ ಹೊಡೆತವನ್ನು ನೀಡುತ್ತಾರೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್ʼ ಹೀರೋ